ಅಬಚೂರಿನ ಪೋಸ್ಟಾಫೀಸು (ಚಲನಚಿತ್ರ)
ಅಬಚೂರಿನ ಪೋಸ್ಟಾಫೀಸು (ಚಲನಚಿತ್ರ) | |
---|---|
ಅಬಚೂರಿನ ಪೋಸ್ಟಾಫೀಸ್ | |
ನಿರ್ದೇಶನ | ಎನ್.ಲಕ್ಷ್ಮೀನಾರಾಯಣ್ |
ನಿರ್ಮಾಪಕ | ಪತ್ರೆ ಸಿ. ವಿನಾಯಕ್ |
ಪಾತ್ರವರ್ಗ | ನಾನಿ ಗಿರಿಜಾ ಸೀತಾರಾಮ್, ಬಿ.ಎಸ್.ರಾಮರಾವ್, ಶಾಂತ, ದಾಶರಥಿ ದೀಕ್ಷಿತ್ |
ಸಂಗೀತ | ವಿಜಯಭಾಸ್ಕರ್ |
ಛಾಯಾಗ್ರಹಣ | ಎನ್.ಜಿ.ರಾವ್ |
ಬಿಡುಗಡೆಯಾಗಿದ್ದು | ೧೯೭೩ |
ಚಿತ್ರ ನಿರ್ಮಾಣ ಸಂಸ್ಥೆ | ಚಿತ್ರಶಿಲ್ಪಿ |
ಇತರೆ ಮಾಹಿತಿ | ಪೂರ್ಣಚಂದ್ರ ತೇಜಸ್ವಿ ಅವರ ಕೃತಿ ಆಧಾರಿತ ಚಿತ್ರ. |
ಅಬಚೂರಿನ ಪೋಸ್ಟಾಫೀಸು ಎಂಬುದು ಪೂರ್ಣಚಂದ್ರ ತೇಜಸ್ವಿಯವರ ಕಥಾಸಂಕಲನ. ಈ ಕೃತಿಯನ್ನಾರಿಸಿ ಅದೇ ಹೆಸರಿನ ಕನ್ನಡ ಚಲನಚಿತ್ರವನ್ನು ನಿರ್ಮಿಸಲಾಗಿತ್ತು. ಈ ಕಥಾಸಂಕಲನದಲ್ಲಿ ೭ ಕಥೆಗಳಿವೆ.
ಅಬಚೂರಿನ ಪೋಸ್ಟಾಫೀಸು
ಅಬಚೂರೆಂಬ ಪುಟ್ಟ ಹಳ್ಳಿಗೂ, ದೂರದ ದಿಲ್ಲಿಗೂ ನಡುವೆ ಏಕೈಕ ಸಂಪರ್ಕ ಮಾಧ್ಯಮವೆನಿಸಿಕೊಂಡಿದ್ದ ಪೋಸ್ಟಾಫೀಸ್ ಹೇಗೆ ಬೋಬಣ್ಣನ ಅವಿವೇಕತನದಿಂದ ಮುಚ್ಚಿ ಹೋಯಿತು ಎಂಬುದು ಇಲ್ಲಿ ಚಿತ್ರಿತವಾಗಿದೆ. ಔದ್ಯೊಗಿಕ ನೈತಿಕತೆ ಇಲ್ಲದಿದ್ದರೆ ಏನಾಗುತ್ತದೆಂಬುದಕ್ಕೆ ಈ ಕಥೆ ಉತ್ತಮ ಉದಾಹರಣೆ.
ಅವನತಿ
ಕಲೆಯನ್ನು ಗುರುತಿಸುವ ಹಾಗೂ ಆಸ್ವಾದಿಸುವ ಶಕ್ತಿ ಇಲ್ಲದಿರುವ ಹಳ್ಳಿಗರ ನಡುವೆ ಗೌರಿಯ ಸೌಂದರ್ಯ ಮತ್ತು ಸೂರಾಚಾರಿಯ ಕಲೆಯು ಅವನತಿ ಹೊಂದುವುದರ ಬಗ್ಗೆ ಈ ಕಥೆಯನ್ನು ಹೆಣೆಯಲಾಗಿದೆ.
ಕುಬಿ ಮತ್ತು ಇಯಾಲ
ಜನರ ಮೂಢನಂಬಿಕೆ, ದುಷ್ಟ ರಾಜಕೀಯ ಇವುಗಳ ನಡುವೆ ಹೇಗೆ ಡಾ. ಕುಬೇರ ನಿಸ್ಸಹಾಯಕ ಮೂಕ ಪ್ರೇಕ್ಷಕನಾಗುತ್ತಾನೆ ಎಂಬುದನ್ನು ಚಿತ್ರಿಸಿದ್ದಾರೆ.
ತುಕ್ಕೋಜಿ
ಈ ಕಥೆಯು, ಗಂಡ-ಹೆಂಡತಿಯರು ತಮ್ಮ ಜಗಳಕ್ಕಾಗಿ ಮಗುವನ್ನು ಮಾಧ್ಯಮವನ್ನಾಗಿ ಮಾಡಿಕೊಂಡು, ತಮ್ಮ ತಪ್ಪುಗಳಿಗಾಗಿ ಪರಸ್ಪರ ಆರೊಪ-ಪ್ರತ್ಯಾರೋಪಗಳಲ್ಲಿ ತೊಡಗಿ ಕೆಲಸದ ಬಗ್ಗೆ ಆಸಕ್ತಿ ಕಳೆದುಕೊಂಡು ಜನರಿಂದ ನಿಂದನೆಗೆ ಒಳಗಾಗಿ ಅದರಿಂದ ಪಾಠ ಕಲಿಯುವುದಾಗಿದೆ.
ಡೇರ್ ಡೆವಿಲ್ ಮುಸ್ತಾಫ
ಇದೊಂದು ಲಘು ಹಾಸ್ಯ ಮಿಶ್ರಿತ ಕಥೆಯಾಗಿದೆ.
ತಬರನ ಕಥೆ
ಈ ಕಥೆಯು ನಮ್ಮ ಆಡಳಿತ ವ್ಯವಸ್ತೆಯ ವೈಪರಿತ್ಯ, ರಾಜಕೀಯ ಪುಡಾರಿಗಳ ಸಮಯಸಾಧಕತನ ಮತ್ತು ಬ್ರಿಟಿಷ್ ಕಾಲದ ಆಡಳಿತ ವ್ಯವಸ್ಥೆಗೂ ಹಾಗೂ ನಂತರದ ಆಡಳಿತ ವ್ಯವಸ್ಥೆಗೂ ಹಿಡಿದ ಕೈಗನ್ನಡಿಯಾಗಿದೆ.
ತ್ಯಕ್ತ
ವಿಭಿನ್ನ ಆಲೋಚನೆ ಹೊಂದಿರುವ ವ್ಯಕ್ತಿಯ ಬಗ್ಗೆ ಈ ಕಥೆಯನ್ನು ಹೆಣೆಯಲಾಗಿದೆ.