ಅದರಲ್ಲೂ ಹಿಂದೂ ಮುಸ್ಲಿಮ್
ಧರ್ಮಗಳ ಪರದೆ ಕಟ್ಟಿದೆವು,
ಅತ್ಯಾಚಾರಿಗಳ ಪರ ನಿಂತೆವು,
ಅತ್ಯಾಚಾರ ಬಲಾತ್ಕಾರಕ್ಕಿಂತ
ನಮ್ಮ ಧರ್ಮವೇ ನಮಗೆ ಹೆಚ್ಚಾಯಿತು!
ಹಿಂದೂ ಮುಸ್ಲಿಮ್
ಮತಾಂಧ ಬೊಬ್ಬೆಯ ಮಧ್ಯೆ ಹೆಣ್ಮಕ್ಕಳ
ಕೂಗು ಯಾತನೆ ರೋದನೆ ಕೇಳದಾಯಿತು…
ಪ್ರತಿದಿನ ನ್ಯಾಯ ಸತ್ಯ ಧರ್ಮ
ಅತ್ಯಾಚಾರ ಬಲಾತ್ಕಾರವಾಗುತ್ತಿದೆ,
ನಿರ್ಭಯಳೊಂದಿಗೆ
ನವನವೀನ ಮುದ್ದು ಹೆಸರಿನ
ಮುದ್ದು ಮಗಳು ಜೋಡಣೆಯಾಗುತ್ತಿದೆ…
ತನ್ನ ಮಗಳು
ತನ್ನ ಸೋದರಿಯಾದರೆ
ಈ ಸಾವು ನ್ಯಾಯವೇ ಎಂದಷ್ಟೇ ಕೇಳುತ್ತಿದ್ದೇವೆ?
ಕ್ಯಾಂಡಲ್ ಹೊತ್ತಿಸಿ ಕೈಕಟ್ಟಿ ಕೂರುತ್ತಿದ್ದೇವೆ?
ನ್ಯಾಯವೇ..
ವ್ಯವಸ್ಥೆಯೇ…
ರಾಜಕಾರಣಿಗಳೇ…
ತಮಗೂ ಸೋದರಿ ಮಗಳು ಪತ್ನಿ
ಇದ್ದಾರೆಂಬುದ ಮರೆಯಬೇಡಿ…
ಹಣ ಜಾತಿ ಧರ್ಮ ಪಕ್ಷ ದವನೆಂದು
ಈ ಲೋಕದಿ ರಕ್ಷಣೆ ಪಡೆಯಬಹುದು,
ಸತ್ತ ನಂತರ ಇಂಚಿಂಚಿನ
ಕಾರೋಬಾರಿನ ಲೆಕ್ಕ ಕೊಡಲಿಕ್ಕಿರುವುದು… -ಜಲೀಲ್ ಮುಕ್ರಿ