ಇತ್ತೀಚಿನ ದಿನಗಳಲ್ಲಿ ರೈತರು ಕೃಷಿಯಲ್ಲಿ ಹೊಸ ಪ್ರಯೋಗಳನ್ನು ಮಾಡುತ್ತಿದ್ದಾರೆ. ಸಾಂಪ್ರದಾಯಿಕ ಬೆಳೆಗಳಲ್ಲಿ ಹೆಚ್ಚು ಲಾಭ ಸಿಗದ ಕಾರಣ ವಾಣಿಜ್ಯ ಬೆಳೆಗಳತ್ತಾ ವಾಲುತ್ತಿದ್ದಾರೆ. ಗುಜರಾತ್, ಸೌರಾಷ್ಟ್ರದ ರೈತರೂ ಕೂಡ ಸಾಂಪ್ರದಾಯಿಕ ಬೆಳೆಗಳ ಬದಲಿಗೆ ಉತ್ತಮ ತರಕಾರಿ-ಹಣ್ಣುಗಳ ಕೃಷಿ ಮಾಡಿ ಉತ್ತಮ ಆದಾಯ ಕಂಡುಕೊಂಡಿದ್ದಾರೆ.
ಅಮ್ರೇಲಿ ಜಿಲ್ಲೆಯ ಸಾವರಕುಂಡ್ಲಾ ತಾಲೂಕಿನ ಜೇಜಾಡ್ ಗ್ರಾಮದ ಹರೇಶಭಾಯಿ ದೇಗದ ಅವರು ಕಿತ್ತಳೆ ಕೃಷಿಯಲ್ಲಿ ಯಶಸ್ವಿಯಾಗಿ,ಪ್ರಗತಿಪರ ರೈತ ಎಂದು ಗುರುತಿಸಿಕೊಂಡಿದ್ದಾರೆ.
ಅಮ್ರೇಲಿ ಜಿಲ್ಲೆ ಸಾಮಾನ್ಯವಾಗಿ ಶುಷ್ಕ ಮತ್ತು ಬಿಸಿ ವಾತಾವರಣವನ್ನು ಹೊಂದಿದೆ. ಹಾಗಾಗಿ ಇಲ್ಲಿ ಕಿತ್ತಳೆ ಕೃಷಿ ಸುಲಭವಲ್ಲ. ಇಳುವರಿ ಬಹಳ ಕಡಿಮೆ. ಹಾಗಾಗಿ ರೈತರು ಈ ಕೃಷಿಗೆ ಕೈ ಹಾಕಿರಲಿಲ್ಲ. ಆದರೆ ಈಗ ಅಮ್ರೇಲಿಯಲ್ಲಿ ಕಿತ್ತಳೆ ಕೃಷಿ ಹೆಚ್ಚಾಗಿ ಕಂಡಿ ಬರುತ್ತಿದೆ.
ಹರೀಶ್ ಎಂಬ ರೈತ ಮಹಾರಾಷ್ಟ್ರದಿಂದ ಕಿತ್ತಳೆ ಸಸಿಗಳನ್ನು ತಂದು ಚೆನ್ನಾಗಿ ಆರೈಕೆ ಮಾಡಿದ್ದರಿಂದ ಕೊನೆಗೂ ಕಿತ್ತಳೆ ಗಿಡಗಳು ಫಲ ನೀಡಲು ಶುರು ಮಾಡಿದವು.
ಹರೇಶ್ ಭಾಯಿ ಅವರು ತಮ್ಮ ಹೊಲದಲ್ಲಿ ಮ್ಯಾಂಡರಿನ್ ಕಿತ್ತಳೆ ತಳಿಯ ಗಿಡಗಳನ್ನು ನೆಟ್ಟು, ಬಿಸಿಲಿನಿಂದ ಚೆನ್ನಾಗಿ ರಕ್ಷಿಸಿದ ನಂತರ, ಅಂತಿಮವಾಗಿ ಕಿತ್ತಳೆ ಗಿಡಗಳು ಫಲ ನೀಡಿದವು. ಹರೇಶಭಾಯಿಯವರು ಸವರಂದ್ಲದ ಪ್ರಗತಿಪರ ಕೃಷಿಕರಾಗಿ ಅಪಾರ ಖ್ಯಾತಿಯನ್ನು ಹೊಂದಿದ್ದಾರೆ. ಕೃಷಿಯಲ್ಲಿ ಹಲವು ಪ್ರಯೋಗಗಳನ್ನು ಮಾಡಿ ಯಶಸ್ಸು ಗಳಿಸಿದರು.
ತಮ್ಮ ಪ್ರಯೋಗದ ಭಾಗವಾಗಿ ಹರೇಶ್ ಭಾಯಿ ಅವರು ಮಹಾರಾಷ್ಟ್ರದಿಂದ ವಿವಿಧ ತಳಿಯ ಕಿತ್ತಳೆ ಗಿಡಗಳನ್ನು ತಂದು ನೆಟ್ಟರು. ಮೊದಲಿಗೆ ಅವರು ಅನೇಕ ಬಾರಿ ವಿಫಲರಾದರು. ಅಂತಿಮವಾಗಿ ಅವರ ಪ್ರಯತ್ನ ಫಲ ನೀಡಿತು. ಇದೀ ಕಿತ್ತಳೆ ಕೊಯ್ಲು ಆರಂಭವಾಗಿದೆ.
ಈ ಬಗೆಯ ಕಿತ್ತಳೆಯಲ್ಲಿ ಅತಿ ಹೆಚ್ಚು ನೀರಿನಂಶವಿದೆ. ಅಮ್ರೇಲಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಈ ರೀತಿಯ ಕಿತ್ತಳೆಯನ್ನು ಪ್ರಾಯೋಗಿಕವಾಗಿ ಮತ್ತು ಯಶಸ್ವಿಯಾಗಿ ಬೆಳೆಯಲಾಗಿದೆ. ಹರೇಶ್ ಭಾಯಿಅವರ ಪ್ರಯತ್ನದಿಂದ ಈಗ ಇತರ ರೈತರೂ ಕಿತ್ತಳೆ ಕೃಷಿಗೆ ಸಿದ್ಧರಾಗಿದ್ದಾರೆ.
ಕೆಲವರು ಈಗಾಗಲೇ ಕೃಷಿ ಆರಂಭಿಸಿದ್ದಾರೆ. ಹೀಗಾಗಿ ಇಲ್ಲಿನ ರೈತರು ಮುಂದೆ ಹೆಚ್ಚು ಹೆಚ್ಚು ಕಿತ್ತಳೆ ಬೆಳೆಯುವ ಸಾಧ್ಯತೆ ಇದೆ. ಅನೇಕ ರೈತರು ಹರೇಶಭಾಯಿಯಿಂದ ಕಿತ್ತಳೆ ಬೀಜವನ್ನು ಪಡೆದು ನಾಟಿ ಮಾಡುತ್ತಿದ್ದಾರೆ. ಈ ರೀತಿಯ ಬೇಸಾಯ ಮಾಡುವ ಮೊದಲು ರೈತರು ಸ್ಥಳೀಯ ಕೃಷಿ ಅಧಿಕಾರಿಗಳು, ತಜ್ಞರು ಮತ್ತು ಭೂ ವಿಜ್ಞಾನಿಗಳ ಸಲಹೆಯನ್ನು ಪಡೆಯಬೇಕು ಎನ್ನುತ್ತಾರೆ ಹರೇಶ್ ಭಾಯಿ.