ವಿಷಯಕ್ಕೆ ಹೋಗು

ಕಗ್ಗಲಡು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಗ್ಗಲಡು
ಕಗ್ಗಲಡು
Village

ಕಗ್ಗಲಡು ಎನ್ನುವುದು ಕರ್ನಾಟಕದ ದಕ್ಷಿಣ ಭಾಗದ ತುಮಕೂರು ಜಿಲ್ಲೆಯ ಶಿರಾ ತಾಲೂಕಿನಲ್ಲಿರುವ ಒಂದು ಹಳ್ಳಿ. ಸಿರಾ ಪಟ್ಟಣದಿಂದ ಸಿರಾ-ಚೆಂಗಾವರ ರಸ್ತೆಯಲ್ಲಿ ಸುಮಾರು ೯ ಕಿ.ಮಿ. ದೂರದಲ್ಲಿದೆ. ಈ ಹಳ್ಳಿಯಲ್ಲಿರುವ ಮರಗಳಲ್ಲಿ ಬಣ್ಣದ ಕೊಕ್ಕರೆ (painted storks) ಮತ್ತು ನಾರೇಕ್ಯಾತ ಅಥವಾ ಬೂದುಬಕ (grey herons) ಪಕ್ಷಿಗಳು ವಲಸೆ ಬಂದು ತಮ್ಮ ವಂಶಾಭಿವೃದ್ಧಿ ಮಾಡುವುದರಿಂದ ೧೯೯೯ರಿಂದ ಇದೊಂದು ಪಕ್ಷಿಧಾಮವೆಂದು ಗುರುತಿಸಲ್ಪಟ್ಟಿದೆ. ೧೯೯೯ರಲ್ಲಿ ಇಲ್ಲಿನ ಪಕ್ಷಿಧಾಮ ತುಮಕೂರಿನ ವೈಲ್ಡ್ ಲೈಫ್ ಅವೇರ್ ನೇಚರ್ ಕ್ಲಬ್ (WANC) ಎಂಬ ಸರ್ಕಾರೇತರ ಸಂಸ್ಥೆಯಿಂದ ಹೊರಜಗತ್ತಿಗೆ ಪರಿಚಯಿಸಲ್ಪಟ್ಟಿತು. 

ತಾಣದ ಇತಿಹಾಸ

[ಬದಲಾಯಿಸಿ]

ಸ್ಥಳೀಯರ ಪ್ರಕಾರ ನಾರೇಕ್ಯಾತ (grey herons) ಪಕ್ಷಿಗಳು ಇಲ್ಲಿ ೧೯೯೩ರಿಂದ ಒಂದು ಹುಣಸೇಮರದಲ್ಲಿ ಮಾತ್ರ ಗೂಡು ಕಟ್ಟುತ್ತಿದ್ದವು. ಪಕ್ಕದ ಮುದ್ದಕನಹಳ್ಳಿಯಲ್ಲಿ ಈ ಪಕ್ಷಿಗಳು ಗೂಡುಕಟ್ಟುತ್ತಿದ್ದ ಮರವೊಂದು ದುಷ್ಕರ್ಮಿಗಳಿಂದ ನಾಶವಾಗಿ ಕೆಲವು ಹಕ್ಕಿಗಳು ಕೊಲ್ಲಲ್ಪಟ್ಟ ಮೇಲೆ ೧೯೯೬ರಿಂದ ಇವುಗಳ ಸಂಖ್ಯೆ ಕಗ್ಗಲಡುವಿನ ಮರಗಳಲ್ಲಿ ಜಾಸ್ತಿಯಾಯಿತು. 

