ದಶಕಗಳಿಗೂ ಹಳೆಯ ಮಸೀದಿಯ ಭಾಗವನ್ನು ರಸ್ತೆ ಅಗಲೀಕರಣಕ್ಕೆ ಬಿಟ್ಟುಕೊಟ್ಟ ಕಮಿಟಿ

0
630

ಸನ್ಮಾರ್ಗ ವಾರ್ತೆ

ತಾಮರಶ್ಶೇರಿ,ಮೇ.15: ಕಾರೊಡಿ ವರಡ್ಯಾಕ್ಕಿಲ್ ರಸ್ತೆ ಅಗಲೀಕರಣಕ್ಕೆ ದಶಕಗಳಿಗೂ ಹಳೆಯದಾದ ಕಾರೊಡಿ ಜುಮಾಮಸೀದಿಯ ಒಂದು ಭಾಗವನ್ನು ಕೆಡವಲು ಜುಮಾ ಮಸೀದಿ ಕಮಿಟಿ ಅನುಮತಿ ನೀಡಿತು.

1910ರಲ್ಲಿ ಊರ ಪ್ರಮುಖ ಮಾಹಿನ್ ಹಾಜಿ ಎಂಬವರು ಮಸೀದಿ ಕಟ್ಟಿಸಲು ಜಮೀನು ಉಚಿತವಾಗಿ ನೀಡಿದ್ದರು. ನಂತರ 1975-80ರಲ್ಲಿ ಮಸೀದಿ ಮರು ನಿರ್ಮಾಣವಾಗಿತ್ತು. ಕಾರೊಡಿಗೆ ಬಸ್ಸ್ ಸ್ಟಾಂಡ್ ಬಂತು. ನಂತರ ಮಸೀದಿ ರಸ್ತೆ ಹೆಚ್ಚು ಜನಜಂಗುಳಿಯಿಂದ ಕೂಡಿತ್ತು.

ರಸ್ತೆಯ ಒಂದು ಬದಿ ಮಸೀದಿ. ಇನ್ನೊಂದು ಕಡೆ ಅಂಗಡಿಗಳು ಇವೆ. ಬುಧವಾರ ಮಸೀದಿಯ ಒಂದು ಭಾಗವನ್ನು ಜೆಸಿಬಿಯಿಂದ ತೆರವುಗೊಳಿಸುವ ಕಾರ್ಯ ಆರಂಭವಾಗಿದೆ.