ಮಧ್ಯ ಪ್ರದೇಶ
ಮಧ್ಯ ಪ್ರದೇಶ | |
ರಾಜಧಾನಿ - ಸ್ಥಾನ |
ಭೋಪಾಲ - |
ಅತಿ ದೊಡ್ಡ ನಗರ | ಇಂದೋರ್ |
ಜನಸಂಖ್ಯೆ (೨೦೦೧) - ಸಾಂದ್ರತೆ |
೬೦,೩೮೫,೧೧೮ (೭th) - ೧೯೬/km² |
ವಿಸ್ತೀರ್ಣ - ಜಿಲ್ಲೆಗಳು |
೩೦೮,೧೪೪ km² (೨nd) - ೪೮ |
ಸಮಯ ವಲಯ | IST (UTC+5:30) |
ಸ್ಥಾಪನೆ - ರಾಜ್ಯಪಾಲ - ಮುಖ್ಯ ಮಂತ್ರಿ - ಶಾಸನಸಭೆ (ಸ್ಥಾನಗಳು) |
ನವೆಂಬರ್ ೧, ೧೯೫೬ - ರಾಮೇಶ್ವರ್ ಠಾಕೂರ್ - ಶಿವರಾಜ್ ಸಿಂಗ್ ಚೌಹಾನ್ - Unicameral (೨೩೧) |
ಅಧಿಕೃತ ಭಾಷೆ(ಗಳು) | ಹಿಂದಿ |
Abbreviation (ISO) | IN-MP |
ಅಂತರ್ಜಾಲ ತಾಣ: www.mp.nic.in | |
ಮಧ್ಯ ಪ್ರದೇಶ ರಾಜ್ಯದ ಮುದ್ರೆ |
ಮಧ್ಯ ಪ್ರದೇಶ ಹೆಸರು ಸೂಚಿಸುವಂತೆ ಮಧ್ಯ ಭಾರತದಲ್ಲಿರುವ ಒಂದು ರಾಜ್ಯ. ಇದರ ರಾಜಧಾನಿ ಭೋಪಾಲ. ನವಂಬರ್ ೧, ೨೦೦೦ದಲ್ಲಿ ಮಧ್ಯ ಪ್ರದೇಶದಿಂದ ಛತ್ತೀಸ್‍ಘಡವನ್ನು ರಚಿಸುವ ಮೊದಲು ಇದು ಭಾರತದಲ್ಲಿಯೇ ಅತ್ಯಂತ ದೊಡ್ಡ ರಾಜ್ಯವಾಗಿತ್ತು.
ವಿಭಾಗಗಳು
ಮಧ್ಯ ಪ್ರದೇಶ ರಾಜ್ಯದಲ್ಲಿ ಒಟ್ಟು ೪೫ ಜಿಲ್ಲೆಗಳಿದ್ದು ಅವುಗಳನ್ನು ೮ ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಆ ಎಂಟು ವಿಭಾಗಗಳೆಂದರೆ :
೧. ಭೂಪಾಲ್ : ಭೂಪಾಲ್, ರ್ಯಾಸೆನ್,ರಾಜ್ ಗರ್, ಸೆಹೋರ್, ಮತ್ತು ವಿದಿಶಾ ಜಿಲ್ಲೆಗಳು.
೨. ಗ್ವಾಲಿಯರ್ : ಅಶೋಕನಗರ, ಧಾತಿಯಾ, ಗುಣಾ, ಗ್ವಾಲಿಯರ್, ಮತ್ತು ಶಿವಪುರಿ ಜಿಲ್ಲೆಗಳು.
೩. ಇಂದೋರ್ : ಬಾರ್ವಾನಿ, ಬುರ್ಹಾನ್ ಪುರ್, ಧಾರ್, ಇಂದೋರ್, ಝುಬುವಾ,ಖಾಂಡ್ವಾ, ಆಲಿರಾಜ್ ಪುರ್, ಮತ್ತು ಖಾರ್ಗೋಣೆ ಜಿಲ್ಲೆಗಳು.
