ಬ್ರಿಯಾನ್ ಆಡಮ್ಸ್
Bryan Adams | |
---|---|
ಹಿನ್ನೆಲೆ ಮಾಹಿತಿ | |
ಜನ್ಮನಾಮ | Bryan Guy Adams |
ಸಂಗೀತ ಶೈಲಿ | Rock, soft rock, pop rock, arena rock, rock n roll, acoustic rock, Brit-pop, folk, hard rock, pop |
ವೃತ್ತಿ | Singer-songwriter, musician, photographer, social activist |
ವಾದ್ಯಗಳು | Vocals, guitar, bass guitar, piano, keyboards, harmonica |
ಸಕ್ರಿಯ ವರ್ಷಗಳು | 1977 – present |
Labels | A&M, Polydor |
Associated acts | Tina Turner, Neil Diamond, Aretha Franklin, Rod Stewart, Mary J. Blige,Bonnie Raitt, Sting, Anne Murray,Sweeney Todd, Chicane, Kiss, Roger Waters, Mel C, Barbra Streisand, Paco de Lucía, Luciano Pavarotti, Pamela Anderson, Elton John, The Who, U2, Peter Gabriel, Sarah McLachlan. |
ಅಧೀಕೃತ ಜಾಲತಾಣ | BryanAdams.com |
ಬ್ರಿಯಾನ್ ಗೇ ಆಡಮ್ಸ್ (ಆಂಗ್ಲ:Bryan Guy Adams), OC, OBC, (ಜನನ ನವೆಂಬರ್ ೫, ೧೯೫೯)ಶ್ರೇಷ್ಠ ಮಟ್ಟದ ಕೆನಡಿಯನ್ ರಾಕ್ ಹಾಡುಗಾರ-ಗೀತರಚನಕಾರ, ಗಿಟಾರ್ ವಾದಕ, ನಿರ್ಮಾಪಕ ಮತ್ತು ಛಾಯಾಚಿತ್ರಗ್ರಾಹಕರಾಗಿ ಹೆಸರು ಮಾಡಿದ್ದಾರೆ.
ಆಡಮ್ಸ್ ಡಜನ್ ಗಟ್ಟಲೆ ಪ್ರಶಸ್ತಿಗಳನ್ನು ಮತ್ತು ನಾಮನಿರ್ದೇಶನಗಳನ್ನು ಜಯಿಸಿದ್ದು, ಅವುಗಳಲ್ಲಿ ೫೬ ಬಾರಿ ನಾಮನಿರ್ದೇಶಗಳಲ್ಲಿ ೧೮ ಬಾರಿ ಜೂನೋ ಪ್ರಶಸ್ತಿ, ೨೦೦ದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ, ೧೯೮೩ರಿಂದ ೧೯೮೭ರವರೆಗೂ ಪ್ರತಿವರ್ಷ ಮತ್ತು ೧೯೯೭ರಲ್ಲಿ ವರ್ಷದ ಅತ್ಯುತ್ತಮ ಗಾಯಕ ಪ್ರಶಸ್ತಿ, ಹಾಗೂ ನಿರ್ಮಾಪಕ, ಸಂಕಲನಕಾರ ಮತ್ತು ವರ್ಷದ ಗೀತರಚನಕಾರನಾಗಿಯೂ ೧೯೮೩ರಿಂದ ೧೯೮೭ರವರೆಗೂ ಪ್ರತಿವರ್ಷ ಪ್ರಶಸ್ತಿಗಳನ್ನು ಪಡೆದನು. ಇವಲ್ಲದೆ ೧೫ ಬಾರಿ ಗ್ರ್ಯಾಮಿ ಅವಾರ್ಡ್ ಗಾಗಿ ಆಯ್ಕೆಗೊಂಡಿದ್ದು, ೧೯೯೨ರಲ್ಲಿ (ಎವೆರಿಥಿಂಗ್ ಐ ಡು) ಐ ಡು ಇಟ್ ಫಾರ್ ಯೂ ಎಂಬ ಒಂದು ಚಲನಚಿತ್ರ ಅಥವಾ ಟೆಲಿವಿಷನ್ ಗೆಂದೇ ಬರೆದ ಅತ್ಯುತ್ತಮ ಹಾಡು ಬರೆದು ಆ ಶ್ರೇಣಿಯಲ್ಲಿನ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡನು. MTV, ASCAP, ಮತ್ತು ಅಮೆರಿಕನ್ ಮ್ಯೂಸಿಕ್ ಪ್ರಶಸ್ತಿಗಳೂ ಇವನನ್ನು ಅರಸಿಕೊಂಡು ಬಂದವು. ಇಷ್ಟೇ ಅಲ್ಲದೆ ಎರಡು ಬಾರಿ ಇವಾರ್ ನೋವಿಲೋ ಪ್ರಶಸ್ತಿಯನ್ನು ಗೆದ್ದಿರುವುದಲ್ಲದೆ ಹಲವಾರು ಬಾರಿ ಗೀತರಚನೆಗಾಗಿ ಗೋಲ್ಟನ್ ಗ್ಲೋಬ್ ಪ್ರಶಸ್ತಿಗೆ ಮತ್ತು ಅಕಾಡಮಿ ಪ್ರಶಸ್ತಿಗೆ ಇವನ ಹೆಸರು ಆಯ್ಕೆಯಾಗಿತ್ತು. ಸರ್ವಕಾಲಿಕವಾಗಿ ಅತ್ಯಂತ ಯಶಸ್ವಿ ಮತ್ತು ಶ್ರೇಷ್ಠ ಕೆನಡಿಯನ್ ಕಲಾವಿದರಲ್ಲಿ ಒಬ್ಬನಾದ ಬಹಳ ಬೇಡಿಕೆಯಲ್ಲಿರುವ ಕೆನಡಿಯನ್ನರ ಪಟ್ಟಿಯಲ್ಲಿ ಮೂರನೆಯ ಸ್ಥಾನವನ್ನಲಂಕರಿಸಿದ್ದಾನೆ.ಆಡಮ್ಸ್ ನ ಸುಮಾರು ೭೫ ಮಿಲಿಯನ್ ಆಲ್ಬಂಗಳು ಮತ್ತು ೩೦ ಮಿಲಿಯನ್ ಏಕಗಾಯಕ ಸ್ಥಾಲಿಗಳು (ಸಿಂಗಲ್ಸ್) ಜಗದಾದ್ಯಂತ ಮಾರಾಟವಾಗಿವೆ.
ತನ್ನದೇ ಆದ ಸಂಸ್ಥೆಯ ಮೂಲಕ ಜಗದಾದ್ಯಂತ ವಿದ್ಯಾಭ್ಯಾಸದ ಗುಣಮಟ್ಟ ಏರಿಸುವ ಜನಾನುರಾಗಿ ಕೆಲಸಗಳನ್ನು ಗುರುತಿಸಿ ಮತ್ತು ಜನಪದ ಸಂಗೀತಕ್ಕೆ ನೀಡಿದ ಅಪಾರ ಕೊಡುಗೆಗಾಗಿ ಆಡಮ್ಸ್ ಗೆ ಆರ್ಡರ್ ಆಫ್ ಕೆನಡಾ ಮತ್ತು ಆರ್ಡರ್ ಆಫ್ ಬ್ರಿಟಿಷ್ ಕೊಲಂಬಿಯಾ ಗೌರವಗಳನ್ನು ಆ ದೇಶಗಳು ಕೊಡಮಾಡಿವೆ. ಆಡಮ್ಸ್ ಒಬ್ಬ ಖ್ಯಾತ ಛಾಯಾಗ್ರಾಹಕನೂ ಹೌದು.[೧][೨]
ಕೆನಡಾದ ವಾಕ್ ಆಫ್ ಫೇಮ್ ಗೆ ೧೯೯೮ರಲ್ಲೂ ಮತ್ತು ಏಪ್ರಿಲ್ ೬, ೨೦೦೬ರಂದು, ಕೆನಡಾದ ಜೂನೋ ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಕೆನಡಿಯನ್ ಮ್ಯೂಸಿಕ್ ಹಾಲ್ ಆಫ್ ಫೇಮ್ ನಲ್ಲೂ ಆಡಮ್ಸ್ ನ ಹೆಸರನ್ನು ಸ್ಥಾಪಿಸುವುದರ ಮೂಲಕ ಆ ದೇಶದ ಅತ್ಯುಚ್ಛ ಗೌರವ ಅವನಿಗೆ ಸಂದಂತಾಯಿತು. ನ್ಯೂಫೌಂಡ್ ಲ್ಯಾಂಡ್ ನಲ್ಲಿ 2010ರ ಜೂನೋ ಪ್ರಶಸ್ತಿ ಸಮಾರಂಭದಲ್ಲಿ ಆಡಮ್ಸ್ ಭಾಗವಹಿಸಿ ಮಾನವೀಯತಾ ಪ್ರಶಸ್ತಿ (ಹ್ಯುಮೆನಿಟೇರಿಯನ್ ಅವಾರ್ಡ್)ಯನ್ನು ಸ್ವೀಕರಿಸಲಿದ್ದಾನೆ.[೩][೪]
ಸಂಗೀತದ ವೃತ್ತಿ ಜೀವನ
[ಬದಲಾಯಿಸಿ]ಆರಂಭಿಕ ವರ್ಷಗಳು
