ಪುರಬಿಂದುವಿನ ಕೋನಭಾಗ
ಪುರಬಿಂದುವಿನ ಕೋನಭಾಗ (ω) - ಪರಿಭ್ರಮಿಸುವ ಒಂದು ಕಾಯದ ಪುರಬಿಂದು (ಮಧ್ಯ ಕಾಯದ ಅತಿ ಹತ್ತಿರಕ್ಕೆ ಬರುವ ಬಿಂದು) ಮತ್ತು ಅದರ ಆರೋಹಣ ಸಂಪಾತದ (ಉತ್ತರದಿಂದ ದಕ್ಶಿಣಕ್ಕೆ ಇರುವ ನಿರ್ದೇಶಕ ಸಮತಳವನ್ನು ಕಾಯವು ಹಾಯುವ ಬಿಂದು) ನಡುವಿನ ಕೋನವನ್ನು ವಿವರಿಸುವ ಕಕ್ಷೀಯ ಅಂಶ. ಈ ಕೋನವನ್ನು ಚಲನೆಯ ದಿಕ್ಕಿನಲ್ಲಿ ಮತ್ತು ಕಕ್ಷೀಯ ಸಮತಳದ ಮೇಲೆ ಮಾಪಿಸಲಾಗುತ್ತದೆ. (ವಿಶಿಷ್ಟ ರೀತಿಯ ಕಕ್ಷೆಗಳಿಗೆ - "ಪುರರವಿ" (ಸೂರ್ಯ-ಕೇಂದ್ರಿತ ಕಕ್ಷೆಗಳಿಗೆ), "ಪುರಭೂಮಿ" (ಭೂಮಿ-ಕೇಂದ್ರಿತ ಕಕ್ಷೆಗಳಿಗೆ), ಇತ್ಯಾದಿ ಪದಗಳನ್ನು ಬಳಸಬಹುದು. ಹೆಚ್ಚಿನ ಮಾಹಿತಿಗೆ ಅಪಪುರಗಳನ್ನು ನೋಡಿ.
ಪುರಬಿಂದುವಿನ ಕೋನಭಾಗವು ೦° ಇದ್ದಾಗ, ಪರಿಭ್ರಮಿಸುವ ಕಾಯವು ಪುರಬಿಂದುವಿನಲ್ಲಿರುವಾಗಲೇ ನಿರ್ದೇಶಕ ಸಮತಳವನ್ನು ದಕ್ಷಿಣದಿಂದ ಉತ್ತರಕ್ಕೆ ಹಾಯುತ್ತದೆ. ಪುರಬಿಂದುವಿನ ಕೋನಭಾಗವು ೯೦° ಇದ್ದಾಗ, ಪರಿಭ್ರಮಿಸುವ ಕಾಯವು ನಿರ್ದೇಶಕ ಸಮತಳದಿಂದ ಅತಿ ಉತ್ತರದ ದೂರದಲ್ಲಿ ಪುರಬಿಂದುವಿನಲ್ಲಿ ಇರುತ್ತದೆ.
ಆರೋಹಣ ಸಂಪಾತದ ರೇಖಾಂಶಕ್ಕೆ ಪುರಬಿಂದುವಿನ ಕೋನಭಾಗವನ್ನು ಕೂಡಿಸಿದರೆ, ಪುರಬಿಂದುವಿನ ರೇಖಾಂಶವು ಲಭಿಸುತ್ತದೆ.
ಲೆಕ್ಕಾಚಾರಗಳು
[ಬದಲಾಯಿಸಿ]ಖಗೋಳಗತಿವಿಜ್ಞಾನದಲ್ಲಿ, ಪುರಬಿಂದುವಿನ ಕೋನಭಾಗ ವನ್ನು ಈ ಕೆಳಗಿನಂತೆ ಕಂಡುಹಿಡಿಯಬಹುದು:
- ( ಆದರೆ, ಆಗುತ್ತದೆ)
ಇಲ್ಲಿ:
- ಆರೋಹಣ ಸಂಪಾತದೆಡೆಗೆ ತೋರುತ್ತಿರುವ ಸದಿಶ (ಅಂದರೆ, ನ z-ಅಂಶವು ಶೂನ್ಯ),
- ಉತ್ಕೇಂದ್ರೀಯ ಸದಿಶ (ಪುರಬಿಂದುವಿನೆಡೆಗೆ ತೋರುತ್ತಿರುವ ಸದಿಶ).
ವೃತ್ತಾಕಾರದ ಕಕ್ಷೆಗಳ ಸನ್ನಿವೇಶದಲ್ಲಿ ಪುರಬಿಂದುವು ಆರೋಹಣ ಸಂಪಾತದಲ್ಲೇ ಇರುವುದರಿಂದ ಆಗುತ್ತದೆ.