ಬೆಳಗಾವಿ ಜಿಲ್ಲೆ
ಬೆಳಗಾವಿ ಅಥವಾ ಬೆಳಗಾಂ ಕರ್ನಾಟಕ ರಾಜ್ಯದ ಒಂದು ಜಿಲ್ಲೆ.[೧] [೨] ಬೆಳಗಾವಿ ನಗರವು ಈ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ. ಈ ಜಿಲ್ಲೆಯಲ್ಲಿರುವ ಸುವರ್ಣ ವಿಧಾನಸೌಧವು ಕರ್ನಾಟಕದ ಎರಡನೇ ಶಾಸಕಾಂಗ ಸಭೆಯ ಮುಖ್ಯ ಕಚೇರಿಯಾಗಿದೆ. ಟೆಂಪ್ಲೇಟು:Infobox ಜಿಲ್ಲೆ
ಭೂಗೋಳ
[ಬದಲಾಯಿಸಿ]ಜಿಲ್ಲೆಯು 13,415 km2 (5,180 sq mi) ವಿಸ್ತೀರ್ಣವನ್ನು ಹೊಂದಿದೆ ಮತ್ತು ಇದು ಕರ್ನಾಟಕದ ಅತಿದೊಡ್ಡ ಜಿಲ್ಲೆಯಾಗಿದೆ.
ಕೃಷಿ
[ಬದಲಾಯಿಸಿ]ಬೆಳಗಾವಿ ಜಿಲ್ಲೆಯ 1.5 ಲಕ್ಷ ಹೆಕ್ಟೇರ್‌ಗಳಷ್ಟು ಭೂಮಿಯನ್ನು ಕಬ್ಬು ಬೆಳೆಯಲು ಬಳಸಲಾಗುತ್ತಿದೆ, ಇದು ಕಳೆದ ದಶಕದಲ್ಲಿ ಕಬ್ಬು ಉತ್ಪಾದನೆಯಲ್ಲಿ ಮಂಡ್ಯ ಜಿಲ್ಲೆಯನ್ನು ಮಿರಿಸಿದೆ, ಈ ಜಿಲ್ಲೆಯನ್ನು ಕರ್ನಾಟಕದ ಸಕ್ಕರೆ ಬಟ್ಟಲು ಎಂದು ಕರೆಯಲ್ಪಡುತ್ತದೆ [೩]
ಆಡಳಿತ ವಿಭಾಗಗಳು
[ಬದಲಾಯಿಸಿ]ಬೆಳಗಾವಿ ಜಿಲ್ಲೆಯ ಆಡಳಿತವನ್ನು 10 ತಾಲೂಕುಗಳಾಗಿ ವಿಂಗಡಿಸಲಾಗಿದೆ.
ಉಪವಿಭಾಗ | ತಾಲೂಕುಗಳು |
---|---|
ಬೆಳಗಾವಿ | ಬೆಳಗಾವಿ |
ಹುಕ್ಕೇರಿ | |
ಖಾನಾಪುರ | |
ಚಿಕ್ಕೋಡಿ | |
ಚಿಕ್ಕೋಡಿ | |
ಅಥಣಿ | |
ರಾಯಭಾಗ | |
ಬೈಲಹೊಂಗಲ | |
ಬೈಲಹೊಂಗಲ | |
ಗೋಕಾಕ್ | |
ಸವದತ್ತಿ | |
ರಾಮದುರ್ಗ |
ಜನಸಂಖ್ಯಾ
[ಬದಲಾಯಿಸಿ]Year | Pop. | ±% p.a. |
---|---|---|
1901 | ೧೧,೩೧,೧೮೬ | — |
1911 | ೧೦,೮೩,೮೦೪ | −0.43% |
1921 | ೧೦,೮೮,೭೬೩ | +0.05% |
1931 | ೧೨,೩೭,೨೨೩ | +1.29% |
1941 | ೧೪,೧೦,೦೫೪ | +1.32% |
1951 | ೧೬,೪೫,೬೨೦ | +1.56% |
1961 | ೧೯,೮೩,೪೯೮ | +1.88% |
1971 | ೨೪,೨೨,೯೯೪ | +2.02% |
1981 | ೨೯,೭೮,೯೧೩ | +2.09% |
1991 | ೩೫,೮೩,೬೦೬ | +1.87% |
2001 | ೪೨,೧೪,೫೦೫ | +1.63% |
2011 | ೪೭,೭೯,೬೬೧ | +1.27% |
source:[೫] |
2011 ರ ಭಾರತದ ಜನಗಣತಿಯ ಪ್ರಕಾರ, ಜಿಲ್ಲೆಯು 47,79,661 ಜನಸಂಖ್ಯೆಯನ್ನು ಹೊಂದಿದೆ,[೬] ಇದು ಬೆಂಗಳೂರಿನ ನಂತರ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಕರ್ನಾಟಕದ ಜಿಲ್ಲೆಯಾಗಿದೆ. [೭] ಇದು ಸಿಂಗಾಪುರ ದೇಶದ ಸಮನಾದ [೮] ಮತ್ತು ಅಮೆರಿಕಾ ದೇಶದ ಅಲ್ಬಾಮ ರಾಜ್ಯಕ್ಕೆ ಸಮನಾದ ಜನಸಂಖೆಯಾಗಿದೆ.[೯] ಪ್ರಸ್ತುತ ಜಿಲ್ಲೆಯು ಭಾರತದ 640 ಜಿಲ್ಲೆಗಳಲ್ಲಿ ಜನಸಂಖ್ಯೆಯಲ್ಲಿ 25ನೆ ಸ್ಥಾನದಲ್ಲಿ ಇದೆ. 2001-2011 ರ ದಶಕದಲ್ಲಿ ಜಿಲ್ಲೆಯ ಜನಸಂಖ್ಯೆಯ ಬೆಳವಣಿಗೆಯು ಶೇಕಡಾ 13.38% ಆಗಿದೆ. ಜಿಲ್ಲೆಯ ಸಾಕ್ಷರತೆಯು ಶೇಕಡಾ 73.94%
ಜಿಲ್ಲೆಯಲ್ಲಿ ಶೇಕಡಾ 84.49 ರಷ್ಟು ಹಿಂದೂಗಳು. ಶೇಕಡಾ 11.06ರಷ್ಟು ಮುಸಲ್ಮಾನರು, ಶೇಕಡಾ 3.73 ರಷ್ಟು ಜೈನರು , ಮತ್ತು ಶೇಕಡಾ 0.72 ರಷ್ಟು ಇತರೆ ಧರ್ಮದವರು ನೆಲೆಸಿದ್ದಾರೆ.[೧೦]
ಜಿಲ್ಲೆಯಲ್ಲಿ ಶೇಕಡಾ 68.40 ರಷ್ಟು ಕನ್ನಡಿಗರು, ಶೇಕಡಾ 18.70 ರಷ್ಟು ಮರಾಠಿಗರು, ಶೇಕಡಾ 9.79 ರಷ್ಟು ಉರ್ದು ಭಾಷಿಕರು ಮತ್ತು ಶೇಕಡಾ 3.10 ರಷ್ಟು ಇತರೆ ಭಾಷೆ ಮಾತಾನಾಡುವವರು ಇದ್ದಾರೆ..[೧೧]
ನದಿಗಳು
[ಬದಲಾಯಿಸಿ]ಬೆಳಗಾವಿ ಜಿಲ್ಲೆಯಲ್ಲಿ ಹರಿಯವ ನದಿಗಳು :
