ಹಾವು-ಮುಂಗೂಸಿಯಂತಿದ್ದ ಇಬ್ಬರು ಮಧ್ಯೆ ಇದೀಗ ಕದನ ವಿರಾಮ ಘೋಷಿಸಿದಂತಿದೆ. ಅತ್ತ ರೇಣುಕಾಚಾರ್ಯ ಶಾಂತವಾಗುತ್ತಿದ್ದಂತೆ ಇತ್ತ ಯತ್ನಾಳ್ ಅವರು, ನೋಡಿದ್ರಾ ನನ್ನ ಪವರ್ ಎನ್ನುವಂತೆ ಮಾತನಾಡಲು ಶುರು ಮಾಡಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷರ ನೇಮಕ ಹಾಗೂ ತಮ್ಮ ಕುರಿತು ರೇಣುಕಾಚಾರ್ಯ ಸಾಫ್ಟ್ ಕಾರ್ನರ್ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರದಲ್ಲಿ ಪ್ರತಿಕ್ರಿಯೆ ನೀಡಿದ ಯತ್ನಾಳ ಅವರು, ಉಚ್ಚಾಟನೆ ಮಾಡುತ್ತೇನೆ ಎರಡು ದಿನದಲ್ಲಿ ಯತ್ನಾಳ್ ಉಚ್ಚಾಟನೆ ಖಚಿತ ಎನ್ನುತ್ತಿದ್ದರು ಈಗ ಯಾಕೆ ಹೀಗೆ ಹೇಳುತ್ತಿದ್ದಾರೆ? ಎಂದು ಪ್ರಶ್ನೆ ಮಾಡಿದ್ದಾರೆ.