೪. ಜಬಲ್ಪುರ್: ಬಾಲ್ ಘಾಟ್, ಛಿಂದ್ ವಾರಾ, ಜಬಲ್ ಪುರ್, ಕಟ್ನಿ, ಮಾಂಡ್ಲಾ, ನರಸಿಂಗ್ ಪುರ್,ಮತ್ತು ಸಿಯೋನಿ ಜಿಲ್ಲೆಗಳು.
೫. ರೇವಾ : ರೇವಾ, ಸತ್ನಾ, ಸೀಧೀ, ಮತ್ತು ಸಿಂಗ್ರೌಲಿ ಜಿಲ್ಲೆಗಳು.
೬. ಸಗರಂದ್ : ಛತ್ತರ್ ಪುರ್, ದಾಮೋಹ್, ಪನ್ನಾ, ಸಾಗರ್, ಮತ್ತು ಟಿಕಮ್ ಗರ್ ಜಿಲ್ಲೆಗಳು.
೭. ಉಜ್ಜಯಿನಿ : ದೇವಾಸ್, ಮಂದ ಸೌರ್, ನೀಮಚ್, ರತ್ಲಾಂ, ಶಾಜಾಪುರ್, ಮತ್ತು ಉಜ್ಜಯಿನಿ ಜಿಲ್ಲೆಗಳು.
೮. ಶಹಡೋಲ್ : ಶಾಹ್ ದೋಲ್, ಅನುಪ್ಪುರ್, ಡಿಂಡೋರಿ, ಮತ್ತು ಉಮಾರಿಯಾ ಜಿಲ್ಲೆಗಳು.
ಭಾಷೆ
'ಹಿಂದಿ' ಮಧ್ಯಪ್ರದೇಶದ ಪ್ರಮುಖ ಭಾಷೆ. ಆ ಭಾಷೆಯ ಜನಪದ ರೂಪಗಳೂ ಇಲ್ಲಿ ಪ್ರಚಲಿತವಾಗಿವೆ. ಮಾಲ್ವಾದ ಮಾಲ್ವಿ, ನಿಮಾರ್ ನ ನಿಮಾಡಿ, ಬುಂದೇಲ್ ಖಂಡ್ ನ ಬುಂದೇಲಿ, ಬಾಗೇಲ್ ಖಂಡ್ ನ ಬಾಗೇಲಿ ಮತ್ತು ಅವಧಿ-ಇವೆಲ್ಲಾ ಹಿಂದೀ ಭಾಷೆಯ ರೂಪಾಂತರಗಳು.ಭಿಲೋಡಿ (ಭಿಲ್ ಭಾಷೆ), ಗೊಂಡಿ, ಕೋರ್ಕು, ಕಾಲ್ಟೋ (ನಿಹಾಲಿ)- ಇವು ಮಧ್ಯಪ್ರದೇಶದ ಕೆಲವು 'ಆದಿವಾಸಿ ಭಾಷೆಗಳು'. ಮಧ್ಯ ಪ್ರದೇಶದ ಹಲವು ಭಾಗಗಳಲ್ಲಿ ಎರಡು ಶತಮಾನಕ್ಕೂ ಹೆಚ್ಚು ಕಾಲ ಮರಾಠರು ಆಡಳಿತ ನಡೆಸಿದ್ದ ಕಾರಣ 'ಮರಾಠಿ' ಮಾತಾಡುವ ಜನ ಹೆಚ್ಚಾಗಿದ್ದಾರೆ. ಭೂಪಾಲ್ ನ ಆಸುಪಾಸಿನಲ್ಲೂ 'ಆಫ್ಘಾನಿಸ್ತಾನ', ಮತ್ತು 'ವಾಯವ್ಯ ಪಾಕಿಸ್ತಾನ'ದಿಂದ ವಲಸೆಬಂದು ನೆಲೆಸಿರುವ ಸಾಕಷ್ಟು ಬುಡಕಟ್ಟಿನ ಜನರಿದ್ದಾರೆ. ಅವರು, ’ಸರ್ಯಾಕಿ’ ಮತ್ತು ’ಪಾಶ್ತೋ’ ಭಾಷೆಯನ್ನು ಆಡುತ್ತಾರೆ.