[ಬದಲಾಯಿಸಿ]ಆಡಮ್ಸ್ ಕೆನಡಾದ ಆಂಟಾರಿಯೋದಲ್ಲಿನ ಕಿಂಗ್ ಸ್ಟನ್ ನಲ್ಲಿ ಆಂಗ್ಲ ದಂಪತಿಗಳ ಮಗನಾಗಿ ಜನಿಸಿದನು.[೫] ಅವನ ಅಜ್ಜಿಯಿಂದ ಅವನು ಮಾಲ್ಟೀಸ್ ವಂಶಾಂಶವನ್ನು ರಕ್ತಗತವಾಗಿ ಪಡೆದನು.[೫] ಆಡಮ್ಸ್ ನ ತಂದೆಯು ರಾಯಭಾರಿಯಾಗಿದ್ದುದರಿಂದ ಅವನು ಜಗದೆಲ್ಲೆಡೆ ತನ್ನ ಮಾತಾಪಿತೃಗಳೊಡನೆ ಪ್ರಯಾಣ ಮಾಡುತ್ತಾ ಬೆಳೆದನು.[೫] ಹೀಗಾಗಿ ಅವನ ಹದಿಹರೆಯದ ಬಹುವಂಶವು ಇಂಗ್ಲೆಂಡ್, ಇಸ್ರೇಲ್, ಪೋರ್ಚುಗಲ್ ಮತ್ತು ಆಸ್ಟ್ರಿಯಾಗಳಲ್ಲಿ ಕಳೆದು, ಭಾಗಶಃ ಲಿಸ್ಬಾನ್ ನ ಸಮೀಪದ ಪೋರ್ಚುಗಲ್ ಪ್ರಾಂತ್ಯವಾದ ಬಿರ್ರೆಯಲ್ಲಿ ಕಳೆಯುವಂತಾಗಿ, ಅಲ್ಲಿ ಅವನು ಪೋರ್ಚುಗೀಸ್ ಭಾಷೆಯನ್ನು ಕಲಿತನು. ೧೯೭೩ರಲ್ಲಿ ಆಡಮ್ಸ್ ನ ಕುಟುಂಬವು ಕೆನಡಾಗೆ ಹಿಂತಿರುಗಿ ಬ್ರಿಟಿಷ್ ಕೊಲಂಬಿಯಾದ ಉತ್ತರ ವ್ಯಾಂಕೋವರ್ ನಲ್ಲಿ ನೆಲೆಯೂರಿತು. ಅವನ ಸಂಗೀತ ಸಂಬಂಧಿತ ಆಕಾಂಕ್ಷೆಗಳು ಅವನ ಹದಿಹರೆಯದಲ್ಲಿ ಚಿಗುರೊಡೆದು, ನಂತರದ ದಿನಗಳಲ್ಲಿ ರೋಲಿಂಗ್ ಸ್ಟೋನ್ ಪತ್ರಿಕೆಯ ಕಾರ್ಲೋ ಡಿ ಅಗೋಸ್ಟಿನೋಗೆ ವಿವರಿಸಿದಂತೆ "ಹೈಸ್ಕೂಲ್ ನಲ್ಲಿ ನಾನು ಸಂಗೀತದಲ್ಲಿ ಎಷ್ಟು ಆಸಕ್ತನಾಗಿದ್ದೆನೆಂದರೆ ನನಗೆ ಹುಡುಗಿಯರ ಕಡೆ ಗಮನ ನೀಡಲೂ ಆಗಲಿಲ್ಲ."[೫] ಅವನು ಪಾತ್ರೆ ತೊಳೆದು, ಪ್ರಾಣಿಗಳ ಆಹಾರ ಮಾರಿ, ರೆಕಾರ್ಡ್ ಅಂಗಡಿಗಳಲ್ಲಿ ಕೆಲಸ ಮಾಡಿಕೊಂಡು, ತನ್ನ ೧೫ರ ಹರೆಯದಲ್ಲಿ ಶಾಲೆಯಿಂದ ಹೊರಬಂದು ಶಾಕ್ ಮತ್ತು ಸ್ವೀನಿ ಟಾಡ್ ನಂತಹ ನೈಟ್ ಕ್ಲಬ್ ನ ಬ್ಯಾಂಡ್ ಗಳಲ್ಲಿ ಹಾಡತೊಡಗಿದನು. ಆ ಬ್ಯಾಂಡ್ ನವರು ಆಡಮ್ಸ್ ನನ್ನೇ ಮುಖ್ಯ ಹಾಡುಗಾರನಾಗಿರಿಸಿಕೊಂಡು ಇಫ್ ವಿಷಸ್ ವರ್ ಹಾರ್ಸಸ್ ಎಂಬ ಆಲ್ಬಮ್ಮನ್ನು ಹೊರತಂದರು.[೬] ಸುದೈವವಶಾತ್ ಡ್ರಮ್ಮರ್ ಜಿಮ್ ವ್ಯಾಲೇಸ್ ನೊಡನೆ ವ್ಯಾಂಕೋವರ್ ಸಂಗೀತದಂಗಡಿಯಲ್ಲಿ ಆದ ಭೇಟಿಯು ಅವರಿಬ್ಬರ ಗೀತ-ರಚನ ಸಹಭಾಗಿತ್ವಕ್ಕೆ ನಾಂದಿ ಹಾಡಿ, ಆ ಮಧುರ ಸಂಬಂಧ ಇಂದಿಗೂ ಮುಂದುವರೆದಿದೆ.[೫] ಅವರಿಬ್ಬರೂ ಬಹಳ ಕಲಾವಿದರಿಗೆ ಹಾಡು ಬರೆದುಕೊಟ್ಟಿದ್ದು ಅದರಲ್ಲಿ ನೀಲ್ ಡೈಮಂಡ್, ಕಿಸ್, ಪ್ರಿಸ್ಮ್, ಬಾನೀ ರೈಟ್, ರಾಡ್ ಸ್ಟುವರ್ಟ್, ಕ್ಯಾರ್ಲಿ ಸೈಮನ್ ಮತ್ತು ಲವರ್ ಬಾಯ್[ಸೂಕ್ತ ಉಲ್ಲೇಖನ ಬೇಕು] ಉಲ್ಲೇಖಾರ್ಹವಾದ ಹೆಸರುಗಳಲ್ಲಿ ಕೆಲವಾಗಿವೆ. ಆಡಮ್ಸ್ ಮತ್ತು ವ್ಯಾಲೇಸ್ ಇಬ್ಬರಿಗೂ ಕ್ಲಬ್ ನ ವಾತಾವರಣ ಸರಿಬರದೆ ವ್ಯಾಂಕೋವರ್ ನ ಸ್ಟುಡಿಯೋಗಳ[೫] ಸಮಯವನ್ನು ಬಾಡಿಗೆಗೆ ಪಡೆದು ಇಬ್ಬರೂ ಕಾರ್ಯೋದ್ಯುಕ್ತರಾದರು. ಮ್ಯಾಕ್ಲೀನ್ಸ್ ಪತ್ರಿಕೆಯ ಒಹಾರಾ ಇಂತೆನ್ನುತ್ತಾರೆ, "ವ್ಯಾಲೇಸ್ ಒಬ್ಬ ಗಾಯಕನ ಶೋಧದಲ್ಲಿದ್ದನು, ಆಡಮ್ಸ್ ಸಂಗೀತಕ್ಷೇತ್ರದಲ್ಲಿ ಗೌರವಾನ್ವಿತ ಸ್ಥಾನ ಪಡೆಯುವ ಹಾದಿ ಹುಡುಕುತ್ತಿದ್ದನು, ಇಬ್ಬರೂ ಪರಸ್ಪರರಿಗೆ ಹೊಂದಾವಣೆಯಾದರು."[೫]
೧೯೭೮ರಲ್ಲಿ, ತನ್ನ ೧೮ನೆಯ ವಯಸ್ಸಿನಲ್ಲಿ, ಆಡಮ್ಸ್ ಕೆಲವು ಪ್ರದರ್ಶನಗಳ ರೆಕಾರ್ಡಿಂಗ್ ಗಳನ್ನು ಟೊರೊಂಟೋದ A&M ರೆಕಾರ್ಡ್ಸ್ ಕಂಪನಿಗೆ ಕಳುಹಿಸಿದನು. ಕೆಲವೇ ದಿನಗಳಲ್ಲಿ ಅವರೊಂದಿಗೆ ಒಂದು ಡಾಲರ್ ಸಂಭಾವನಾ ಮೊತ್ತಕ್ಕೆ ಒಪ್ಪಂದಕ್ಕೆ ರುಜು ಹಾಕಿದನು.[೭] ಅವನ ೧೯೭೮ರಲ್ಲಿ ಬರೆದಂತಹ ಮೊದಲ ಕೆಲವು ದೃಷ್ಟಾಂತಗಳು ವರ್ಷಗಳ ನಂತರ ಮತ್ತೆ ಮತ್ತೆ ಬಿಡುಗಡೆಯಾಗಿದ್ದು, ಪ್ರಮುಖವಾಗಿ "ಐ ಆಮ್ ರೆಡಿ" ("ಕಟ್ಸ್ ಲೈಕ್ ಎ ನೈಫ್ ಎಂಬ ಆಲ್ಬಂಗಾಗಿ ರೆಕಾರ್ಡ್ ಮಾಡಲ್ಪಟ್ಟು, ನಂತರ MTV ಅನ್ ಪ್ಲಗ್ಡ್ ನಲ್ಲಿ ಮತ್ತೆ ಬಿಡುಗಡೆಯಾಯಿತು) ಮತ್ತು ಮೊದಲನೇ ಆಲ್ಬಂನಲ್ಲೇ ರೆಕಾರ್ಡ್ ಆಗಿದ್ದ "ರಿಮೆಂಬರ್" ಅಂತಹ ಡೆಮೋಗಳಾಗಿವೆ. ಈ ಎರಡೂ ಹಾಡುಗಳನ್ನು ಆ ಮೊದಲ ಆಲ್ಬಂ ಬರುವ ಮೊದಲೇ ಇತರೆ ಕಲಾವಿದರೂ ಅದನ್ನು ತಮ್ಮದಾಗಿಸಿಕೊಂಡು ಹಾಡಿದ್ದರು. ಇದೇ ಸಮಯದಲ್ಲಿ ರೆಕಾರ್ಡ್ ಆದ ಮತ್ತೊಂದು ಪ್ರದರ್ಶಿಕೆಯೆಂದರೆ "ಲೆಟ್ ಮಿ ಟೇಕ್ ಯೂ ಡ್ಯಾನ್ಸಿಂಗ್" ಎಂಬ ಹಾಡು.
೧೯೮೦ರ ದಶಕ
[ಬದಲಾಯಿಸಿ]ಅವನ ಸ್ವಂತ ಹೆಸರಿನ ಚೊಚ್ಚಲ ಆಲ್ಬಮ್ ಫೆಬ್ರವರಿ ೧೯೮೦ರಲ್ಲಿ ಬಿಡುಗಡೆಗೊಂಡು, ಆಡಮ್ಸ್ ಮತ್ತು ವ್ಯಾಲೇಸ್ ರ ದೀರ್ಘಕಾಲಿಕವಾದ ಗೀತರಚನ ಸಹಭಾಗಿತ್ವಕ್ಕೆ ಇದು ನಾಂದಿಯಾಯಿತು. "ರಿಮೆಂಬರ್" ಮತ್ತು "ವೇಸ್ಟಿಂಗ್ ಟೈಮ್" ಹಾಡುಗಳ ಹೊರತಾಗಿ ಆ ಆಲ್ಬಂನ ಬಹುತೇಕ ಹಾಡುಗಳು ೧೯೭೯ರ ಅಕ್ಟೋಬರ್ ೨೯ರಿಂದ ನವೆಂಬರ್ ೨೯ರವರೆಗೂ ಟೊರೊಂಟೋದ ಮಂಟಾ ಸ್ಟುಡಿಯೋಸ್ ನಲ್ಲಿ ರೆಕಾರ್ಡ್ ಗೊಂಡು, ಆಡಮ್ಸ್ ಮತ್ತು ವ್ಯಾಲೇಸ್ ರಿಂದ ಸಹ-ನಿರ್ಮಿತವಾದುದಾಯಿತು. ೧೯೮೬ರಲ್ಲಿ ಈ ಆಲ್ಬಮ್ಮನ್ನು ಕೆನಡಾದಲ್ಲಿ ಪ್ರಮಾಣೀಕೃತ ಗೋಲ್ಡ್ ಎಂದು ಕರೆದರು.[೮]
ನ್ಯೂ ಯಾರ್ಕ್ ಸಿಟಿಯಲ್ಲಿ ಎರಡು ವಾರಗಳ ಅವಧಿಯಲ್ಲಿ ರೆಕಾರ್ಡ್ ಆದ ಆಡಮ್ಸ್ ನ ಎರಡನೆಯ ಆಲ್ಬಂ, ಯೂ ವಾಂಟ್ ಇಟ್, ಯೂ ಗಾಟ್ ಇಟ್ , ಆಡಮ್ಸ್ ಮತ್ತು ಬಾಬ್ ಕ್ಲಿಯರ್ ಮೌಂಟೆನ್ ಸಹ-ನಿರ್ಮಾಪಕತ್ವದಲ್ಲಿ ಬಂದ ಮೊದಲನೆಯ ಆಲ್ಬಂ. ಆ ಆಲ್ಬಂ ೧೯೮೧ರಲ್ಲಿ ಬಿಡುಗಡೆಹೊಂದಿದ್ದು, ಅದರಲ್ಲಿ ಫಂ ರೇಡಿಯೋದಲ್ಲಿ ಜನರಿಂದ ಅತಿ ಬೇಡಿಕೆಯ ಹಾಡಾದ "ಲೋನ್ಲಿ ನೈಟ್ಸ್" ಗೀತೆಯೂ ಇತ್ತು. ಆದರೆ ಆಡಮ್ಸ್ ನ ಮೂರನೆಯ ಆಲ್ಬಂ ಬಿಡುಗಡೆಯಾದನಂತರವೇ ಆಡಮ್ಸ್ ಗೆ ಅಂತರರಾಷ್ಟ್ರೀಯ ಮಾನ್ಯತೆ, ಇನಪ್ರಿಯತೆ ಮತ್ತು ಆಲ್ಬಂ ಮಾರಾಟಗಳಲ್ಲಿ ಸಾಧನೆ ಸಾಧ್ಯವಾಗಿದ್ದು.