ಪ್ರದೇಶದ ನಿಸರ್ಗ

[ಬದಲಾಯಿಸಿ]

ಸಸ್ಯ ಸಂಪತ್ತು

[ಬದಲಾಯಿಸಿ]

ಈ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುವುದು ಹುಣಸೆಮರಗಳು (Tamarindus indica) ಮತ್ತು ಆಲದಮರಗಳು (Ficus benghalensis)

ಪ್ರಾಣಿಪಕ್ಷಿ

[ಬದಲಾಯಿಸಿ]

ಈ ಪ್ರದೇಶವು ದಖನ್ ಪ್ರಸ್ಥಭೂಮಿಯಲ್ಲಿದ್ದು ಆಂಧ್ರದ ಗಡಿಗೆ ತಾಗಿಕೊಂಡಿರುವುದರಿಂದ ಇಲ್ಲಿನ ಪ್ರಾಣಿಗಳು ಒಣಪ್ರದೇಶಗಳಲ್ಲಿರುವ ಪ್ರಾಣಿಗಳಾಗಿವೆ. WANCಯು ಈ ಪ್ರದೇಶದ flora & fauna ಗಳನ್ನು ದಾಖಲಿಸುವ ಕೆಲಸ ಮಾಡುತ್ತಿದೆ. ಕೆಲವು ಕೃಷ್ಣಮೃಗಗಳು ಈ ಪ್ರದೇಶದಲ್ಲಿರುವುದು ಕಂಡುಬಂದಿದ. ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿಗಳನ್ನು ಕಂಡುದ್ದಾಗಿ ಕೆಲವು ಹಳ್ಳಿಗರು ಹೇಳುತ್ತಾರಾದರೂ ಇದು ದೃಢಪಟ್ಟಿಲ್ಲ.

ಪಕ್ಷಿಧಾಮ

[ಬದಲಾಯಿಸಿ]

ಗೂಡು ಕಟ್ಟುವ ಸಮಯ ಬಂದಾಗ ಹಕ್ಕಿಗಳು ಗುಂಪುಗುಂಪಾಗಿ ಇಲ್ಲಿಗೆ ಬರಲು ಆರಂಭಿಸುತ್ತವೆ. ಪ್ರತೀ ವರ್ಷ ಡಿಸೆಂಬರ್ ಕೊನೆಗೆ, ಜನವರಿ ಮೊದಲ ವಾರದಲ್ಲಿ, ಕೆಲವೊಮ್ಮೆ ಮಾರ್ಚ್ ತಿಂಗಳಲ್ಲೂ ಹಕ್ಕಿಗಳು ಬರುತ್ತವೆ. ಶ್ರೀಲಂಕಾ, ಮಲೇಶಿಯಾ, ಬರ್ಮಾ, ಬಾಂಗ್ಲಾ, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ ಮುಂತಾದ ವಿಶ್ವದ ನಾನಾಕಡೆಗಳಿಂದ ಹಕ್ಕಿಗಳು ವಲಸೆ ಬರುತ್ತವೆ. ಗ್ರೇಹಾರನ್, ಪೇಯಿಂಟೆಡ್ ಸ್ಟಾರ್ಕ್, ಬ್ರಾಹ್ಮಿನಿ ಡಕ್, ಪಿನ್ ಟೈಲ್ ಡಕ್, ಡ್ಯಾಬ್ ಚಿಕ್, ಸ್ಪೂನ್ ಬಿಲ್ ಮತ್ತು ಐಬಿಸ್ ನಂತಾ ವಿಶ್ವದ ನಾನಾ ಪ್ರಭೇದದ ಹಕ್ಕಿಗಳು ಬರುತ್ತವೆ. ಕಗ್ಗಲಡು ಗ್ರಾಮದಲ್ಲಿ ಸುಮಾರು ೬ ತಿಂಗಳುಗಳ ವರೆಗೆ ವಾಸಿಸುತ್ತವೆ. ಈ ಆರುತಿಂಗಳಲ್ಲಿ ಪಕ್ಷಿಗಳು ತಮ್ಮ ಸಂತಾನಾಭಿವೃದ್ಧಿ ಮುಗಿಸಿ ಕೊಂಡು ಮತ್ತೆ ತಮ್ಮ ದೇಶಕ್ಕೆ ತೆರಳುತ್ತವೆ.[]

ಮಂಡ್ಯ ಜಿಲ್ಲೆಯ ಕೊಕ್ಕರೆ ಬೆಳ್ಳೂರಿನ ನಂತರ ದಕ್ಷಿಣ ಭಾರತದಲ್ಲಿ ಕಗ್ಗಲಡು ಪಕ್ಷಿಧಾಮವೇ ಬಣ್ಣದ ಕೊಕ್ಕರೆ ಪಕ್ಷಿಗಳ ದೊಡ್ಡ ತಾಣ ಎನ್ನಲಾಗಿದೆ.[] 