ಸಾಹಿತ್ಯ
ಮಧ್ಯಪ್ರದೇಶದ 'ಉಜ್ಜಯನಿ'ಯಲ್ಲಿ ಪ್ರಸಿದ್ಧ ಸಂಸ್ಕೃತ ಕವಿ, 'ಕಾಳಿದಾಸ'ನು ಜೀವಿಸಿದ್ದನೆಂಬ (ಕ್ರಿ.ಶ ೩೭೫ ರಿಂದ ೪೧೫ ರವರೆಗೆ) ಪ್ರತೀತಿಯಿದೆ. ಮಹಾ ಜ್ಯೋತಿಷಿ, 'ವರಾಹ ಮಿಹಿರ' ಸಹಿತ ಉಜ್ಜಯಿನಿಯಲ್ಲಿ ವಾಸಿಸಿದ್ದರು. ಧಾರಾದ ರಾಜ 'ಭೋಜರಾಜನ ಆಸ್ಥಾನ'ದಲ್ಲಿ ಕವಿಗಳಿಗೆ ವಿಶೇಷ ಮನ್ನಣೆಯನ್ನು ಕೊಟ್ಟು ಆಶ್ರಯವನ್ನು ಕೊಡಲಾಗಿತ್ತು. ರಾಜಾ ಭೋಜ್ ಸ್ವತಃ ಒಬ್ಬ ಶ್ರೇಷ್ಟ ಕವಿಯಾಗಿದ್ದರು. ಹಲವಾರು ಕೃತಿಗಳನ್ನು ರಚಿಸಿದ್ದಾರೆ. 'ಧಾರ್ ನಗರ'ದಲ್ಲಿ ಭೋಜರಾಜರು ನಿರ್ಮಿಸಿದ 'ಸಂಸ್ಕೃತ ಪಾಠಶಾಲೆ' ಇಂದಿಗೂ ಇದೆ. ಶಾಲೆಯ ಗೋಡೆಗಳ ಮೇಲೆ ಸಂಸ್ಕೃತ ಭಾಷೆಯಲ್ಲಿ ಕೆತ್ತಿದ ಹಲವಾರು ಶ್ಲೋಕಗಳಿವೆ. ಮಧ್ಯಪ್ರದೇಶ ಇನ್ನೂ ಹಲವಾರು ಖ್ಯಾತ ಪಂಡಿತರಿಗೆ ತವರುಮನೆ. ಅವರುಗಳಲ್ಲಿ ಪ್ರಮುಖರು, 'ಧನಪಾಲ', 'ಭರ್ತುಹರಿ', 'ಆಶಾಧಾರ', 'ಮನತುಂಗ', 'ಬ್ರಹ್ಮಗುಪ್ತ', 'ಭಾಸ್ಕರಾಚಾರ್ಯ', ಮುಂತಾದವರು. 'ಚಂದ್ರಗುಪ್ತ ವಿಕ್ರಮಾದಿತ್ಯ ಮಹಾರಾಜ' ನ ಕಾಲದಲ್ಲಿ, 'ಧನ್ವಂತರಿ', 'ಕ್ಷಪಣಕ' (ಸಿದ್ಧಸೇನ) 'ಅಮರ ಸಿಂಹ', 'ಸಂಕು', 'ವೇತಾಲಭಟ್ಟ', 'ಘಟಕರ್ಪರ', 'ಕಾಳಿದಾಸ', 'ವರಾಹಮಿಹಿರ', ಮತ್ತು 'ವರರುಚಿ' ಎಂಬ ನವರತ್ನಗಳಿದ್ದರು. 'ಆಧುನಿಕ ಕಾಲದ ಕೆಲವು ಹೆಸರಾಂತ ಕವಿಗಳು', 'ಮಾಖನ್ ಲಾಲ್', 'ಚತುರ್ವೇದಿ', 'ಶರದ್ ಜೋಶಿ', 'ಗಜಾನನ', 'ಮಾಧವ ಮುಕ್ತಿ', 'ಬೊಧ' ಮತ್ತು 'ವಿನೋದ್ ಕುಮಾರ್', 'ಶುಕ್ಲಾ' ಮುಂತಾದವರು.
