ಚಿತೆ
ಗೋಚರ
ಚಿತೆಯು ಅಂತ್ಯಕ್ರಿಯೆಯ ವಿಧಿ ಅಥವಾ ಮರಣದಂಡನೆಯ ಭಾಗವಾಗಿ ಶವವನ್ನು ದಹಿಸಲು ಸಾಮಾನ್ಯವಾಗಿ ಕಟ್ಟಿಗೆಯಿಂದ ತಯಾರಿಸಲಾದ ಒಂದು ರಚನೆ. ಶವದಹನದ ರೂಪವಾಗಿ, ಶವವನ್ನು ಚಿತೆಯ ಮೇಲೆ ಅಥವಾ ಅದರ ಕೆಳಗೆ ಇಟ್ಟು, ನಂತರ ಬೆಂಕಿ ಹಚ್ಚಲಾಗುತ್ತದೆ.
ವಸ್ತುಗಳು
[ಬದಲಾಯಿಸಿ]ಚಿತೆಗಳನ್ನು ಕಟ್ಟಿಗೆ ಬಳಸಿ ನಿಪುಣತೆಯಿಂದ ನಿರ್ಮಿಸಲಾಗುತ್ತದೆ.[೧] ಚಿತೆಯ ರಚನಾಂಶಗಳನ್ನು ಇದ್ದಿಲು ವಿಶ್ಲೇಷಣೆಯ ಬಳಕೆಯ ಮೂಲಕ ನಿರ್ಧರಿಸಬಹುದು. ಇದ್ದಿಲು ವಿಶ್ಲೇಷಣೆಯು ಇಂಧನ ರಚನಾಂಶಗಳು ಮತ್ತು ಅಧ್ಯಯನಿಸಲಾಗುತ್ತಿರುವ ಇದ್ದಿಲಿನ ಸ್ಥಳೀಯ ಅರಣ್ಯವನ್ನು ತಿಳಿಯಲು ನೆರವಾಗುತ್ತದೆ.[೨]
ಉಪಯೋಗಗಳು
[ಬದಲಾಯಿಸಿ]ಸಾಂಪ್ರದಾಯಿಕವಾಗಿ, ಹಿಂದೂ ಮತ್ತು ಸಿಖ್ ಧರ್ಮಗಳಲ್ಲಿ ಚಿತೆಗಳನ್ನು ಮೃತರ ಶವದಹನಕ್ಕಾಗಿ ಬಳಸಲಾಗುತ್ತದೆ ಮತ್ತು ಈ ಅಭ್ಯಾಸವು ಹಲವು ಸಾವಿರ ವರ್ಷಗಳಷ್ಟು ಹಳೆಯದೆಂದು ಕಾಲನಿರ್ಧಾರ ಮಾಡಲಾಗಿದೆ. ಚಿತೆಗಳನ್ನು ವೈಕಿಂಗ್ ಹಾಗೂ ರೋಮನ್ ಸಂಸ್ಕೃತಿಯಲ್ಲಿಯೂ ಬಳಸಲಾಗಿತ್ತು.[೩]
ಉಲ್ಲೇಖಗಳು
[ಬದಲಾಯಿಸಿ]- ↑ Norfolk, Andrew (13 July 2006). "'Illegal' funeral pyre burnt in secret". The Times. London. Retrieved 19 January 2011.
- ↑ O'Donnell, Lorna (2016). "The power of the pyre - A holistic study of cremation focusing on charcoal remains". Journal of Archaeological Science. 65: 161–171. doi:10.1016/j.jas.2015.11.009.
- ↑ Fernando, Shehani (14 July 2006). "The question: Why are funeral pyres illegal?". The Guardian. London. Retrieved 19 January 2011.