ಈ ಪಕ್ಷಿಧಾಮದಲ್ಲಿ ಹಕ್ಕಿಗಳನ್ನು ನೂರಾರು ಸಂಖ್ಯೆಯಲ್ಲಿ ಕಾಣಬಹುದು. ವಿವಿಧ ಪಕ್ಷಿಗಳ ಗುಂಪುಗಳೂ ಕಾಣಸಿಗುತ್ತವೆ. ಈ ಪಕ್ಷಿಗಳಿಗಾಗಿಯೇ ಹುಣಸೇಮರಗಳನ್ನು ಕಾಪಾಡಿಡಲಾಗಿದೆ. ಹಳ್ಳಿಗರು ಈ ಹಕ್ಕಿಗಳ ಜೊತೆ ಭಾವನಾತ್ಮಕ ಸಂಬಂಧ ಹೊಂದಿ ಕಾಪಾಡುತ್ತಿದ್ದಾರೆಂದು ವರದಿಯಾಗಿದೆ.[]. ಹಳ್ಳಿಗರು ಈ ಹಕ್ಕಿಗಳ ಉಳಿವಿಗೆ ಬಹಳ ಆಸಕ್ತಿ ವಹಿಸಿದ್ದಾರೆ. ಆ ಹುಣಸೆಮರದಲ್ಲಿನ ಕಾಯಿಗಳನ್ನೂ ಕೂಡ ಕೊಯ್ಯವುದಿಲ್ಲ. ಅವುಗಳ ರಕ್ಷಣೆಗೆ ಅವುಗಳ ಸೌಂದರ್ಯ ಒಂದು ಕಾರಣವಾದರೆ ಮತ್ತೊಂದು ಅವುಗಳು ಸಮೃದ್ಧಿಯ ಸಂಕೇತ ಎನ್ನುವ ಹಳ್ಳಿಗರ ನಂಬಿಕೆ.

ಸ್ಥಳ ವಿವರ

[ಬದಲಾಯಿಸಿ]
  • ಹತ್ತಿರದ ಪಟ್ಟಣ: ಶಿರಾ
  • ಹತ್ತಿರದ ನಗರ (ಜಿಲ್ಲಾ ಕೇಂದ್ರ): ತುಮಕೂರು
  • ಹತ್ತಿರದ ರೈಲುಮಾರ್ಗ (ನಿಲ್ದಾಣ) : ತುಮಕೂರು
  • ಹತ್ತಿರದ ವಿಮಾನನಿಲ್ದಾಣ: ಬೆಂಗಳೂರು
  • ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ ೪ ಶಿರಾ ಪಟ್ಟಣದ ಮೂಲಕ ಹಾದು ಹೋಗುತ್ತದೆ.  ಶಿರಾ ಪಟ್ಟಣವು ಬೆಂಗಳೂರಿನಿಂದ ರಸ್ತೆಮಾರ್ಗವಾಗಿ ಸುಮಾರು ೧೨೦ ಕಿ.ಮಿ. ದೂರ ಹಾಗೂ ತುಮಕೂರಿನಿಂದ ೫೦ ಕಿ.ಮೀ.ದೂರದಲ್ಲಿದೆ.

ಉಲ್ಲೇಖಗಳು

[ಬದಲಾಯಿಸಿ]
  • Large nesting colony of Painted storks identified near Sira (Karnataka) - News Letter for Birdwatchers Mar-Apr.1999, Vol.39, No:2 and Myforest (Quarterly Journal of Karnataka Forest Department) March 1999

ಇವನ್ನೂ ನೋಡಿ

[ಬದಲಾಯಿಸಿ]

ಹೊರಕೊಂಡಿಗಳು

[ಬದಲಾಯಿಸಿ]

ಚಿತ್ರಗಳು

[ಬದಲಾಯಿಸಿ]
"https://kn.wikipedia.org/w/index.php?title=ಕಗ್ಗಲಡು&oldid=1212427" ಇಂದ ಪಡೆಯಲ್ಪಟ್ಟಿದೆ