ವಿಷಯಕ್ಕೆ ಹೋಗು

ಉಪವಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಪವಾಸವು ಒಂದು ಅವಧಿಯವರೆಗೆ ಸ್ವಲ್ಪ ಅಥವಾ ಸಂಪೂರ್ಣ ಆಹಾರದ, ಪಾನೀಯದ, ಅಥವಾ ಎರಡರ ಇಚ್ಛೆಯುಳ್ಳ ಲಂಘನ ಅಥವಾ ಕಡಿತ. ಸಂಪೂರ್ಣ ಉಪವಾಸವನ್ನು ಸಾಮಾನ್ಯವಾಗಿ ಒಂದು ನಿಗದಿತ ಅವಧಿವರೆಗೆ, ಸಾಧಾರಣವಾಗಿ ೨೪ ಗಂಟೆಗಳವರೆಗೆ, ಅಥವಾ ಹಲವು ದಿನಗಳವರೆಗೆ, ಎಲ್ಲ ಆಹಾರ ಮತ್ತು ದ್ರವದ ಲಂಘನ ಎಂದು ವ್ಯಾಖ್ಯಾನಿಸಲಾಗುತ್ತದೆ. ಜಲ ಉಪವಾಸ ನೀರನ್ನು ಕುಡಿಯುವುದಕ್ಕೆ (ಆದರೆ ಬೇರೆ ಏನೂ ಇಲ್ಲ) ಅನುಮತಿಸುತ್ತದೆ. ಇತರ ಉಪವಾಸಗಳು ಭಾಗಶಃ ನಿರ್ಬಂಧಿತವಿರಬಹುದು, ಅಂದರೆ ನಿರ್ದಿಷ್ಟ ಆಹಾರಗಳು ಅಥವಾ ಪದಾರ್ಥಗಳನ್ನು ಸೀಮಿತಗೊಳಿಸುವುದು. ಉಪವಾಸವು ಸ್ವರೂಪದಲ್ಲಿ ಎಡೆಬಿಟ್ಟು ನಡೆಯಬಹುದು. ಉಪವಾಸ ಆಚರಣೆಗಳು ಸಂಭೋಗ ಮತ್ತು ಇತರ ಚಟುವಟಿಕೆಗಳು ಜೊತೆಗೆ ಆಹಾರವನ್ನೂ ಪ್ರತಿಬಂಧಿಸಬಹುದು.

ಉಪವಾಸದ ಅವಧಿಯಲ್ಲಿ ಹಲವು ಚಯಾಪಚಯ ಹೊಂದಾಣಿಕೆಗಳಾಗುತ್ತವೆ, ಮತ್ತು ಉಪವಾಸದ ಸ್ಥಿತಿಯನ್ನು ನಿರ್ಧರಿಸಲು ಕೆಲವು ರೋಗನಿದಾನ ಪರೀಕ್ಷೆಗಳನ್ನು ಬಳಸಲಾಗುತ್ತದೆ. ಉದಾಹರಣೆಗೆ, ಒಬ್ಬ ವ್ಯಕ್ತಿಯು ತನ್ನ ಕೊನೆ ಊಟದ ೮-೧೨ ಗಂಟೆಗಳ ನಂತರ ಉಪವಾಸ ಮಾಡುತ್ತಿದ್ದಾನೆ ಎಂದು ಅಂದುಕೊಳ್ಳಲಾಗುತ್ತದೆ. ಉಪವಾಸದ ಸ್ಥಿತಿಯೆಡೆಗೆ ಚಯಾಪಚಯ ಬದಲಾವಣೆಗಳು ಊಟದ ಹೀರಿಕೆ ನಂತರ ಆರಂಭವಾಗುತ್ತವೆ (ಸಾಮಾನ್ಯವಾಗಿ ಊಟದ ನಂತರ ೩-೫ ಗಂಟೆ ಬಿಟ್ಟು).