ನೃತ್ಯ-ಸಂಗೀತ
'ಮಧ್ಯ ಪ್ರದೇಶ' ಆದಿವಾಸಿಗಳ ರಾಜ್ಯ. ಯಾವುದೇ ಪರಕೀಯ ಆಚಾರ, ಸಂಸ್ಕೃತಿಗಳ ಸೋಂಕುತಾಗದೆ ಶತಮಾನಗಳ ಕಾಲದಿಂದಲೂ ತನ್ನ ದೇಶಿ ಸಂಕೃತಿಯ ಸ್ವಂತಿಕೆಯನ್ನು ಮಧ್ಯ ಪ್ರದೇಶ, ಕಾಪಾಡಿಕೊಂಡು ಬಂದಿದೆ. ಈ ಪ್ರದೇಶದ ಹಬ್ಬ ಹರಿದಿನಗಳಲ್ಲಿ ಮತ್ತು ಜಾತ್ರೆಗಳಲ್ಲಿ ಪುರಾತನಕಾಲದ ಅಪೂರ್ವ ಹಾಡು-ಕುಣಿಗಳಲ್ಲಿ ಶತಮಾನದ ಸಂಪ್ರದಯದ ಛಾಯೆಯನ್ನು ಕಾಣಬಹುದು. ಕರ್ಮಾ ನೃತ್ಯ'ಮಧ್ಯ ಪ್ರದೇಶ' ದ, ವಾಯವ್ಯ ಭಾಗದಲ್ಲಿ ನೆಲೆಸಿರುವ ಗೊಂಡ ಜನಸಮುದಾಯ, ಹಾಗೂ ಒರಾಂವ್ ಪಂಗಡ ಗಳ ಕುಣಿತ,'ಮಧ್ಯ ಪ್ರದೇಶ'ದ 'ಅತಿಪ್ರಾಚೀನ ಆದಿವಾಸಿ ನೃತ್ಯ ಪ್ರಕಾರ'ವೆಂದು ಪರಿಗಣಿಸಲ್ಪಟ್ಟಿದೆ. ದೇಶದ ಇತರೆ ಭಾಗಗಳಲ್ಲಿ ಇದರ ಭಿನ್ನ ರೂಪಗಳನ್ನು ಕಾಣಬಹುದು. ಈ ನೃತ್ಯಗಳನ್ನು ನಾವು ಹೆಚ್ಚಾಗಿ ಶರತ್ಕಾಲದ ಆರಂಭದಲ್ಲಿ ಇಲ್ಲವೇ ಮಳೆಗಾಲದ ಕೊನೆಯಲ್ಲಿ ಪ್ರದರ್ಶನಗೊಳ್ಳುವುದನ್ನು ಕಾಣಬಹುದು.
ಅರಣ್ಯ ಸಂಪತ್ತು
'ಮಧ್ಯಪ್ರದೇಶ,' ಅಪಾರ ಪ್ರಾಕೃತಿಕ ನಿಸರ್ಗ ಸಂಪನ್ನು ಹೊಂದಿದ ರಾಜ್ಯವಾಗಿದೆ. ಭಾರತದ ೧೨.೪ % ಪ್ರತಿಶತ್ ಅರಣ್ಯ ಇರುವುದು ಈ ರಾಜ್ಯದಲ್ಲೇ. ರಾಜ್ಯದ ೩೧ % ಪ್ರತಿಶತ್, (೯೫,೨೨೧ ಚ.ಕೀ.ಮೀ) ಭಾಗ ಅರಣ್ಯಗಳು ಆಕ್ರಮಿಸಿವೆ. ಮಧ್ಯ, ಪೂರ್ವ, ಮತ್ತು ದಕ್ಷಿಣ ಭಾಗಗಳಲ್ಲಿ ದಟ್ಟ ಅಡವಿಗಳಿದ್ದರೆ, ಉತ್ತರ ಮತ್ತು ಈಶಾನ್ಯ ಭೂಭಾಗಗಳಲ್ಲಿ, ಕುರುಚಲು ಗಿಡಗಳ ಪ್ರದೇಶಗಳಿವೆ.
