ಉಕ್ಕಡಗಾತ್ರಿ
This article needs more links to other articles to help integrate it into the encyclopedia. (ಡಿಸೆಂಬರ್ ೨೦೧೫) |
ಉಕ್ಕಡಗಾತ್ರಿಯು ಹರಿಹರ ತಾಲೂಕಿನ ಸರಹದ್ದಿನಲ್ಲಿದೆ. ಇಲ್ಲಿನ ಕರಿಬಸವೇಶ್ವರ (ಅಜ್ಜಯ್ಯ) ದೇವಸ್ಥಾನವು ಪ್ರಸಿದ್ಧವಾಗಿದೆ.
ಇದು ತುಂಗಭದ್ರ ನದಿಯ ದಡದಲ್ಲಿದೆ,, ಇದು ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಪ್ರಸಿದ್ದ ದೇವಾಲಯಗಳಲ್ಲಿ ಒಂದಾಗಿದೆ.. ಇದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಗಡಿಭಾಗದಲ್ಲಿ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿಗೆ ಹೊಂದಿಕೊಂಡಿದೆ.. ಇಲ್ಲಿಗೆ ದಾವಣಗೆರೆ, ರಾಣಿಬೆನ್ನೂರು, ಹರಿಹರ,ಹೊನ್ನಾಳಿ, ಚನ್ನಗಿರಿ, ಶಿವಮೊಗ್ಗ ನಿಂದ ನೆರವಾಗಿ ಸಾರಿಗೆ ಸಂಪರ್ಕ ಹೊಂದಿದೆ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಇದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಲೇಬೆನ್ನೂರು ಹೋಬಳಿಗೆ ಸೇರಿದೆ. ಇಲ್ಲಿ ಪ್ರತಿ ಅಮವಾಸ್ಯಗೆ ಬಲು ದೊಡ್ಡ ಜಾತ್ರೆ ನಡೆಯುತ್ತದೆ. ಇಲ್ಲಿಗೆ ಕರ್ನಾಟಕ ಅಲ್ಲದೆ ಇತರ ರಾಜ್ಯಗಳಿಂದಲೂ ಭಕ್ತಾದಿಗಳು ಬರುತ್ತಾರೆ.
ತುಂಗಾಭದ್ರಾ ನದಿಯ ದಡದಲ್ಲಿರುವ ಈ ಪುಣ್ಯಕ್ಷೇತ್ರದಲ್ಲಿ, ಸ್ನಾನಮಾಡಿ ದೇವರ ದರ್ಶನ ಪಡೆದರೆ ಕಷ್ಟಗಳಿಂದ ಮುಕ್ತಿ ಹೊಂದಬಹುದೆಂಬ ನಂಬಿಕೆಯಿಂದ ಭಕ್ತಾದಿಗಳು ನದಿಯಲ್ಲಿ ಮಿಂದೇಳುತ್ತಾರೆ.
ಇದು ಶಕ್ತಿಶಾಲಿ ಪುಣ್ಯಕ್ಷೇತ್ರ...
ಇಲ್ಲಿಗೆ ಭೇಟಿ ಕೊಟ್ರೆ ಸಾಕು ಕಷ್ಟಗಳೆಲ್ಲಾ ಬಗೆಹರಿಯುತ್ತವೆ ಅನ್ನೋ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಅಜ್ಜಯ್ಯ ಸ್ವಾಮಿಯ ದರ್ಶನ ಪಡೆಯಲು ಲಕ್ಷಾಂತರ ಮಂದಿ ಭೇಟಿಕೊಡ್ತಾರೆ. ಹೀಗೆ ಭೇಟಿ ಕೊಟ್ರೆ ದೆವ್ವ, ಭೂತದ ಕಾಟದಿಂದ ಮುಕ್ತಿ ಪಡೆಯುತ್ತಾರೆ ಅನ್ನೋ ನಂಬಿಕೆ ಕೂಡ ಭಕ್ತರಲ್ಲಿ ಮನೆಮಾಡಿದೆ.
ಉಕ್ಕಡಗಾತ್ರಿ ಕ್ಷೇತ್ರ ರಾಜ್ಯ ಮಾತ್ರವಲ್ಲದೆ ಹೊರರಾಜ್ಯಗಳ ಭಕ್ತರನ್ನೂ ಹೊಂದಿದೆ. ಇಲ್ಲಿಗೆ ಪ್ರತಿವರ್ಷ ಸುಮಾರು 15 ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ಕೊಡ್ತಾರೆ. ಉಕ್ಕಡಗಾತ್ರಿ ಅಜ್ಜಯ್ಯ ಸ್ವಾಮಿಯ ದರ್ಶನ ಪಡೆದ್ರೆ ತಮ್ಮ ಕಷ್ಟಗಳೆಲ್ಲಾ ಕಳೆದು ಹೋಗುತ್ವೆ ಅನ್ನೋ ನಂಬಿಕೆ ಇಲ್ಲಿಗೆ ಬರುವ ಭಕ್ತರದ್ದು. ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಬರುತ್ತಾರೆ. ಭಕ್ತರಿಗಾಗಿ ಶ್ರೀಕ್ಷೇತ್ರದಲ್ಲಿ ಸಕಲ ವ್ಯವಸ್ಥೆಗಳನ್ನೂ ಕಲ್ಪಿಸಲಾಗಿರುತ್ತದೆ.
ಇನ್ನು ಅಮವಾಸ್ಯೆಯ ದಿನ ಭಕ್ತರು ಭಾರಿ ಸಂಖ್ಯೆಯಲ್ಲಿ ನೆರೆದಿರುತ್ತಾರೆ. ಮಾನಸಿಕ ಕಾಯಿಲೆಗಳಿಂದ ಬಳಲುವ ಹಾಗೂ ದೆವ್ವ, ಭೂತ ಹಿಡಿದಿದೆ ಅನ್ನೋ ಮನಸ್ಥಿತಿಯ ಜನರಿಗೆ ಇಲ್ಲಿ ಚಿಕಿತ್ಸೆ ದೊರೆಯುತ್ತದೆ. ಜನ ಅಜ್ಜಯ್ಯ ಸ್ವಾಮಿ ದರ್ಶನ ಪಡೆದು ಕಷ್ಟಗಳಿಂದ ಮುಕ್ತರಾಗುತ್ತಾರೆ ಅನ್ನೋ ಪ್ರತೀತಿ ನೂರಾರು ವರ್ಷಗಳಿಂದ ನಡೆದುಕೊಂಡು ಬರ್ತಿದೆ.
ಉಕ್ಕಡಗಾತ್ರಿ ಜಾತ್ರೆ ಸಾಕಷ್ಟು ವೈಶಿಷ್ಠ್ಯತೆವನ್ನ ಹೊಂದಿದೆ. ಲಕ್ಷಾಂತರ ಜನರ ಆರಾಧ್ಯ ದೈವಾವಾಗಿರುವ ಅಜ್ಜಯ್ಯ ಸ್ವಾಮಿಗೆ ಒಮ್ಮೆ ನಮಸ್ಕರಿಸಿದ್ರೆ, ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು ಅನ್ನೋ ವಾಡಿಕೆ ಇದೆ. ಹೀಗಾಗಿ ಅಜ್ಜಯ್ಯ ಸ್ವಾಮಿಯ ದರ್ಶನ ಪಡೆಯಲು ಕರ್ನಾಟಕ ಅಲ್ಲದೆ ಇತರ ರಾಜ್ಯಗಳಿಂದಲೂ ಭಕ್ತಾದಿಗಳು ಆಗಮಿಸುತ್ತಾರೆ.