ಗ್ಯಾಂಗಟಕ್
ಗ್ಯಾಂಗಟಕ್
སྒང་ཐོག་ | |
---|---|
ರಾಜಧಾನಿ | |
ದೇಶ | ಭಾರತ |
ರಾಜ್ಯ | ಸಿಕ್ಕಿಂ |
ಜಿಲ್ಲೆ | ಪೂರ್ವ ಸಿಕ್ಕಿಂ |
ಸರ್ಕಾರ | |
• ಮೇಯರ್ | ಕೆ. ಎನ್ ಟೊಪ್ಗೆ[೧] (SDF) |
Area | |
• Total | ೩೫ km೨ (೧೪ sq mi) |
Elevation | ೧,೬೦೦ m (೫,೨೦೦ ft) |
Population (2011) | |
• Total | ೯೮,೬೫೮ |
• ಸಾಂದ್ರತೆ | ೫,೬೭೫/km೨ (೧೪,೭೦೦/sq mi) |
ಭಾಷೆಗಳು | |
• ಅಧಿಕೃತ | ನೇಪಾಲಿ,ಭುತಿಯ, ಲೇಪ್ಚ, ಲಿಂಬು, ನೇವಾರಿ, ಕಿರಾಂತಿ, ಗುರುಂಗ್, ಮಂಗಾರ, ಶೇರ್ಪ, ತಮಾಂಗ್,ಸುನ್ವರ್,ಟಿಬೆಟ್ ಮತ್ತು ಹಿಂದಿ |
ಸಮಯ ವಲಯ | ಯುಟಿಸಿ+5:30 (IST) |
ಪಿನ್ | 737101 |
ದೂರವಾಣಿ ಕೋಡ್ | 03592 |
ವಾಹನ ನೋಂದಣಿ | SK-01, SK-02, SK-03, SK-04 |
ಸಿಕ್ಕಿಂ ರಾಜ್ಯದ ರಾಜಧಾನಿ ಗ್ಗ್ಯಾಂಗ್ಟಕ್, ಒಂದು ಪ್ರಮುಖ ವಾಣಿಜ್ಯ ನಗರಿ ಮತ್ತು ಸಿಕ್ಕಿಂನ ದೊಡ್ಡ ನಗರಿಯೂ ಹೌದು. ಕಾಂಚನಜುಂಗ [೨] ಪರ್ವತದ ತಪ್ಪಲಿನಲ್ಲಿ ಇರುವ ನಗರ. ಇದೊಂದು ಪ್ರವಾಸಿ ನಗರಿ. ಬಹಳಷ್ಟು ಪ್ರವಾಸಿ ಸ್ಥಳಗಳನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿದೆ. ಸರಿಸುಮಾರು ೧ ಲಕ್ಷದಷ್ಟು ಜನಸಂಖ್ಯೆಯನ್ನು ಹೊಂದಿದೆ. ಇಲ್ಲಿಗೆ ಹತ್ತಿರವಿರುವ ರೈಲು ನಿಲ್ದಾಣ ಪಶ್ಚಿಮ ಬಂಗಾಳದ ಸಿಲಿಗುರಿ ನಿಲ್ದಾಣ. ಸಿಲಿಗುರಿಯಿಂದ ಬಸ್ಸುಗಳು ಮತ್ತು ಜೀಪುಗಳಲ್ಲಿ ಪ್ರಯಾಣಸಿ ಗ್ಗ್ಯಾಂಗ್ಟಕ್ ತಲುಪಬಹುದು. ಬಾಗ್ಡೋಗ್ರ, ಹತ್ತಿರವಿರುವ ವಿಮಾನ ನಿಲ್ದಾಣ.
ಗಂಗ್‍ಟೋಕ್ ಡಾರ್ಜಿಲಿಂಗಿನ ಈಶಾನ್ಯಕ್ಕೆ 28 ಮೈ. ದೂರದಲ್ಲಿ ಭಾರತ-ಟಿಬೆಟ್ ನಡುವಣ ವ್ಯಾಪಾರ ಮಾರ್ಗದಲ್ಲಿ ಉ.ಅ. 27º 20' ಪೂ.ರೇ. 88º 38' ಮೇಲೆ ಇದೆ.
