ಇನ್ನೆಷ್ಟು ರಕ್ತ ಬೇಕು… (ಕವನ)

0
613

ಮಸೂದನ
ದೇಹದಿಂದ ಹರಿದದ್ದೂ
ಅದೇ ಕೆಂಪು ನೆತ್ತರು
ಅದೇ ನೋವು ಅದೇ ಆಕ್ರಂದನ..

ಪ್ರವೀಣನ
ದೇಹದಿಂದ ಹರಿದದ್ದೂ
ಅದೇ ನೆತ್ತರು
ಅದೇ ನೋವು ಅದೇ ಆಕ್ರಂದನ..

ಅತ್ತದ್ದು, ನೊಂದದ್ದು
ಕಳೆದುಕೊಂಡದ್ದು
ಅದೇ ಅಮ್ಮ
ಅದೇ ಅಪ್ಪ ಅದೇ ಕುಟುಂಬ..

ಕೊಂದದ್ದು
ಹಿಂದೂವೂ ಅಲ್ಲ
ಮುಸ್ಲಿಂ ಕೂಡ ಅಲ್ಲ
ರಾಕ್ಷಸರು,ಮತಾಂಧರು..!

ಆಡಳಿತವೇ
ನಿನಗಿನ್ನೆಷ್ಟು ಬಲಿ ಬೇಕು
ನಾಡು ವಿಕಾಸವಾಗಲು….!

ನ್ಯಾಯಾಲಯವೇ
ನಿನಗಿನ್ನೆಷ್ಟು ರಕ್ತ ಬೇಕು
ನ್ಯಾಯವ ಶುದ್ಧೀಕರಣ ಗೊಳಿಸಲು….!

ಸ್ವಾರ್ಥ ಅಧಿಕಾರವೇ
ಇನ್ನೆಷ್ಟು ಮಾನವ ಎಲುಬು ಬೇಕು
ಕುರ್ಚಿಯ ಗಟ್ಟಿಗೊಳಿಸಲು
ಇನ್ನೆಷ್ಟು ರಕ್ತ ಬೇಕು
ಕುರ್ಚಿಗೆ ಬಣ್ಣ ಕೊಡಲು.

ಕವಿ: ಜಲೀಲ್ ಮುಕ್ರಿ