ರಾಷ್ಟ್ರೀಯ ಉದ್ಯಾನಗಳು
ಒಟ್ಟು ೯ ರಾಷ್ಟ್ರೀಯ ಉದ್ಯಾನಗಳಿವೆ. ಭಾಂದವ್ ಘರ್, ಕಾನ್ಹಾ, ಸತ್ಪುರಾ, ಸಂಜಯ್, ಮಾಧವ್, ವನ್ ವಿಹಾರ್, ಮಾಂಡ್ಲಾ, ಪನ್ನಾ ಮತ್ತು ಪೆಂಚ್ ರಾಷ್ಟ್ರೀಯ ಉದ್ಯಾನಗಳು. ಇವಲ್ಲದೆ ಹಲವಾರು ಪ್ರಾಕೃತಿಕ ಸಂರಕ್ಷಣಾ ತಾಣಗಳಿವೆ. ಮಂಡ್ಲಾ ರಾಷ್ತ್ರೀಯ ಉದ್ಯಾನ ಸಸ್ಯ ಪಳೆಯುಳಿಕೆಗಳಿಗೆ ಸುಪ್ರಸಿದ್ಧವಾಗಿದೆ.
ತೆಂಡು ಎಲೆಗಳ ಕೈಗಾರಿಕೆ
'ಬೀಡಿ ಉದ್ಯಮ'ಕ್ಕೆ ಇವು ಅತ್ಯವಶ್ಯಕ. 'ತೆಂಡು ಎಲೆಗಳು' ಮಧ್ಯಪ್ರದೇಶದ ಅಡವಿಗಳಲ್ಲಿ ವಿಪುಲ ಮಾತ್ರದಲ್ಲಿ ದೊರೆಯುವುದರಿಂದ 'ಬೀಡಿ ಕೈಗಾರಿಕೆ' ಮಂಚೂಣಿಯಲ್ಲಿದೆ.
ಮಧ್ಯಪ್ರದೇಶದ ಖಾದ್ಯಗಳು
ವಿಶಾಲವಾದ ರಾಜ್ಯಗಳಲ್ಲಿ ಒಂದಾದ 'ಮಧ್ಯಪ್ರದೇಶ'ದ ಖಾದ್ಯಗಳು ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಬದಲಾಗುತ್ತವೆ. ಗೋಧಿ ಮತ್ತು ಮಾಂಸಾಹಾರದ ಖಾದ್ಯಗಳು ಉತ್ತರ ಹಾಗೂ ಪಶ್ಚಿಮಭಾಗದ ಮಧ್ಯಪ್ರದೇಶದಲ್ಲಿ ಹೆಚ್ಚು ಬಳಕೆಯಲ್ಲಿದೆ. ದಕ್ಷಿಣ ಹಾಗೂ ಪೂರ್ವ ಭಾಗಗಳಲ್ಲಿ ಅಕ್ಕಿ ಮತ್ತು ಮೀನಿನ ಆಹಾರಗಳು ಹೆಚ್ಚು ಪ್ರಚಲಿತದಲ್ಲಿವೆ. ಹಾಲು ಮತ್ತು ಹಾಲಿನ ಖಾದ್ಯಗಳು ಗ್ವಾಲಿಯರ್ ಮತ್ತು ಇಂದೂರ್ ನಗರಗಳಲ್ಲಿ ಹೆಚ್ಚು ತಯಾರಿಸಲ್ಪಡುತ್ತವೆ. ಮಾಳ್ವ ಪ್ರದೇಶದ ಅಡುಗೆಯಲ್ಲಿ ಸಸ್ಯಾಹಾರಕ್ಕೆ ಹೆಚ್ಚು ಪ್ರಾಶಸ್ತ್ಯಕೊಡುತ್ತಾರೆ. ಇಲ್ಲಿನ ಖಾದ್ಯಗಳಲ್ಲಿ ರಾಜಾಸ್ತಾನಿ ಮತ್ತು ಗುಜರಾತ್ ರಾಜ್ಯದ ಖಾದ್ಯಗಳ ಶೈಲಿಯ ಮಿಶ್ರಣವಿದೆ. ಜೋಳದೆ ತೆನೆ, ಮತ್ತು ಹಾಲಿನಿಂದ ಸಿದ್ಧವಾದ ಆಹಾರಪದಾರ್ಥಗಳಲ್ಲಿ ಅತಿ ಹೆಸರುವಾಸಿಯಾದ, 'ಭುಟ್ಟೇಕಿ ಕೀಸ್', 'ಗೋಧಿ ಹುಡ್', ಮತ್ತು ಮೊಸರಿನಲ್ಲಿ ತಯಾರಾದ 'ಚಕ್ಕೀ ಕಿ ಶಾಕ್' ಈ ಪ್ರದೇಶದ ಸ್ವಾದಿಷ್ಟ ತಿನಸುಗಳಲ್ಲಿ ಪ್ರಮುಖವಾಗಿ ಪರಿಗಣಿಸಲ್ಪಟ್ಟಿವೆ. ಸಿಹಿತಿಂಡಿಗಳ ಪಟ್ಟಿ ಹೀಗಿದೆ.