ಆಡಮ್ಸ್ ಇದೇ ಸಮಯದಲ್ಲಿ ಬೇರೆಯ ತಂಡಗಳಿಗೂ ಸಹ-ಲೇಖಕನಾಗಿ ಹಲವಾರು ಹಾಡುಗಳನ್ನು ಬರೆದುಕೊಟ್ಟನು"ವಾರ್ ಮೆಷಿನ್" ಮತ್ತು "ರಾಕ್ ಎಂಡ್ ರೋಲ್ ಹೆಲ್" ಹಾಡುಗಳನ್ನು ಕಿಸ್ ಗಾಗಿಯೂ ಮತ್ತು "ನೋ ವೇ ಟು ಟ್ರೀಟ್ ಎ ಲೇಡಿ" ಎಂಬ ಹಾಡನ್ನು ಬಾನೀ ರೇಯ್ಟ್ ನಿಗೂ ಈ ಕಾಲದಲ್ಲಿ ಬರೆದುಕೊಟ್ಟನು.
೧೯೮೩ರಲ್ಲಿ ಬಿಡುಗಡೆಯಾದ ಕಟ್ಸ್ ಲೈಕ್ ಎ ನೈಫ್ ಲೀಡ್ ಸಿಂಗಲ್ಸ್ (ಏಕಗಾಯಕನ ಧ್ವನಿ ಪ್ರಧಾನವಾದಂತಿದ್ದು ಹಾಡಿದ ಹಾಡುಗಳು)ಗಳು ಚಿನ್ನಾಗಿದ್ದುದರ ಮೂಲಕಾರಣದ ಪ್ರಭಾವದಿಂದ ಆಡಮ್ಸ್ ನನ್ನು ಯಶದ ಪಥಕ್ಕೆ ಕೊಂಡೊಯ್ದವು. "ಸ್ಟ್ರೈಟ್ ಫ್ರಂ ದ ಹಾರ್ಟ್" ಅತ್ಯಂತ ಯಶಸ್ವಿ ಹಾಡಾಗಿ ಬಿಲ್ ಬೋರ್ಡ್ ಹಾಟ್ ೧೦೦ರ ಹತ್ತನೆಯ ಸ್ಥಾನದಲ್ಲಿ ಮೆರೆಯಿತು.[೯] ಮತ್ತೊಂದು ಸಿಂಗಲ್ "ಕಟ್ಸ್ ಲೈಕ್ ಎ ನೈಫ್" ೧೫ನೆಯ ಸ್ಥಾನವನ್ನು ತಲುಪಿತು. "ದಿಸ್ ಟೈಮ್" ಹಾಡೂ ಸಹ ಹಾಟ್ 100ರ ಮೊದಲ ಶ್ರೇಣಿಗಳಲ್ಲೇ ಸ್ಥಳ ಪಡೆಯಿತು. ಆ ಆಲ್ಬಂನಲ್ಲಿನ ನಾಲ್ಕು ಸಿಂಗಲ್ಸ್ ಗಳಿಗಾಗಿ ಮ್ಯೂಸಿಕ್ ವಿಡಿಯೋಗಳನ್ನೂ ಬಿಡುಗಡೆ ಮಾಡಲಾಯಿತು. "ಕಟ್ಡ್ ಲೈಕ್ ಎ ನೈಫ್" ಆ ಆಲ್ಬಂನ ಬಹಳ ಜನಪ್ರಿಯ ಹಾಡಾಗಿ ಆಡಮ್ಸ್ ಗೆ ಅತಿ ಹೆಚ್ಚು ಖ್ಯಾತಿಯನ್ನು ತಂದುಕೊಟ್ಟಿತು. ಅದರ ಮ್ಯೂಸಿಕ್ ವಿಡಿಯೋ ಮ್ಯೂಸಿಕ್ ಟೆಲಿವಿಷನ್ ಗಳಲ್ಲಿ ಬಹಳ ಬಾರಿ ಪ್ರದರ್ಶಿಸಲ್ಪಟ್ಟಿತು ಆ ಆಲ್ಬಮ್ ಬಿಲ್ ಬೋರ್ಡ್ 200 ಆಲ್ಬಂ ಪಟ್ಟಿಯಲ್ಲಿ ೮ನೆಯ ಸ್ಥಾನವನ್ನೇರಿತು ಕೆನಡಾದಲ್ಲಿ ಮೂರು ಬಾರಿ ಪ್ಲಾಟಿನಮ್ ಪದವಿಯನ್ನೂ, ಯುನೈಟೆಡ್ ಸ್ಟೇಟ್ಸ್ ನಲ್ಲಿ ಪ್ಲಾಟಿನಮ್ ಪದವಿ ಮತ್ತು ಆಸ್ಟ್ರೇಲಿಯಾದಲ್ಲಿ ಚಿನ್ನದ ಪದವಿಯನ್ನು ತಲುಪಿತು.[೮][೯][೧೦]
ಆಡಮ್ಸ್ ನ ಬಲು ಹೆಚ್ಚು ಮಾರಾಟವಾಗುತ್ತಿರುವ ಆಲ್ಬಂ ಆದ ರೆಕ್ ಲೆಸ್ ಆಡಮ್ಸ್ ಮತ್ತುಬಾಬ್ ಕ್ಲಿಯರ್ ಮೌಂಟೆನ್ ರ ಸಹಭಾಗಿತ್ವದಲ್ಲಿ ಹೊರಬಂದು ಬಿಲ್ ಬೋರ್ಡ್ 200ರ ಮೊದಲನೆಯ ಸ್ಥಾನವನ್ನು ಅಲಂಕರಿಸಿತು.[೯] ನವೆಂಬರ್ ೧೯೮೪ರಲ್ಲಿ ಬಿಡುಗಡೆಯಾದ ಆ ಆಲ್ಬಂನಲ್ಲಿ "ರನ್ ಟು ಯೂ" ಮತ್ತು "ಸಮ್ಮರ್ ಆಫ್ '69" ಎಂಬ ಎರಡು 'ಏಕಗಾಯಕ'(ಸಿಂಗಲ್ಸ್)ಗಳೂ ಇದ್ದವು. ಟೀನಾ ಟರ್ನರ್ ಳೊಡನೆ ಹಾಡಿದ ಜನಪ್ರಿಯ ಸಿಂಗಲ್ "ಇಟ್ಸ್ ಓನ್ಲಿ ಲವ್" ರಾಕ್ ಸಂಗೀತದ ಅತ್ಯುತ್ತಮ ಯುಗಳ/ವೃಂದ ಗಾಯನ ಪ್ರದರ್ಶನವೆಂದು ಗ್ರ್ಯಾಮಿ ಅವಾರ್ಡ್ ಗಾಗಿ ಆಯ್ಕೆಯಾಗಿತ್ತು. ೧೯೮೬ರಲ್ಲಿ ಆ ಹಾಡು ವೇದಿಕೆಯಲ್ಲಿ ನೀಡಿದ ಅತ್ಯುತ್ತಮ ಪ್ರದರ್ಶನವೆಂದು MTV ಪ್ರಶಸ್ತಿ ಗಳಿಸಿತು.[೧೧] ಆಲ್ಬಂ ಬಿಡುಗಡೆಯಾದನಂತರ ಆಡಮ್ಸ್ ನನ್ನು ಶ್ರೇಷ್ಠ ರಾಕ್ ಗಾಯನ ಪ್ರದರ್ಶನ ನೀಡಿದ ಪುರುಷನೆಂದು ನಾಮನಿರ್ದೇಶನ ಮಾಡಲಾಯಿತು.[೧೧] ಈ ಆಲ್ಬಮ್ ಯುನೈಟೆಡ್ ಸ್ಟೇಟ್ಸ್ ನಲ್ಲಿ ಅತಿ ಹೆಚ್ಚು ಮಾರಾಟಗೊಂಡ ಆಡಮ್ಸ್ ನ ಆಲ್ಬಂ ಆಗಿದ್ದು, ಐದು ಬಾರಿ ಪ್ಲಾಟಿನಮ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.[೧೨]
ರೆಕ್ ಲೆಸ್ ನಲ್ಲಿ ಜನಪ್ರಿಯ ಸಿಂಗಲ್ಸ್ ಆದ "ರನ್ ಟು ಯೂ", "ಹೆವನ್" "ಸಮ್ಮರ್ ಆಫ್ '69", "ಒನ್ ನೈಟ್ ಲವ್ ಅಫೇರ್" ಮತ್ತು ಟೀನಾ ಟರ್ನರ್ ಳೊಡನೆ ಹಾಡಿದ "ಇಟ್ಸ್ ಓನ್ಲಿ ಲವ್" ಹಾಡುಗಳು ಇದ್ದವು. ಎಲ್ಲಾ ಸಿಂಗಲ್ಸ್ ಗಳೊಂದಿಗೂ ಸಂಗೀತದ ವೀಡಿಯೋ ಇದ್ದಿತು ಮತ್ತು ಎಲ್ಲವೂ ಬಿಲ್ ಬೋರ್ಡ್ ಹಾಟ್ ೧೦೦ನಲ್ಲಿ ದಾಖಲಾದವು. ಆದರೆ "ರನ್ ಟು ಯೂ", "ಹೆವನ್" "ಸಮ್ಮರ್ ಆಫ್ '೬೯",ಮಾತ್ರ ಆ ಪಟ್ಟಿಯಲ್ಲಿ ಟಾಪ್ ಟೆನ್ ನಲ್ಲಿ ರಾರಾಜಿಸಿದವು.[೯] "ಹೆವನ್" "ರೆಕ್ ಲೆಸ್ " ನ ಅತ್ಯಂತ ಯಶಸ್ವಿ ಸಿಂಗಲ್ ಆಗಿ, ಬಿಡುಗಡೆಯ ಸಮಯದಲ್ಲಿ ಪಾಪ್ ಪಟ್ಟಿಗಳಲ್ಲಿ ಅಗ್ರಶ್ರೇಣಿಯಲ್ಲಿದ್ದು, ಬಿಲ್ ಬೋರ್ಡ್ ಹಾಟ್ ೧೦೦ನ ಶಿಖರಕ್ಕೇರಿದ್ದಲ್ಲದೆ ರಾಕ್ ಮುಖ್ಯವಾಹಿನಿಯ ಪಟ್ಟಿಯಲ್ಲೂ ೯ನೆಯ ಸ್ಥಾನವನ್ನು ಅಲಂಕರಿಸಿತು.[೯]
೧೯೮೪ರಲ್ಲಿ ಆಡಮ್ಸ್ ತನ್ನ ಪ್ರವಾಸಿ ತಂಡದ ಇತರ ಸದಸ್ಯರಾದ ಕೀತ್ ಸ್ಕಾಟ್, ಡೇವ್ ಟೈಲರ್, ಪ್ಯಾಟ್ ಸ್ಟುವರ್ಡ್, ಮತ್ತು ಜಾನಿ ಬ್ಲಿಟ್ಝ್ ರೊಡನೆ ಚಿಕಾಗೋ, ಡೆಟ್ರಾಯ್ಟ್, ನ್ಯೂಯಾರ್ಕ್ ಮತ್ತು ಫಿಲಡೆಲ್ಫಿಯಾಗಳಲ್ಲಿ ಸಂಗೀತ ಕಚೇರಿಗಳನ್ನು ನೀಡಿದನು.[೧೩] ೧೯೮೫ರ ಆದಿಯಲ್ಲಿ ಆಡಮ್ಸ್ ಯುನೈಟೆಡ್ ಸ್ಟೇಟ್ಸ್ ಪರ್ಯಂತ ಪ್ರವಾಸ ಕೈಗೊಂಡನು, ನಂತರ ಜಪಾನ್, ಆಸ್ಟ್ರೇಲಿಯಾ, ಯೂರೋಪ್ ಮತ್ತು ಕೊನೆಯಲ್ಲಿ ಕೆನಡಾಗೆ ಪ್ರವಾಸಗೈದನು.[೧೩] ನಾಲ್ಕು ಜೂನೋ ಪ್ರಶಸ್ತಿಗಳನ್ನು ಗೆದ್ದ ನಂತರ ಆಡಮ್ಸ್ ಕೆನಡಾ ಪ್ರವಾಸವನ್ನು ಆರಂಭಿಸಿ ಅಲ್ಲಿನ ಎಲ್ಲಾ ಪ್ರಮುಖ ನಗರಗಳಲ್ಲೂ ಸಂಗೀತ ಕಾರ್ಯಕ್ರಮ ನೀಡಿದನು. ನಂತರ ದಕ್ಷಿಣದತ್ತ ಪ್ರಯಾಣ ಬೆಳೆಸಿ ಅಮೆರಿಕನ್ ವೆಸ್ಟ್ ಕೋಸ್ಟ್ ಗೆ ಹೋಗಿ, ಕಡೆಯದಾಗಿ ಲಾಸ್ ಏಎಂಜಲೀಸ್ ನಲ್ಲಿ ತುಂಬಿದ ಸಭಾಂಗಣದಲ್ಲಿ ಎರಡು ಪ್ರದರ್ಶನಗಳನ್ನು ಇತ್ತನು.[೧೩]
ಯುನೈಟೆಡ್ ಸ್ಟೇಟ್ಸ್ ನ ಪ್ರವಾಸದ ನಂತರ ಆಡಮ್ಸ್ ಆ ದೇಶದ ಬರಪರಿಹಾರನಿಧಿಗಾಗಿ ಇಥಿಯೋಪಿಯಾದಲ್ಲಿ ಕಾರ್ಯಕ್ರಮ ನೀಡಿದನು.[೧೩] ನಾರ್ದ್ರನ್ ಲೈಟ್ಸ್ ಎಂಬ ಪ್ರತಿಷ್ಠಿತ ಕೆನಡಾದ ಕಲಾವಿದರ ಮಹಾನ್ ಗುಂಪು "ಟಿಯರ್ಸ್ ಆರ್ ನಾಟ್ ಎನಫ್" ಎಂಬ ಆಫ್ರಿಕಾದ ಬರ ಪರಿಹಾರನಿಧಿ ಸಂಗ್ರಹಕ್ಕಾಗಿ ತಯಾರಿಸಿದ ಹಾಡಿನ ರೆಕಾರ್ಡಿಂಗ್ ನಲ್ಲಿ ಆಡಮ್ಸ್ ಸಹ ಭಾಗಿಯಾಗಿದ್ದನು. ನಂತರ ರಾಕ್ ಹಾಡುಗಾರ್ತಿ ಟೀನಾ ಟರ್ನರ್ ಳೊಡನೆ ಆಡಮ್ಸ್ ಯೂರೋಪ್ ನ ಐವತ್ತು ನಗರಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿ, ಏಪ್ರಿಲ್ ನಲ್ಲಿ ಲಂಡನ್ ನಗರದ ಹ್ಯಾಮರ್ಸ್ಮಿತ್ ಓಡಿಯನ್ ನಲ್ಲಿ ಕಿಕ್ಕಿರಿದ ಜನಜಂಗುಳಿಯ ಎದುರು ಮೂರು ಪ್ರದರ್ಶನ ನೀಡಿ ತನ್ನ ಆ ಪ್ರವಾಸಕ್ಕೆ ಮಂಗಳ ಹಾಡಿದನು.[೧೩] ಆಡಮ್ಸ್ "ವರ್ಲ್ಡ್ ವೈಡ್ ಇನ್ ೮೫" ಎಂಬ ಪ್ರವಾಸವನ್ನು ಒಕಲ್ಹೋಮಾದಿಂದ ಆರಂಭಿಸಿ ೧೯೮೫೬ ಅಕ್ಟೋಬರ್ ವರೆಗೆ ಕಾರಯಕ್ರಮಗಳನ್ನು ನೀಡಿದನು.[೧೩] ನಂತರದ ದಿನಗಳಲ್ಲಿ ವ್ಯಾಂಕೋವರ್ ಗೆ ಭೇಟಿ ನೀಡಿ, ತದನಂತರ ಅಮೆರಿಕದ ಪಶ್ಚಿಮ ತೀರದಲ್ಲಿ ಕಿಕ್ಕಿರಿದ ಅಭಿಮಾನಿಗಳ ಮುಂದೆ ಎರಡು ಪ್ರದರ್ಶನಗಳನ್ನು ನೀಡಿದನು.[೧೩]
ರೆಕ್ ಲೆಸ್ ನ ನಂತರ ಬಿಡುಗಡೆಯಾದ ಆಲ್ಬಂ ಇಂಟು ದ ಫೈರ್ ೧೯೮೭ರಲ್ಲಿ ಬಿಡುಗಡೆಯಾಯಿತು. (ನೋಡಿ 1987 ಇನ್ ಮ್ಯೂಸಿಕ್). ಈ ಆಲ್ಬಮ್ ಬ್ರಿಟಿಷ್ ಕೊಲಂಬಿಯಾದ ವ್ಯಾಂಕೋವರ್ ನ ಕ್ಲಿಫ್ ಹ್ಯಾಂಗರ್ ಸ್ಟುಡಿಯೋದಲ್ಲಿ ರೆಕಾರ್ಡ್ ಆಗಿ, ಸಂಕಲನವು ಲಂಡನ್ ನ AIR ಸ್ಟುಡಿಯೋಸ್ ಮತ್ತು ವ್ಯಾಂಕೋವರ್ ನ ವೇರ್ ಹೌಸ್ ಸ್ಟುಡಿಯೋಗಳಲ್ಲಿ ನಡೆಯಿತು. ಈ ಆಲ್ಬಮ್ ಜನಪ್ರಿಯ ಗೀತೆಗಳಾದ "ಹೀಟ್ ಆಫ್ ದ ನೈಟ್" ಮತ್ತು "ಹಾರ್ಟ್ಸ್ ಆನ್ ಫೈರ್" ಗಳನ್ನು ಹೊಂದಿದ್ದು, ಅಟ್ಲಾಂಟಿಕ್ ನ ಎರಡೂ ಬದಿಗಳಲ್ಲಿ ಮೊದಲ ಹತ್ತು ಜನಪ್ರಿಯ ಆಲ್ಬಂಗಳ ಪಟ್ಟಿಯಲ್ಲಿ ಸ್ಥಾನ ಪಡೆಯಿತು.