- ಕೃಷ್ಣ
- ಮಲಪ್ರಭಾ
- ಘಟಪ್ರಭಾ
- ವೇದಗಂಗಾ
- ದೂಧಗಂಗಾ
- ಮಹದಾಯಿ
- ಪಂಡರಿ
- ಹಿರಣ್ಯಕೇಶಿ
ಶಿಕ್ಷಣ
[ಬದಲಾಯಿಸಿ]ಬೆಳಗಾವಿ ಜಿಲ್ಲೆಯಲ್ಲಿ ಪ್ರಸ್ತುತ ಮೂರು ವಿಶ್ವವಿದ್ಯಾಲಯಗಳು ಇದಾವೆ ಅವುಗಳೆಂದರೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ , ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ, ಕರ್ನಾಟಕ ಲಿಂಗಾಯತ ಶಿಕ್ಷಣ (ಕೆಎಲ್‌ಇ) ಸೊಸೈಟಿ ಮತ್ತು ಜಿಲ್ಲೆಯಲ್ಲಿ ಒಂಬತ್ತು ಇಂಜಿನಿಯರಿಂಗ್ ಕಾಲೇಜು, ಎರಡು ವೈದ್ಯಕಿಯ ಕಾಲೇಜು, ಹದಿನೈದು ಪಾಲಿಟೆಕ್ನಿಕ್ ಕಾಲೇಜು,ನೂರ ಎಂಬತ್ತು ಪದವಿ ಕಾಲೇಜುಗಳು ಕಾರ್ಯನಿರ್ವಹಿಸುತ್ತಾ ಇದಾವೆ.[೧೨]
ಇವನ್ನೂ ನೋಡಿ
[ಬದಲಾಯಿಸಿ]ಉಲ್ಲೇಖ
[ಬದಲಾಯಿಸಿ]- ↑ "Belgaum becomes Belagavi, as Centre clears name change plan". The Indian Express (in ಇಂಗ್ಲಿಷ್). 18 October 2014. Retrieved 30 August 2020.
- ↑ "Karnataka elections: Meet the five brothers from Belagavi who are contesting against each other". Hindustan Times (in ಇಂಗ್ಲಿಷ್). 4 May 2018. Retrieved 19 January 2020.
- ↑ "Belagavi - foundry hub of North Karnataka" (PDF). karnataka.gov.in. Archived from the original (PDF) on 13 December 2019. Retrieved 14 March 2021.
- ↑ https://belagavi.nic.in/%e0%b2%a4%e0%b2%be%e0%b2%b2%e0%b3%8d%e0%b2%b2%e0%b3%82%e0%b2%95%e0%b3%81-%e0%b2%95%e0%b2%9a%e0%b3%87%e0%b2%b0%e0%b2%bf/
- ↑ Decadal Variation In Population Since 1901
- ↑ "Census GIS India". Archived from the original on 11 January 2010. Retrieved 27 August 2009.
- ↑ "District Census 2011". Census2011.co.in. 2011. Retrieved 30 September 2011.
- ↑ US Directorate of Intelligence. "Country Comparison:Population". Archived from the original on 13 June 2007. Retrieved 1 October 2011.
Singapore 4,740,737 July 2011 est.
- ↑ "2010 Resident Population Data". U. S. Census Bureau. Archived from the original on 19 October 2013. Retrieved 30 September 2011.
Alabama 4,779,736
- ↑ ೧೦.೦ ೧೦.೧ "C-1 Population By Religious Community". Census of India. Retrieved 2 August 2021.
- ↑ "Table C-16 Population by Mother Tongue: Karnataka". Census of India. Registrar General and Census Commissioner of India. Retrieved 26 April 2022.
- ↑ "Belagavi District". www.investkarnataka.co.in. Archived from the original on 13 December 2019. Retrieved 13 December 2019.