ರೋಗನಿದಾನ ಉಪವಾಸ ಒಂದು ಸಮಸ್ಯೆಯ ತನಿಖೆಗಾಗಿ, ಸಾಮಾನ್ಯವಾಗಿ ಸಕ್ಕರೆ ಕೊರತೆ ಕಾಯಿಲೆ, ಪರಿವೀಕ್ಷಣೆಯಡಿಯಲ್ಲಿ ನಡೆಸಲಾದ ದೀರ್ಘಕಾಲದ ಉಪವಾಸವನ್ನು (ವಯಸ್ಸನ್ನು ಆಧರಿಸಿ ೮-೭೨ ಗಂಟೆ) ಸೂಚಿಸುತ್ತದೆ. ಅನೇಕ ಜನರು ವೈದ್ಯಕೀಯ ಚಿಕಿತ್ಸಾವಿಧಾನ ಅಥವಾ ಕೋಲನಾಸ್ಕಪಿಯಂತಹ ತಪಾಸಣೆಯ ಭಾಗವಾಗಿ ಉಪವಾಸ ಮಾಡಬಹುದು.

ಉಪವಾಸ ಅನೇಕ ಧಾರ್ಮಿಕ ಆಚರಣೆಗಳ ಭಾಗವೂ ಆಗಿದೆ.

ಹಿಂದೂ ಧರ್ಮದಲ್ಲಿ

[ಬದಲಾಯಿಸಿ]

ಹಬ್ಬಗಳ ಸಂದರ್ಭದಲ್ಲಿ ಉಪವಾಸ ಮಾಡುವುದು ಅತ್ಯಂತ ಸಾಮಾನ್ಯ. ಮಹಾ ಶಿವರಾತ್ರಿ (ಬಹುತೇಕ ಜನರು ಈ ದಿನದಂದು ಕಟ್ಟುನಿಟ್ಟಾದ ಉಪವಾಸವನ್ನು ಆಚರಿಸುತ್ತಾರೆ, ಒಂದು ಹನಿ ನೀರನ್ನೂ ಸೇವಿಸುವುದಿಲ್ಲ), ನವರಾತ್ರಿಯ ಒಂಬತ್ತು ದಿನಗಳು (ವರ್ಷಕ್ಕೆ ಎರಡು ಬಾರಿ ಬರುತ್ತದೆ ಎಪ್ರಿಲ್ ಮತ್ತು ಅಕ್ಟೋಬರ್, ನವಂಬರ್‍ನಲ್ಲಿ) ಸಾಮಾನ್ಯ ಉದಾಹರಣೆಗಳಾಗಿವೆ. ಕರ್ವಾ ಚೌತ್ ಭಾರತದ ಕೆಲವು ಭಾಗಗಳಲ್ಲಿ ಆಚರಿಸಲಾದ ಒಂದು ಬಗೆಯ ಉಪವಾಸ. ಇದರಲ್ಲಿ ವಿವಾಹಿತ ಸ್ತ್ರೀಯರು ತಮ್ಮ ಗಂಡಂದಿರ ಯೋಗಕ್ಷೇಮ, ಅಭ್ಯುದಯ ಮತ್ತು ದೀರ್ಘಾಯುಷ್ಯಕ್ಕಾಗಿ ಉಪವಾಸ ಮಾಡುತ್ತಾರೆ. ಹೆಂಡತಿಯು ಚಂದ್ರನನ್ನು ಜರಡಿಯ ಮೂಲಕ ನೋಡಿದ ನಂತರ ಉಪವಾಸ ಮುರಿಯುತ್ತದೆ. ಶ್ರಾವಣ ಮಾಸದಲ್ಲಿ ಕೆಲವರು ತಮ್ಮ ಇಷ್ಟದೇವರ ಪೂಜೆಗಾಗಿ ಮೀಸಲಾದ ದಿನದಂದು ಉಪವಾಸ ಮಾಡುತ್ತಾರೆ, ಮತ್ತು ಇತರರು ತಿಂಗಳಿಡಿ ಉಪವಾಸ ಮಾಡುತ್ತಾರೆ.

"https://kn.wikipedia.org/w/index.php?title=ಉಪವಾಸ&oldid=929161" ಇಂದ ಪಡೆಯಲ್ಪಟ್ಟಿದೆ