- ಮಾವ ಭಾಟಿ,
- ಖೋಪ್ರಾ ಪಾಕ್,
- ಶ್ರೀ ಖಂಡ್,
- ಮಾಲ್ ಪುವಾ,
ಭೂಪಾಲ್ ನಲ್ಲಿ ಮಾಂಸ ಮತ್ತು ಮೀನಿನಿಂದ ತಯಾರಾದ ಖಾದ್ಯಗಳು ಹೆಚ್ಚು ಬೇಡಿಕೆಯಲ್ಲಿವೆ.
- ರೋಗನ್ ಜೋಶ್,
- ಭೋಪಾಲೀ ಮುರ್ಗ್ ರೆಜಾಲಾ,
- ಪನೀರ್ ರೆಜಾಲಾ,
- ಗೋಷ್ಟ್ ಕೂರ್ಮಾ,
- ಮುರ್ಗ್ ಹರಾ ಮಸಾಲಾ ಭತ್,
- ಮುರ್ಗ್ ನಿಜಾಮೀ ಕೂರ್ಮಾ,
- ಖೀಮಾ,
- ಬಿರ್ಯಾನಿ
- ಪಿಲಾಫ್,(ಪುಲಾವ್)
- ಶಮ್ಮಿ ಕಬಾಬ್,
- ಸೀಖ್ ಕಬಾಬ್ ಇತ್ಯಾದಿ.
ಬಾಫ್ಲಾ ರೊಟ್ಟಿ
'ದಾಲ್' ಜೊತೆಗೆ ಬಡಿಸಿಕೊಂಡು ಮೆಲ್ಲುವ 'ರೊಟ್ಟಿ' ಇಲ್ಲಿನ ವಿಶೇಷ ಊಟಗಳಲ್ಲೊಂದು.
'ಸುಲ್ಸಿ' ಎಂಬ ಬಗೆಯ ಮದ್ಯ
'ಮಹುವಾ ಮರದ ಹೂವು'ಗಳಿಂದ ತಯಾರಾಗುವ ಮದ್ಯವನ್ನು 'ಖರ್ಜೂರ' ಹಣ್ಣಿನಿಂದ ತಯಾರಿಸುತ್ತಾರೆ. 'ಪಾನಪ್ರಿಯ'ರಿಗೆ ಇದೊಂದು ಮುದಕೊಡುವ ಪೇಯವಾಗಿದೆ.
ರಸ್ತೆಬದಿಯ ಗಾಡಿಗಳಲ್ಲಿ ತಂದು ಮಾರುವ ಖಾದ್ಯಗಳು
'ಇಂದೂರ್ ನಗರ'ದಲ್ಲಿ ಇಂತಹ ಖಾದ್ಯಗಳನ್ನು ಮಾರುವ ಗಾಡಿಗಳು ಎಲ್ಲೆಡೆ ಲಭ್ಯವಿವೆ. ಈ ನಗರದ 'ಸರಾಫಾ ಬಜಾರ್', 'ಛಪ್ಪನ್ ದೂಕಾನ್',ಮುಂತಾದ ರಸ್ತೆಗಳಲ್ಲಿ 'ಪೋಹಾ ಜಿಲೇಬಿ', 'ಭುಟ್ಟೇ ಕೀ ಕೀಸ್', ಮುಂತಾದ ರುಚಿರುಚಿಯಾದ ಖಾದ್ಯಗಳು ಉಪಲಬ್ಧವಿವೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |