“Virat, I am your father”: ಕಿಂಗ್‌ ಕೊಹ್ಲಿಯನ್ನ ಕಟುವಾಗಿ ಟೀಕಿಸಿದ ಆಸ್ಟ್ರೇಲಿಯನ್ ಪತ್ರಿಕೆ!!

Virat I am your Father: ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದ್ದು ಒಂದೆಡೆಯಾದರೆ, ಆಸ್ಟ್ರೇಲಿಯನ್‌ ಪತ್ರಿಕೆಗಳು ವಿರಾಟ್‌ ಕೊಹ್ಲಿಯನ್ನು ಅತ್ಯಂತ ಹೀನಾಯವಾಗಿ ಟೀಕಿಸಿವೆ. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. 

'Virat I am your Father': ಆಸ್ಟ್ರೇಲಿಯಾದ ಯುವ ಕ್ರಿಕೆಟ್ ಆಟಗಾರ ಸ್ಯಾಮ್ ಕೊನ್‌ಸ್ಟಸ್ ಭುಜಕ್ಕೆ ವಿರಾಟ್ ಕೊಹ್ಲಿ ಡಿಕ್ಕಿ ಹೊಡೆದಿದ್ದು ಸಖತ್‌ ಸುದ್ದಿಯಾಗಿತ್ತು. ಈ ವರ್ತನೆಯಿಂದ ಕಿಂಗ್‌ ಕೊಹ್ಲಿ ಆಸ್ಟ್ರೇಲಿಯಾದ ಮಾಧ್ಯಮಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹಲವು ಆಸ್ಟ್ರೇಲಿಯನ್ ಪತ್ರಿಕೆಗಳು ಕೊಹ್ಲಿಯನ್ನು ನೇರವಾಗಿಯೇ ತರಾಟೆಗೆ ತೆಗೆದುಕೊಂಡಿದ್ದರೆ, ಇನ್ನೂ ಕೆಲವು ಟ್ಯಾಬ್ಲಾಯ್ಡ್ ಪತ್ರಿಕೆಗಳು ತೀರಾ ಕೆಳಮಟ್ಟಕ್ಕಿಳಿದು ಅವಮಾನಿಸುತ್ತಿವೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ಮೆಲ್ಬೋರ್ನ್ ಕ್ರಿಕೆಟ್​ ಮೈದಾನದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಸರಣಿಯ ನಾಲ್ಕನೇ ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ. ಕಾಂಗರೂ ಪಡೆ ನೀಡಿದ್ದ 340 ರನ್​ಗಳ ಗುರಿ ಬೆನ್ನಟ್ಟಿದ ಭಾರತ ತಂಡ 4ನೇ ಇನ್ನಿಂಗ್ಸ್​ನಲ್ಲಿ ಕೇವಲ 155 ರನ್​ಗಳಿಗೆ ಆಲೌಟ್​ ಆಯಿತು. ಇದರೊಂದಿಗೆ 184 ರನ್​ಗಳ ಹೀನಾಯ ಸೋಲು ಕಂಡಿದ್ದು, ಐದು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಆಸ್ಟ್ರೇಲಿಯಾ 2-1 ಅಂತರದಿಂದ ಮುನ್ನಡೆ ಸಾಧಿಸಿದೆ.

2 /5

ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದ್ದು ಒಂದೆಡೆಯಾದರೆ, ಆಸ್ಟ್ರೇಲಿಯನ್‌ ಪತ್ರಿಕೆಗಳು ವಿರಾಟ್‌ ಕೊಹ್ಲಿಯನ್ನು ಅತ್ಯಂತ ಹೀನಾಯವಾಗಿ ಟೀಕಿಸಿವೆ. ಇತ್ತೀಚೆಗಷ್ಟೇ ಕೊಹ್ಲಿಯನ್ನು ಕೋಡಂಗಿಗೆ ಹೋಲಿಸಿ ಉದ್ಧಟತನ ಮೆರೆದಿದ್ದ 'ದಿ ವೆಸ್ಟ್ ಆಸ್ಟ್ರೇಲಿಯನ್' ಪತ್ರಿಕೆ ಭಾನುವಾರದ ಸಂಚಿಕೆಯಲ್ಲಿ ಸ್ಯಾಮ್ ಕೊನ್‌ಸ್ಟಸ್ ಅವರ ದೊಡ್ಡ ಫೋಟೊ ಹಾಕಿ ಅದಕ್ಕೆ 'Virat I am your Father' (ಹೇ ವಿರಾಟ್ ನಾನು ನಿನ್ನ ತಂದೆ) ಅಂತಾ ಹೆಡ್‌ಲೈನ್ ನೀಡಿದೆ.

3 /5

ಭಾನುವಾರದ ಸಂಚಿಕೆಯ ಚಿತ್ರವನ್ನು ಆ ಪತ್ರಿಕೆಯ ಕ್ರೀಡಾ ಪುಟದ ಸಂಪಾದಕ ಜಾಕಬ್ ವಾಡೆಲ್ ತಮ್ಮ ಟ್ವಿಟರ್‌ ಹಂಚಿಕೊಂಡಿದ್ದಾರೆ. ಇದಕ್ಕೆ ಲಕ್ಷಾಂತರ ಕ್ರೀಡಾಭಿಮಾನಿಗಳು ಹಾಗೂ ಕೊಹ್ಲಿ ಅಭಿಮಾನಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಟೀಕಿಸುವಷ್ಟು ಟೀಕಿಸಿದರೆ ಅದು ಸರಿ, ಆದರೆ ಈ ರೀತಿ ಹೇಯವಾಗಿ ನಡೆದುಕೊಳ್ಳುವುದು ಸರಿಯಲ್ಲ. ಈ ರೀತಿಯ ಹೆಡ್‌ಲೈನ್ ಪ್ರಕಟಿಸಿರುವ 'ದಿ ವೆಸ್ಟ್ ಆಸ್ಟ್ರೇಲಿಯನ್' ಪ್ರತಿಕೆ ಯಾವ ಮಟ್ಟದಲ್ಲಿದೆ ಅನ್ನೋದನ್ನ ತೋರಿಸಿದೆ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.    The back page of tomorrow’s The Sunday Times.@westaustralian @TheWestSport pic.twitter.com/2Oi1c1wx2a — Jakeb Waddell (@JakebWaddell) December 28, 2024

4 /5

ಆಸೀಸ್‌ ಯುವ ಆಟಗಾರ ಸ್ಯಾಮ್ ಕೊನ್‌ಸ್ಟಸ್ ಭುಜಕ್ಕೆ ಪರಸ್ಪರ ಡಿಕ್ಕಿಯಾಗಿ ವಾಗ್ವಾದ ನಡೆಸಿದ್ದ ಕೊಹ್ಲಿಗೆ ದಂಡ ಹಾಗೂ ಡಿಮೆರಿಟ್ ಪಾಯಿಂಟ್ ವಿಧಿಸಲಾಗಿತ್ತು. ಆದರೆ ಇಂದು 'ದಿ ವೆಸ್ಟ್ ಆಸ್ಟ್ರೇಲಿಯನ್' ಪತ್ರಿಕೆಯು ತೀರಾ ಕೆಳಮಟ್ಟಕ್ಕಿಳಿದು ಕೊಹ್ಲಿಯನ್ನು ಹೀಯಾಳಿಸಿದೆ.

5 /5

19 ವರ್ಷದ ಯುವ ಆಟಗಾರನ ಪದಾರ್ಪಣೆ ಪಂದ್ಯದಲ್ಲಿ ಅತಿರೇಕದ ವರ್ತನೆ ತೋರಿದ ಕೊಹ್ಲಿಯನ್ನು ಹೇಡಿ ಅಂತಾ ಜರಿಯಲಾಗಿತ್ತು. ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಕಟುವಾಗಿ ಟೀಕಿಸಲಾಗಿದೆ. ಈ ಮೊದಲು ಆಸ್ಟ್ರೇಲಿಯಾದ ಕ್ರಿಕೆಟ್ ವಿಶ್ಲೇಷಕರು ಹಾಗೂ ಮಾಜಿ ಆಟಗಾರರು ಕೊಹ್ಲಿ ವರ್ತನೆಯನ್ನು ಖಂಡಿಸಿ ಶಿಸ್ತು ಕ್ರಮಕ್ಕೆ ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಆಸ್ಟ್ರೇಲಿಯಾ ಮಾಧ್ಯಮಗಳಲ್ಲೂ ಕೊಹ್ಲಿ ವಿರುದ್ಧ ಮಾನಹಾನಿಯ ಲೇಖನ ಪ್ರಕಟಗೊಂಡಿದೆ.