ಸಿಕ್ಕಿಂ ರಾಜ್ಯ ಬೆಟ್ಟಗಳಿಂದ ಅವೃತವಾದ್ದು. ಪರ್ವತಪ್ರದೇಶವಾಗಿರುವುದರಿಂದ ಇಲ್ಲಿ ಹೆಚ್ಚಿನ ಆಧುನಿಕ ವಾಹನ ಸೌಕರ್ಯಗಳಿಲ್ಲ. 1954 ರಲ್ಲಿ ಸಿಕ್ಕಿಮ್‍ನಲ್ಲಿ ಸಪ್ತವಾರ್ಷಿಕ ಯೋಜನೆ ಜಾರಿಗೆ ಬರುವ ಮುನ್ನ ಗಂಗ್‍ಟೊಕ್‍ಗೂ ಬಂಗಾಳ-ಸಿಕ್ಕಿಂ ಗಡಿಯ ಬಳಿಯಲ್ಲಿರುವ ರಂಗ್‍ಪೊಗೂ ನಡುವೆ 48 ಕಿಮೀ.ಗಳಷ್ಟು ದೂರದ ಮೋಟಾರ್ ಹೆದ್ದಾರಿ ಮಾತ್ರ ಇತ್ತು 1954ರ ಅನಂತರ ಗಂಗ್‍ಟೊಕ್‍ನಿಂದ ದಕ್ಷಿಣಕ್ಕೂ ಉತ್ತರದಲ್ಲಿರವ ಲಾಚೆನ್‍ಗೂ ಜೀಪ್ ದಾರಿಗಳೂ ಮೋಟಾರು ಹೆದ್ದಾರಿಗಳೂ ನಿರ್ಮಣವಾದುವು. ಇದರಿಂದಾಗಿ ಉತ್ತರ ಸಿಕ್ಕಿಮ್‍ನಿಂದ ರಾಜ್ಯದ ದಕ್ಷಿಣ ಭಾಗಗಳಿಗೆ ಅರಣ್ಯೋತ್ಪನ್ನ, ಸೇಬು, ಆಲೂಗಡ್ಡೆ ಮುಂತಾದವನ್ನು ಸಾಗಿಸುವ ಸೌಲಭ್ಯ ಏರ್ಪಟ್ಟಿತು. ರಿಷಿ, ಜೆಲೆಪ್ಲಗಳಿಂದ ಗಂಗ್‍ಟೊಕ್‍ಗೆ ಇದ್ದ ಕುದುರೆಮಾರ್ಗ ಜೀಪ್ ದಾರಿಯಾಗಿ ಪರಿವರ್ತನೆಗೊಂಡಿದೆ. ಗಂಗ್‍ಟೊಕ್‍ಗೂ ಸಿಕ್ಕಿಮ್‍ನ ಇತರ ಸ್ಥಳಗಳಿಗೂ ಈಗ ತಕ್ಕಮಟ್ಟಿನ ರಸ್ತೆ ಸಂಪರ್ಕ ಏರ್ಪಟ್ಟಿದೆ.
ಗಂಗ್‍ಟೊಕ್‍ನಲ್ಲಿ ಸಿಕ್ಕಿಂ ರಾಜನ ಅರಮನೆ, ಮಂತ್ರಿಮಂಡಲದ ಸದಸ್ಯರ ನಿವಾಸ ಸ್ಥಾನಗಳು ಮತ್ತು ಸರ್ಕಾರಿ ಸೌಧಗಳಲ್ಲದೆ ಶಾಲೆಕಾಲೇಜುಗಳು, ಜೈಲು, ಆಸ್ಪತ್ರೆಗಳು ಉಂಟು. ಇಲ್ಲಿಂದ ನೈಋತ್ಯಕ್ಕೆ ನಾಲ್ಕು ಮೈಲಿಗಳ ದೂರದಲ್ಲಿ ರೂಮ್‍ಟೆಮ್‍ನ ಬೌದ್ಧ ಮಠವಿದೆ. ಬೇಳೆ, ಮೆಕ್ಕೆಜೋಳ, ಅಕ್ಕಿ, ಕಿತ್ತಳೆಹಣ್ಣು-ಇವು ಇಲ್ಲಿ ವ್ಯಾಪಾರವಾಗುವ ಸರಕುಗಳು.
ಇತಿಹಾಸ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "Gangtokmunicipalcorporation.org". Gangtokmunicipalcorporation.org. Archived from the original on 2011-12-31. Retrieved 2013-12-22.
- ↑ ಕಾಂಚನಜುಂಗ ರಾಷ್ಟ್ರೀಯ ಉದ್ಯಾನವನ
- ↑ http://sikkimtourism.gov.in/Webforms/General/Destination/Gangtok.aspx?LocName=Gangtok
- ↑ https://www.lonelyplanet.com/india/sikkim/gangtok
- Pages with non-numeric formatnum arguments
- Short description is different from Wikidata
- Pages using infobox settlement with bad settlement type
- Pages using infobox settlement with unknown parameters
- Pages using infobox settlement with no map
- Pages using infobox settlement with no coordinates
- ಭಾರತದ ರಾಜಧಾನಿ ಪಟ್ಟಣಗಳು
- ಸಿಕ್ಕಿಂ