೧೯೯೦ರ ದಶಕ
[ಬದಲಾಯಿಸಿ]ಆಡಮ್ಸ್ ನ ಮುಂದಿನ ಆಲ್ಬಂ ವೇಕಿಂಗ್ ಅಪ್ ದ ನೈಬರ್ಸ್ ಮಟ್ ಲ್ಯಾಂಜೆಲ್ ಮತ್ತು ಆಡಮ್ಸ್ ರ ಸಹಭಾಗಿತ್ವದಲ್ಲಿ ಹೊರತರಲ್ಪಟ್ಟು, ಜಗದಾದ್ಯಂತ ಹತ್ತು ಮಿಲಿಯನ್ ಗಿಂತಲೂ ಹೆಚ್ಚು ಪ್ರತಿಗಳು ಮಾರಾಟವಾಗಿ, ಬಿಲ್ ಬೋರ್ಡ್ 200ರ ಶೃಂಗದ ಆರನೆಯ ಹಂತವನ್ನು ತಲುಪಿತು.[೯]. ಈ ಆಲ್ಬಂ ಅಲ್ಲಿಗಿಂತಲೂ ಅಟ್ಲಾಂಟಿಕ್ ನ ಇತ್ತಣ ಭಾಗದಲ್ಲಿ ಹೆಚ್ಚು ಜನಪ್ರಿಯವಾಗಿ ಯೂರೋಪ್, ಯು.ಕೆ. ಮತ್ತು ಗರ್ಮನಿಗಳ ಮಾರುಕಟ್ಟೆಗಳಲ್ಲಿ ಮೊದಲ ಸ್ಥಾನ ಪಡೆಯಿತು. ೧೯೯೧ರ ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾದ ಈ ಆಲ್ಬಮ್ ಸತ್ವಯುತ ಬಲ್ಲಾಡ್ ಆದ "(ಎವೆರಿಥಿಂಗ್ ಐ ಡು) ಐ ಡು ಇಟ್ ಫಾರ್ ಯು"ವನ್ನು ಒಳಗೊಂಡಿತ್ತು. ಈ ಹಾಡು ಕೆವಿನ್ ಕೋಸ್ಟ್ ನರ್ ಮತ್ತು ಅಲನ್ ರಿಕ್ ಮನ್ ನಟಿಸಿದ ಚಲನಚಿತ್ರRobin Hood: Prince of Thieves ದಲ್ಲಿ ಉಪಯೋಗಿಸಲ್ಪಟ್ಟಿತು. ಈ ಹಾಡು ಹಲವಾರು ದೇಶಗಳಲ್ಲಿ ಬಹು ಜನಪ್ರಿಯವಾಗಿ US, UK, ಫ್ರಾನ್ಸ್, ಆಸ್ಟ್ರಿಯಾ ಮತ್ತು ಜರ್ಮನಿಗಳಲ್ಲಿ ಜನಪ್ರಿಯತೆಯ ಉತ್ತುಂಗವನ್ನೇ ತಲುಪಿತು. "(ಎವೆರಿಥಿಂಗ್ ಐ ಡು) ಐ ಡು ಇಟ್ ಫಾರ್ ಯು" UK ಸಿಂಗಲ್ಸ್ ಚಾರ್ಟ್ ನಲ್ಲಿ ೧೬ ವಾರಗಳ ಕಾಲ ಸತತವಾಗಿ ಮೊದಲನೆಯ ಸ್ಥಾನದಲ್ಲಿದ್ದು ಒಂದು ನೂತನ ದಾಖಲೆಯನ್ನೇ ನಿರ್ಮಿಸಿತು. ಹಿಂದಿನ ಎಲ್ಲಾ ದಾಖಲೆಗಳನ್ನು ಹತ್ತಿಕ್ಕುವಂತಹ ನಾಲ್ಕು ಮಿಲಿಯನ್ ರೆಕಾರ್ಡ್ ಗಳ ಮಾರಾಟವನ್ನು ಈ ಹಾಡು ತಲುಪಿತು.[೧೨] [೧೪][೧೫]ಕೆನಡಿಯನ್ ಮಾಹಿತಿ ಕಾನೂನನ್ನು ಮತ್ತೆ ಪರಿಶೀಲಿಸುವುದರ ಮೂಲಕ ೧೯೯೧ರಲ್ಲಿ ಕಾನೂ ರೀತ್ಯಾ ಅಗತ್ಯವಾದ ರೀತಿಯಲ್ಲಿ ಕೆನಡಿಯನ್ ಸಂಗೀತ ಪ್ರಸಾರ ಮಾಡುವ ರೇಡಿಯೋ ನಿಲಯಗಳಿಗೆ ಈ ಆಲ್ಬಂ ಉಪಯೋಗಿಸಲು ಅನುವುಮಾಡಿಕೊಡಲಾಯಿತು.[೧೫] ಚಲನಚಿತ್ರ ಅಥವಾ ಕಿರುತೆರೆಗೆಂದೇ ಬರೆದ ಅತ್ಯುತ್ತಮ ಗೀತರಚನೆಗೆ ಆಡಮ್ಸ್ ಗೆ ೧೯೯೧ರಲ್ಲಿ ಗ್ರ್ಯಾಮಿ ಪ್ರಶಸ್ತಿ ಲಭಿಸಿತು.[೧೬][೧೭]
ಆಡಮ್ಸ್ ಅಕ್ಟೋಬರ್ ೪, ೧೯೯೧ರಂದು ವೇಕಿಂಗ ಅಪ್ ದ ವರ್ಲ್ಡ್ ಎಂಬ ನಾರ್ದ್ರನ್ ಐರ್ಲ್ಯಾಂಡ್ ನ ಬೆಲ್ ಫಾಸ್ಟ್ ನಲ್ಲಿ ಆರಂಭಿಸಿದ ಪ್ರವಾಸದ ಮೂಲಕ ಈ ಆಲ್ಬಂಗೆ ಮತ್ತಷ್ಟು ಪ್ರಚಾರ ದೊರಕಿ ಡಿಸೆಂಬರ್ ೧೮, ೧೯೯೧ರಂದು ರೇಕ್ ಜವಿಕ್ ಎಂಬ ಐಸ್ ಲ್ಯಾಂಡ್ ನ ಪ್ರಾತ್ಯದಲ್ಲಿ ಪ್ರಪ್ರಥಮವಾದ ಎರಡು ಕಾರ್ಯಕ್ರಮಗಳನ್ನು ನೀಡಿದುದಲ್ಲದೆ ನಂತರ ೧೦ನೇ ಜನವರಿ ೧೯೯೨ರಂದು ಯುನೈಟೆಡ್ ಸ್ಟೇಟ್ಸ್ ನ ರಿಟ್ಝ್ ಥಿಯೇಟರ್ ನಲ್ಲಿ ಒಂದು ತಂಡದೊಂದಿಗೆ ಕಚೇರಿ ನೀಡಿದನು.[೧೩] ಕೇವಲ ಇಪ್ಪತ್ತು ನಿಮಿಷಗಳಲ್ಲಿ ಟಿಕೆಟ್ ಗಳೆಲ್ಲಾ ಮಾರಾಟವಾಗಿಹೋದವು.[೧೩] ಸಂಗೀತದ ದಂತಕಥೆಗಳೇ ಅದ ಬೆನ್ ಇ ಕಿಂಗ್ ಮತ್ತು ನೋನಾ ಹೆಂಡ್ರಿಕ್ಸ್ ಆ ಸಭೆಯಲ್ಲಿ ಹಾಜರಿದ್ದರು.[೧೩] "ವೇಕಿಂಗ ಅಪ್ ದ ವರ್ಲ್ಡ್"ನ ಕೆನಡಾದ ಪ್ರವಾಸವು ನೋವಾ ಸ್ಕಾಟಿಯಾದ ಸಿಡ್ನಿಯಲ್ಲಿ ಜನವರಿ ೧೩, ೧೯೯೨ರಂದು ಆರಂಭವಾಗಿ, ಅಲ್ಲಲ್ಲಿ ಕಚೇರಿಗಳು ನಡೆದು, ಕುರ್ಚಿಗಳನ್ನು ನೀಡದೆ ನಿಲ್ಲಲು ಮಾತ್ರ ಅವಕಾಶವಿರುವ ಕೆನಡಾದ ವ್ಯಾಂಕೋವರ್ ನ ಸಭಾಂಗಣದಲ್ಲಿ ೩೧ರಂದು ಕೊನೆಯ ಕಚೇರಿ ನಡೆಸುವುದರ ಮೂಲಕ ಅಂತ್ಯಗೊಂಡಿತು. ಫೆಬ್ರವರಿ ೧೯೯೨ರಲ್ಲಿ ಏಳು ಕಾರ್ಯಕ್ರಮಗಳನ್ನೊಳಗೊಂಡ ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾ ಪ್ರವಾಸವನ್ನು ಸಿಡ್ನಿಯಲ್ಲಿ ಪತ್ರಕರ್ತರೊಡನೆ ಭೇಟಿಯಾಗುವುದರ ಮೂಲಕ ಆರಂಭಿಸಿದನು. ಫೆಬ್ರವರಿ ೨೧ರಂದು ಪ್ರವಾಸವು ಜಪಾನ್ ನೆಡೆಗೆ ಹೊರಳಿ, ಅಲ್ಲಿನ ಆರು ನಗರಗಳಲ್ಲಿ ಸುಮಾರು ಹನ್ನೆರಡು ಕಾರ್ಯಕ್ರಮಗಳನ್ನು ನೀಡಿದನು. ಆಲ್ಬರ್ಟಾದ ಕ್ಯಾಲ್ಗಾರಿಯಲ್ಲಿ ಮಚ್ ಮ್ಯೂಸಿಕ್ ನ ಟೆರಿ ಡೇವ್ ಮುಲಿಗನ್ ಗೆ ಒಂದು ಸಂದರ್ಶನ ನೀಡಿದ್ದು, ಆ ಸಂದರ್ಶನವು ಮಾರ್ಚ್ ನ ಮಧ್ಯಭಾಗದಲ್ಲಿ ಪ್ರಸಾರವಾಗಬೇಕಿತ್ತು.[೧೩] ೧೯೯೨ರ ಜೂನ್ ನಲ್ಲಿ ಪ್ರವಾಸ ಮುಂದುವರೆಸಿದ ಆಡಮ್ಸ್ ಇಟಲಿ, ಜರ್ಮನಿ, ಹಾಲೆಂಡ್, ಸ್ಕ್ಯಾಂಡಿನೇವಿಯಾಗಳಲ್ಲದೆ ಹಲವಾರು ಯೂರೋಪಿಯನ್ ದೇಶಗಳಲ್ಲಿ ಕಾರ್ಯಕ್ರಮವಿತ್ತನು ಮತ್ತು ಜುಲೈ ೧೯೯೨ರಲ್ಲಿ ಹಂಗೇರಿ ಮತ್ತು ಟರ್ಕಿಯ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಕಾರ್ಯಕ್ರಮ ನೀಡಿದನು.(ಟರ್ಕಿಯಲ್ಲಿ "ಡು ಐ ಹ್ಯಾವ್ ಟು ಸೇ ದ ವರ್ಡ್ಸ್" ಹಾಡನ್ನು ಚಿತ್ರೀಕರಿಸಿದನು). ಈ ಸುದೀರ್ಘ ಪ್ರವಾಸದಲ್ಲಿ ವೇಕಿಂಗ್ ಅಪ್ ದ ನೈಬರ್ಸ್ ಆಲ್ಬಂನಿಂದ ಮತ್ತಷ್ಟು ಸಿಂಗಲ್ಸ್ ಗಳು ಬಿಡುಗಡೆಗೊಂಡವು; USನಲ್ಲಿ ರಾಕ್ ಹಾಡಾದ "ಕಾಂಟ್ ಸ್ಟಾಪ್ ದಿಸ್ ಥಿಂಗ್ ವಿ ಸ್ಟಾರ್ಟೆಡ್" ಎರಡನೆಯ ಸ್ಥಾನದಲ್ಲಿ ಮೆರೆದರೆ ಸತ್ವಯುತ ಬಲ್ಲಾಡ್ ಆದ "ಡು ಐ ಹ್ಯಾವ್ ಟು ಸೇ ದ ವರ್ಡ್ಸ್?" ೧೧ನೆಯ ಸ್ಥಾನವನ್ನು ಗಳಿಸಿತು. UKಯಲ್ಲಿ ಮಂದ್ರಸ್ಥಾಯಿಯ "ಥಾಟ್ ಐ ಡೈಡ್ ಎಂಡ್ ಗಾನ್ ಟು ಹೆವೆನ್" ಕೇವಲ "(ೆವೆರಿಥಿಂಗ್ ಐ ಡು) ಐ ಡು ಇಟ್ ಫಾರ್ ಯೂ"ಗಿಂತ ಮಾತ್ರ ಹಿಂದಿದ್ದು ಟಾಪ್ ಟೆನ್ ಪಟ್ಟಿಯಲ್ಲಿ ಸ್ಥಾನ ಪಡೆಯಿತು. ಸೆಪ್ಟೆಂಬರ್ ನಿಂದ ಡಿಸೆಂಬರ್ ೧೯೯೩ರವರೆಗೆ ಈ ಪ್ರವಾಸ ಯುನೈಟೆಡ್ ಸ್ಟೇಟ್ಸ್ ನಲ್ಲೇ ಜರುಗಿತು. ಫೆಬ್ರವರಿ ೧೯೯೩ರಲ್ಲಿ ಏಷ್ಯಾದ ಪ್ರವಾಸವು ಥೈಲ್ಯಾಂಡ್, ಸಿಂಗಪುರ್, ಜಪಾನ್ ಮತ್ತು ಹಾಂಗ್ ಕಾಂಗ್ ಗಳಲ್ಲಿ ಜರುಗಿ, ಮಾರ್ಚ್ ನಿಂದ ಮೇ ವರೆಗೆ ಮತ್ತೆ ಅಮೆರಿಕಕ್ಕೆ ಮರಳಿದನು.[೧೩][೧೭]
ನವೆಂಬರ್ 1993ರಲ್ಲಿ ಆಡಮ್ಸ್ ಒಂದು ಸಮಗ್ರ ಆಲ್ಬಮ್ಮ ನ್ನು ಸೋ ಫಾರ್ ಸೋ ಗುಡ್ ಎಂಬ ಹೆಸರಿನಲ್ಲಿ ಹೊರತಂದನು; ಇದೂ ಸಹ UK,ಜರ್ಮನಿ ಮತ್ತು ಆಸ್ಟ್ರಿಯಾಗಳಲ್ಲದೆ ಹಲವಾರು ದೇಶಗಳಲ್ಲಿ ಬಹಳ ಜನಪ್ರಿಯವಾಯಿತು. ಅದರಲ್ಲಿನ ನೂತನ ಗೀತೆಯಾದ "ಪ್ಲೀಸ್ ಫರ್ಗಿವ್ ಮಿ" ಆಸ್ಟ್ರೇಲಿಯಾದಲ್ಲಿ ನಂಬರ್ ೧ ಜನಪ್ರಿಯಗೀತೆಯಾದರೆ US, UK, ಮತ್ತು ಜರ್ಮನಿಗಳಲ್ಲಿ ೩ನೆಯ ಅತಿ ಜನಪ್ರಿಯ ಹಾಡಾಯಿತು. ೧೯೯೪ರಲ್ಲಿ ಚಲನಚಿತ್ರಕ್ಕೆಂದೇ ಬರೆದ ಮತ್ತೊಂದು ಸತ್ವಯುತ ಬಲ್ಲಾಡ್ ಆದ "ಆಲ್ ಫಾರ್ ಲವ್" ಎಂಬ ಸಿಂಗಲ್ ಅನ್ನು ರಾಡ್ ಸ್ಟುವರ್ಟ್ ಮತ್ತು ಸ್ಟಿಂಗ್ ಜೊತೆ ಸೇರಿ ಹಾಡಿದನು. ಈ ಹಾಡು ಜಗದಾದ್ಯಂತ ಮೊದಲ ಸ್ಥಾನ ಪಡೆಯಿತು. ಇದರ ನಂತರ ಆಡಮ್ಸ್ ನ ಮೂರನೆಯ ಚಿತ್ರಗೀತೆ "ಹ್ಯಾವ್ ಯೂ ಎವರ್ ರಿಯಲಿ ಲವ್ಡ್ ಎ ವುಮನ್?" ೧೯೯೫ರಲ್ಲಿ ಬಿಡುಗಡೆಯಾಯಿತು. ( ಈ ಹಾಡು ಡಾನ್ ಜುವಾನ್ ಡಿಮಾರ್ಕೋ ಎಂಬ ಚಲನಚಿತ್ರದ ಧ್ವನಿಮುದ್ರಿಕೆ ಯೊಡನೆ ಬಿಡುಗಡೆಯಾಯಿತು). ಇದೂ ಸಹ ಅಮೆರಿಕ ಮತ್ತು ಆಸ್ಟ್ರೇಲಿಯಾಗಳಲ್ಲಿ ನಂಬರ್ ೧ ಆಗಿಯೂ, ಬ್ರಿಟನ್ ಮತ್ತು ಜರ್ಮನಿಯಲ್ಲಿ ಮೊದಲ ೫ರಲ್ಲಿ ಒಂದಾಗಿಯೂ ಸ್ಥಾಪಿತವಾಯಿತು. ಜೂನ್ ೧೯೯೬ರಲ್ಲಿ 18 ಟಿಲ್ ಐ ಡೈ ಎಂಬ ಹೆಸರಿನಲ್ಲಿ ಬಿಡುಗಡೆಯಾದ ಆಲ್ಬಂನಲ್ಲಿ ಬ್ರಿಟನ್ನಿನ ಮೊದಲ ಹತ್ತರ ಘಟ್ಟ ಮುಟ್ಟಿದ್ದ ಸಿಂಗಲ್ಸ್ "ದ ಓನ್ಲಿ ಥಿಂಗ್ ದಟ್ ಲುಕ್ಸ್ ಗುಡ್ ಆನ್ ಮಿ" ಮತ್ತು "ಲೆಟ್ಸ್ ಮೇಕ್ ಎ ನೈಟ್ ಟು ರಿಮೆಂಬರ್" ಗಳಿದ್ದವು. ಈ ಆಲ್ಬಂ ಅಮೆರಿಕದ ಬಿಲ್ ಬೋರ್ಡ್ 200ರಲ್ಲಿ ಮೂರುವಾರಗಳ ಕಾಲ ಮೂವತ್ತೊಂದನೆಯ ಸ್ಥಾನವನ್ನು ಮಾತ್ರ ತಲುಪಲು ಸಾಧ್ಯವಾಯಿತು.[೯] ಆದರೆ ಯೂರೋಪ್ ಮತ್ತು ಆಸ್ಟ್ರೇಲಿಯಾಗಳಲ್ಲಿ ಇಲ್ಲಿಗಿಂತಲೂ ಹೆಚ್ಚು ಜನಪ್ರಿಯವಾಗಿ UK ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಗಳಿಸಿ ಅಲ್ಲಿನ ಆಡಮ್ಸ್ ನ ಸತತವಾಗಿ ಮೂರನೆಯ ನಂಬರ್ ೧ ಹಾಡಾಗಿ ದಾಖಲಾಯಿತು. [೧೮][೧೯][೨೦][೨೧][೨೨][೨೩][೨೪][೨೫][೨೬][೨೭] ಈ ಆಲ್ಬಂ ಪ್ಲಾಟಿನಂ ಎಂದು ಯುನೈಟೆಡ್ ಸ್ಟೇಟ್ಸ್ ನಲ್ಲಿ ಘೋಷಿತವಾಗಿದ್ದು RIAA[೧೨] ದಿಂದ ಹೀಗೆ ಘೋಷಿಸಲ್ಪಟ್ಟ ಆಡಮ್ಸ್ ನ ಕಡೆಯ ಆಲ್ಬಂ ಆಗಿದೆ. "೧೮ ಟಿಲ್ ಐ ಡೈ " ಮೂರು ಬಾರಿ ಪ್ಲಾಟಿನಮ್ ಎಂದು ಕೆನಡಾ ಮತ್ತು ಆಸ್ಟ್ರೇಲಿಯಾಗಳು ಮಾನ್ಯತೆ ನೀಡಿದರೆ, UK ಎರಡು ಬಾರಿ ಪ್ಲಾಟಿನಮ್ ಎಂಬ ಮಾನ್ಯತೆ ನೀಡಿತು.[೮][೧೦][೨೮] ಡಿಸೆಂಬರ್ ೧೯೯೭ರಲ್ಲಿ ಆಡಮ್ಸ್ MTV ಅನ್ ಪ್ಲ ಗ್ಡ್ ಎಂಬ "ಬ್ಯಾಕ್ ಟು ಯೂ", "ಎ ಲಿಟಲ್ ಲವ್" ಮತ್ತು "ವೆನ್ ಯೂ ಲವ್ ಸಮ್ಒನ್" ಎಂಬ ಮೂರು ಹೊಸ ಹಾಡುಗಳುಳ್ಳ ಆಲ್ಬಮ್ಮನ್ನು ಬಿಡುಗಡೆ ಮಾಡಿದನು. "ಬ್ಯಾಕ್ ಟು ಯೂ' ಮೊದಲ ಸಿಂಗಲ್ ಆಗಿದ್ದು, ನಂತರ "ಐ ಆಮ್ ರೆಡಿ" ಎಂಬ "ಕಟ್ಸ್ ಲೈಕ್ ಎ ನೈಫ್ ' ಹಾಡಿನ ಧ್ವನಿರೂಪಕವಾಗಿತ್ತು ಈ ಆಲ್ಬಮ್ ಜರ್ಮನಿಯಲ್ಲಿ ಮೊದಲ ಹತ್ತರ ಶ್ರೇಣಿ ತಲುಪಿತು ಹಾಗೂ ಈ ಎರಡು ಹಾಡುಗಳು ಬ್ರಿಟನ್ನಿನ ೨೦ ಜನಪ್ರಿಯ ಗೀತೆಗಳಲ್ಲಿ ಒಂದಾಯಿತು.
ಆನ್ ಎ ಡೇ ೧೯೯೮ರಲ್ಲಿ ಕಟ್ಸ್ ಲೈಕ್ ಎ ನೈಫ್ ನಂತರದ ಆಡಮ್ಸ್ ನ ಮೊಟ್ಟಮೊದಲ ಸ್ಟುಡಿಯೋ ಆಲ್ಬಮ್ ಆದ ಆನ್ ಎ ಡೇ ಲೈಕ್ ದಿಸ್ ಎಂಬ ಆಲ್ಬಂ ಬಿಡುಗಡೆಯಾಗಿದ್ದು RIAA ಯಾವುದೇ ಮಾನ್ಯತೆ ನೀಡದ ಮೊದಲ ಆಲ್ಬಂ ಇದಾಯಿತು.[೧೨] ಆದಾಗ್ಯೂ ಜರ್ಮನಿಯಲ್ಲಿ ಮೊದಲ ೫ ಸ್ಥಾನಗಳಲ್ಲಿ ಸೇರಿ, ಬ್ರಿಟನ್ ನಲ್ಲಿ ಪ್ಲಾಟಿನಂ ಗಿಟ್ಟಿಸಿತು. ಬ್ರಿಟನ್ನಿನಲ್ಲಿ ಮೊದಲ ೧೦ರ ಶ್ರೇಣಿ ತಲುಪಿದ, ಸ್ಪೈಸ್ ಗರ್ಲ್ಸ್ ನ ಮೆಲೇಯ್ನ್ ಳೊಡನೆ ಹಾಡಿದ ಯುಗಳ ಗೀತೆಗಳಾದ "ಕ್ಲೌಡ್ ನಂಬರ್ ನೈನ್" ಮತ್ತು "ವೆನ್ ಯು ಆರ್ ಗಾನ್" ಗೀತೆಗಳು ಈ ಆಲ್ಬಂನಿಂದ ಜನಮನ ತಲುಪಿದವು.
ಆನ್ ಎ ಡೇ ಲೈಕ್ ಟುಡೇ ಬಿಡುಗಡೆ ಮಾಡಿದ ನಂತರ ಆಡಮ್ಸ್ ದ ಬೆಸ್ಟ್ ಆಫ್ ಮಿ ಎಂಬ ಬಹಳ ಜನಪ್ರಿಯ ಹಾಡುಗಳ ಸಂಗ್ರಹವನ್ನೂ, ಎರಡು ಹೊಸ ಗೀತೆಗಳಾದ "ದ ಬೆಸ್ಟ್ ಆಫ್ ಮಿ" ಎಂಬ ಶೀರ್ಷಿಕಾ ಗೀತೆ ಮತ್ತು ನೃತ್ಯಸಂಗೀತ "ಡೋಂಟ್ ಗಿವ್ ಅಪ್" ಅನ್ನೂ ಹೊಂದಿದ ಆಲ್ಬಮ್ಮನ್ನು ಹೊರತಂದನು. ಈ ಆಲ್ಬಂ ಜರ್ಮನಿಯ ಟಾಪ್ ೧೦ ತಲುಪಿ, ಕೆನಡಾದಲ್ಲಿ ಮೂರು ಬಾರಿ ಪ್ಲಾಟಿನಮ್ ಎಂದೂ, UKಯಲ್ಲಿ ಪ್ಲಾಟಿನಮ್ ಎಂದೂ ಘೋಷಿತವಾಯಿತು. ಈ ಆಲ್ಬಂನ ಸಿಂಗಲ್ ಆದ "ದ ಬೆಸ್ಟ್ ಆಫ್ ಮಿ" ಅಮೆರಿಕದ ಹೊರತಾಗಿ ಎಲ್ಲೆಡೆಯೂ ಬಹಳ ಜನಪ್ರಿಯವಾಯಿತು. ಅಮೆರಿಕದಲ್ಲಿ ಅದು ಜನಪ್ರಿಯವಾಗದ ಏಕೈಕ ಕಾರಣ ಅದು ಅಲ್ಲಿ ಸಿಂಗಲ್ ಆಗಿ ಬಿಡುಗಡೆಯಾಗದೆಯೇ ಇದ್ದುದಷ್ಟೆ.
ಇತ್ತೀಚಿನ ವರ್ಷಗಳು: ೨೦೦೦-ಇಲ್ಲಿನವರೆಗೆ
[ಬದಲಾಯಿಸಿ]೨೦೦೨ರಲ್ಲಿ ಆಡಮ್ಸ್ ಡ್ರೀಮ್ ವರ್ಕ್ಸ್ ಅನಿಮೇಟೆಡ್ ಫಿಲ್ಮ್ ಗಾಗಿ ಸ್ಪಿರಿಟ್: ಸ್ಟ್ಯಾಲಿಯನ್ ಆಫ್ ದ ಸಿಮರ್ರಾನ್ ಎಂಬ ಹಾಡುಗಳನ್ನು ಬರೆದು, ಹಾಡಿದನು. ಆ ಹಾಡುಗಳನ್ನು ಚಿತ್ರದ ಧ್ವನಿಮುದ್ರಿಕೆಯಲ್ಲಿ ಅಳವಡಿಸಿಕಿಳ್ಳಲಾಯಿತು. ಈ ಧ್ವನಿಮುದ್ರಿಕೆಯಲ್ಲಿನ ಬಹಳ ಯಶಸ್ವಿ ಹಾಡಾದ ಹಿಯರ್ ಐ ಆಮ್ ಬ್ರಿಟನ್ ನ ಮೊದಲ ೫ನೆಯ, ಮತ್ತು ಜರ್ಮನಿಯ ಮೊದಲ ೨೦ನೆಯ ಜನಪ್ರಿಯ ಗೀತೆಯಾಗಿ ಸ್ಥಾನ ಪಡೆಯಿತು.
೨೦೦೨ರ ರಷ್ಯನ್ ಭಾಷಾ ಚಿತ್ರವಾದ ಹೌಸ್ ಆಫ್ ಫೂಲ್ಸ್ ನಲ್ಲಿ ಆಡಮ್ಸ್ ಒಂದು ಕಿರುಪಾತ್ರದಲ್ಲಿ ನಟಿಸಿದನು.
ಆನ್ ಎ ಡೇ ಲೈಕ್ ಟುಡೇ ಯ ಬಿಡುಗಡೆಯಾದ ಆರು ವರ್ಷಗಳ ನಂತರ ರೂಂ ಸರ್ವೀಸ್ ಸೆಪ್ಟೆಂಬರ್ ೨೦೦೪ರಲ್ಲಿ ಬಿಡುಗಡೆಯಾಯಿತು. ಜರ್ಮನಿಯಲ್ಲಿ ಉತ್ತುಂಗಕ್ಕೇರಿದ ಈ ಆಲ್ಬಂ ಬ್ರಿಟನ್ನಿನಲ್ಲಿ ನಾಲ್ಕನೆಯ ಸ್ಥಾನಕ್ಕೇರಿ, ಯೂರೋಪ್ ನಲ್ಲಿ ಬಿಡುಗಡೆಯಾದ ಮೊದಲ ವಾರದಲ್ಲಿ ೪೪೦,೦೦೦ ಪ್ರತಿಗಳು ಮಾರಾಟವಾದವು. ಈ ಆಲ್ಬಂನಲ್ಲಿನ "ಓಪನ್ ರೋಡ್" ಎಂಬ ಸಿಂಗಲ್ ಹಾಡು ಬಹಳ ಬೇಡಿಕೆ ಪಡೆದುದಾಗಿ ಕೆನಡಾದಲ್ಲಿ ನಂಬರ್ ಒಂದು ಮತ್ತು ಬ್ರಿಟನ್ನಿನಲ್ಲಿ ೨೧ನೆಯ ಸ್ಥಾನದಲ್ಲಿ ರಾರಾಜಿಸಿತು. ಮೇ ೨೦೦೮ರಲ್ಲಿ ಇದೇ ಆಲ್ಬಂ ಅಮೆರಿಕದಲ್ಲೂ ಬಿಡುಗಡೆಯಾದರೂ ಬಿಲ್ ಬೋರ್ಡ್ 200ರಲ್ಲಿ ಕೇವಲ ೧೩೪ನೆಯ ಸ್ಥಾನ ಗಿಟ್ಟಿಸಲು ಮಾತ್ರ ಸಮರ್ಥವಾಯಿತು.
೨೦೦೫ರಲ್ಲಿ ಆಂಥಾಲಜಿ ಎಂದು ಮೊಟ್ಟಮೊದಲ, ಎರಡು ಹೊಸ ಗೀತೆಗಳನ್ನೊಳಗೊಂಡ, ೨-ಡಿಸ್ಕ್ ಗಳ ಸಂಗ್ರಹವೊಂದು ಬಿಡುಗಡೆಯಾಯಿತು. ಅಮೆರಿಕದಲ್ಲಿ ಬಿಡುಗಡೆಯಾದ ಈ ಆಲ್ಬಂನಲ್ಲಿ ಒಂದು ಹೊಸ ವಿಧವಾದ, ಪಮೇಲಾ ಆಂಡರ್ಸನ್ ಳೊಡನೆ ಹಾಡಿದ ಯುಗಳ ಗೀತೆ "ವೆನ್ ಯು ಆರ್ ಗಾನ್" ಸೇರಿದೆ. ೨೦೦೫ರಲ್ಲೇ ಸ್ಟ್ಯಾಕ್ಡ್ ಎಂಬ ಪಮೇಲಾಳ ಫಾಕ್ಸ್ ಸಿಟ್ಕಾಮ್ ನ ಎರಡನೆಯ ಆವೃತ್ತಿಗಾಗಿ ಅದರ ಶೀರ್ಷಿಕಾಗೀತೆಯ ಮರು-ರೆಕಾರ್ಡಿಂಗ್ ಮಾಡಿಕೊಟ್ಟನು.
೨೦೦೬ರಲ್ಲಿ ಆಡಮ್ಸ್ "ನೆವರ್ ಲೆಟ್ ಗೋ" ಎಂಬ ಹಾಡನ್ನು ಬರೆದು ಅಭಿನಯಿಸಿದ್ದು ಕೆವಿನ್ ಕಾಸ್ಟ್ ನರ್ ಮತ್ತು ಆಷ್ಟನ್ ಕುಚರ್ ಅಭಿನಯಿಸಿದ ದ ಗಾರ್ಡಿಯನ್ ಎಂಬ ಚಿತ್ರದ ಕಡೆಯ ಶೀರ್ಷಿಕಾ ಪ್ರಕಟಣಾ ವೇಳೆಯಲ್ಲಿ ತೋರಿಸಲಾಯಿತು. ಬಾಬಿ ಚಿತ್ರಕ್ಕಾಗಿ ಆಡಮ್ಸ್ "ನೆವರ್ ಗೊನ್ನಾ ಬ್ರೇಕ್ ಮೈ ಫೇಯ್ತ್" ಎಂಬ ಹಾಡನ್ನು ಸಹ-ಲೇಖಕನಾಗಿ ಬರೆದನು. ಈ ಹಾಡು R&B ಹಾಡುಗಾರರಾದ ಅರೆಥಾ ಫ್ರಾಂಕ್ಲಿನ್ ಮತ್ತು ಮೇರಿ ಜೆ ಬ್ಲೈಜ್ ರಿಂದ ಪ್ರದರ್ಶಿತವಾಗಿ ಆಡಮ್ಸ್ ಗೆ ಗೋಲ್ಡನ್ ಗ್ಲೋಬ್ನಾಮನಿರ್ದೇಶನವು ೨೦೦೭ರ ಸಾಲಿನಲ್ಲಿ ದೊರಕಿತು.[೨೯]
ಆಡಮ್ಸ್ ತನ್ನ ೧೧ನೆಯ ಆಲ್ಬಮ್ಮನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರ್ಚ್ ೧೭ , ೨೦೦೮ರಂದು ಬಿಡುಗಡೆ ಮಾಡಿದನು. ಅದು ೧೧ ಎಂದೇ ಸೂಕ್ತವಾಗಿ ಹೆಸರಿಸಲ್ಪಟಟಿತ್ತು. ಈ ಆಲ್ಬಂ USನಲ್ಲಿ ವಿಶೇಷವಾಗಿ ವಾಲ್-ಮಾರ್ಟ್ ಮತ್ತು ಸ್ಯಾಮ್ಸ್ ಕ್ಲಬ್ ಎಂಬ ಬಿಡಿ ಮಾರಾಟ ಮಳಿಗೆಗಳಲ್ಲಿ ಮೇ ೧೩ , ೨೦೦೮ರಂದು ಬಿಡುಗಡೆಯಾಯಿತು.[೩೦] ಈ ಆಲ್ಬಂನಿಂದ ಬಿಡುಗಡೆಯಾದ ಮೊದಲ ಸಿಂಗಲ್ "ಐ ಥಾಟ್ ಐ ಹ್ಯಾಡ್ ಸೀನ್ ಎವೆರಿಥಿಂಗ್". ಆಡಮ್ಸ್ ನಂತರ ೧೧ ದಿನಗಳ, ೧೧ ದೇಶಗಳ ಯೂರೋಪಿಯನ್ ಪ್ರವಾಸ ಕೈಗೊಂಡು ಬಿಡುಗಡೆಗೊಂಡ ಧ್ವನಿಮುದ್ರಿಕೆಗಳ ಪ್ರಚಾರ ಮಾಡಿದನು.[೩೧] ಈ ಆಲ್ಬಂ ಬಿಡುಗಡೆ ಕಾಣುತ್ತಿದ್ದಂತೆಯೇ ಕೆನಡಾದಲ್ಲಿ ಮೊದಲ ಸ್ಥಾನ ಗಳಿಸಿತು(೧೯೯೧ರ ವೇಕಿಂಗ್ ಅಪ್ ದ ನೈಬರ್ಸ್ ನ ನಂತರ ಈ ಸ್ಥಾನ ಗಳಿಸಿದ ಮೊದಲ ಆಲ್ಬಂ ಇದಾಯಿತು) ಮತ್ತು ಜರ್ಮನಿಯಲ್ಲಿ ೨ನೆಯ ಸ್ಥಾನ ಪಡೆಯಿತು. ಯುನೈಟೆಡ್ ಸ್ಟೇಟ್ಸ್ ನಲ್ಲಿ ಈ ಆಲ್ಬಂ ೮೦ನೆಯ ಸ್ಥಾನದಲ್ಲಿ ನಿಂತಿತು.[೯] ೨೦೦೯ರಲ್ಲಿ ಬ್ರಿಯಾನ್ ಆಡಮ್ಸ್ ತನ್ನ ಟ್ವಿಟರ್ ಖಾತೆಯಲ್ಲಿ ತಾನು ಒಂದು ಹೊಸ ಆಲ್ಬಂಗಾಗಿ ಹಾಡುಗಳನ್ನು ಬರೆದು, ಪ್ಯಾರಿಸ್ ನಲ್ಲಿ ರೆಕಾರ್ಡ್ ಮಾಡುತ್ತಿರುವುದಾಗಿ ಘೋಷಿಸಿದನು.
ಜುಲೈ ೨, ೨೦೦೯ರಂದು ಕೆನಡಾ ಅಂಚೆ ಚೀಟಿಯು ಕೆನಡಿಯನ್ ರೆಕಾರ್ಡಿಂಗ್ ಕಲಾವಿದರ ಸರಣಿಯಲ್ಲಿ ಹೊರತರಲಿರುವ ಎರಡನೆಯ ಆವೃತ್ತಿಯಲ್ಲಿನ ನಾಲ್ಕು ಸಂಗೀತಗಾರರ ಚಿತ್ರಗಳನ್ನು ಹೊತ್ತ ಅಂಚೆಚೀಟಿಗಳ ಪೈಕಿ ಆಡಮ್ಸ್ ಕೂಡಾ ಒಬ್ಬನಾಗಿರುತ್ತಾನೆ.[೩೨] ಬ್ರಿಯಾನ್ ಆಡಮ್ಸ್ ನ ಚಿತ್ರ ಹೊತ್ತು ಮುದ್ರಿತವಾಗುವ ಅಂಚೆಚೀಟಿಗಳ ಸಂಖ್ಯೆ ಸುಮಾರು ಒಂದೂವರೆ ಮಿಲಿಯನ್ ಎಂಬ ಅಂದಾಜಿದೆ.[೩೩] ಡಿಸೆಂಬರ್ ೨೦೦೯ರಲ್ಲಿ ಬ್ರಿಯಾನ್ ಆಡಮ್ಸ್ ಓಲ್ಡ್ ಡಾಗ್ಸ್ ಎಂಬ ಚಿತ್ರಕ್ಕಾಗಿ "ಯೂ ಹ್ಯಾನ್ ಬೀನ್ ಎ ಫ್ರೆಂಡ್ ಟು ಮಿ" ಎಂಬ ಹಾಡನ್ನು ಬಿಡುಗಡೆ ಮಾಡಿದನು.
ಫೆಬ್ರವರಿ ೨೦೧೦ರಲ್ಲಿ ಆಡಮ್ಸ್ "ಒನ್ ವರ್ಲ್ಡ್, ಒನ್ ಫ್ಲೇಮ್" ಎಂಬ, ವ್ಯಾಂಕೋವರ್ ನಲ್ಲಿ ನಡೆಯಲಿರುವ ಒಲಿಂಪಿಕ್ ಕ್ರೀಡೆಗಳ ಸಮಯದಲ್ಲಿ ಒಲಿಂಪಿಕ್ TV ಪ್ರಸಾರಕ್ಕಾಗಿ ಪ್ರಮುಖ ಜರ್ಮನ್ ಟಿವಿ ನಿಲಯವಾದ ARD ಯವರು ಒಲಿಂಪಿಕ್ಸ್ ಪ್ರಸಾರದ ಶೀರ್ಷಿಕಾಗೀತೆಯಾಗಿ ಉಪಯೋಗಿಸಿಕೊಳ್ಳುವ ಸಲುವಾಗಿ ರೆಕಾರ್ಡ್ ಮಾಡಿ ಬಿಡುಗಡೆ ಮಾಡಿದನು.
ಸಾಮಾಜಿಕ ಚಟುಚಟಿಕೆಗಲ್ಲಿ ನಿರತ
[ಬದಲಾಯಿಸಿ]ಆಡಮ್ಸ್ ನ ಬಹತೇಕ್ ಜನಾನುರಾಗಿ ಚಟುಚಟಿಕೆಗಳು ತನ್ನ "ದ ಬ್ರಿಯಾನ್ ಆಡಮ್ಸ್ ಫೌಂಡೇಷನ್"ಗೆ ಅರ್ಪಿತವಾಗಿದ್ದು. ಮಕ್ಕಳ ಮತ್ತು ಯುವಕರ ವಿದ್ಯಾಭ್ಯಾಸ ಮತ್ತು ಕಲಿಕೆಯ ಅವಕಾಶಗಳನ್ನು ಜಾಗತಿಕವಾಗಿ ಕಲ್ಪಿಸುವತ್ತ ಶ್ರಮಿಸುವ ಈ ಸ್ಂಸ್ಥೆಯ ಮೂಲ ಮಂತ್ರ 'ಮಗುವಿಗೆ ಕೊಡಬಹುದಾದ ಬಹಳ ಉತ್ತಮ ಕೊಡುಗೆಯೆಂದರೆ ವಿದ್ಯೆ' ಎಂಬುದು. ಈ ಸಂಸ್ಥೆಯು ಬೆಂಬಲ ನೀಡುವ ಕ್ಷೇತ್ರವು ವಿಶಾಲವಾಗಿದ್ದು, ಬಹಳ ದೂರದವರೆಗೂ ಇದರ ಬಾಹುಗಳು ಹರಡಿದ್ದು, ವಯಸ್ಸಾದ ಹಿರಿಯರ ಬೆಂಬಲಕ್ಕೆ ಬೇಕಾದ ವಿಷಯ/ಕ್ರಿಯೆಗಳಿಗೆ ಹಣ ಸಹಾಯ, ಯುದ್ಧ ಹಾಗೂ ನೈಸರ್ಗಿಕ ವಿಕೋಪಗಳಿಂದ ಬಳಲಿದವರಿಗೆ ಸಹಾಯಹಸ್ತ ಮತ್ತು ಮಾನಸಿಕ ಹಾಗೂ ದೈಹಿಕ ದುರ್ಬಲತೆ ಹೊಂದಿರುವವರಿಗೆ ಬೆಂಬಲ ನೀಡುವತ್ತ ಈ ಸಂಸ್ಥೆ ಶ್ರಮಿಸುತ್ತಿದೆ. ಈ ಸಂಸ್ಥೆಗೆ ಬೇಕಾದ ಅಷ್ಟೂ ಹಣವನ್ನು ಆಡಮ್ಸ್ ತನ್ನ ಛಾಯಾಚಿತ್ರಕಲೆಯಿಂದ ಸಂಪಾದಿಸುವ ಹಣದಿಂದ ಭರಿಸುತ್ತಾನೆ.
೧೯೮೦ರ ದಶಕದಿಂದಲೂ ಆಡಮ್ಸ್ ಪರಿಹಾರ ನಿಧಿ ಸಂಗ್ರಹ ಹಾಗೂ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳು ಮತ್ತು ಇನ್ನಿತರ ಜನೋಪಯೋಗಿ ಕಾರಣಗಳಿಗಾಗಿ ಸಂಬಂಧಿತ ಚಟುವಟಿಕೆಗಳು ಹಾಗೂ ಕಚೇರಿಗಳಲ್ಲಿ ಭಾಗವಹಿಸಿಕೊಂಡೇ ಬಂದಿರುವನು. ಅವನ ಮೊದಲ ಉನ್ನತ ಮಟ್ಟದ ಸಹಾಯಾರ್ಥ ಕಾರ್ಯಕ್ರಮವು ೧೯೮೫ರಲ್ಲಿ ಫಿಲಡೆಲ್ಫಿಯಾದಿಂದ ಅಮೆರಿಕದಲ್ಲಿ ನೇರಪ್ರಸಾರವಾದ{೦) ಲೈವ್ ಏಯ್ಡ್{/0}ಎಂಬ ಕಾರ್ಯಕ್ರಮ.[೩೪] ಮುಂದಿನ ವರ್ಷದ ಜೂನ್ ನಲ್ಲಿ ಆಡಮ್ಡ್ ಎರಡು ವಾರಗಳ ಅಮ್ನೆಸ್ಟಿ ಇಂಟರ್ನ್ಯಾಷನಲ್ ನ "ಎ ಕಾನ್ಸ್ಪಿರೆಸಿ ಆಫ್ ಹೋಪ್"ನಲ್ಲಿ ಸ್ಟಿಂಗ್, U2 ಮತ್ತು ಪೀಟರ್ ಗೇಬ್ರಿಯಲ್ ಜೊತೆ ಭಾಗವಹಿಸಿದನು.[೩೪] ಅವನ ನಂತರದ ಅಮ್ನೆಸ್ಟಿಗಾಗಿ ನೀಡಿದ ಕಾರ್ಯಕ್ರಮವು ರಾಕ್ ಫಾರ್ ಅಮ್ನೆಸ್ಟಿ ಎಂಬುದಾಗಿದ್ದು ಅದರಲ್ಲಿ ಅವನು ಪಾಲ್ ಮೆಕಾರ್ಟ್ನಿ, ಸ್ಟಿಂಗ್ ಮತ್ತು ಡೈರ್ ಸ್ಟ್ರೈಟ್ಸ್ ಮತ್ತು ಇತರರೊಡನೆ ಭಾಗವಹಿಸಿದನು.[೩೪]
ಅಮೆರಿಕದ ವಿಭಾಗದಲ್ಲಿನ ಲೈವ್ ಏಯ್ಸ್ ಗಾಗಿ ಪ್ರದರ್ಶನ ನೀಡುತ್ತಿದ್ದ ಆಡಮ್ಸ್ ಗೆ ವೆಂಬ್ಲೀ ಸ್ಟೇಡಿಯಂನಲ್ಲಿ ಪ್ರದರ್ಶನ ನೀಡಲು ಅವಕಾಶ ದೊರೆಯಲಿಲ್ಲ; ಆದರೆ ಆ ಅವಕಾಶವು ಮತ್ತೆ ಅವನಿಗೆ ಜೂನ್ ೧೯೮೭ರಲ್ಲಿ ಪ್ರಿನ್ಸ್'ಸ್ ಟ್ರಸ್ಟ್ ನ ೫ನೆಯ ವಾರ್ಷಿಕೋತ್ಸವದ ಅಂಗವಾಗಿ ರಾಕ್ ಗಾಲಾ ಪ್ರದರ್ಶನವನ್ನು ಎಲ್ಟನ್ ಜಾನ್, ಜಾರ್ಜ್ ಹ್ಯಾರಿಸನ್, ರಿಂಗೋ ಸ್ಟಾರ್ ಮತ್ತು ಇತರರೊಡನೆ ಸೇರಿ ನೀಡಲು ಕರೆಬಂದಾಗ ದೊರಕಿತು. ನಂತರದ ವರ್ಷದಲ್ಲಿ ಆಡಮ್ಸ್ ಮತ್ತೆ ವೆಂಬ್ಲೀ ಸ್ಟೇಡಿಯಂಗೆ ಬರಬೇಕಾಯಿತು; ಈ ಬಾರಿ ನೆಲ್ಸನ್ ಮಂಡೇಲಾರ ಜನ್ಮದಿನದ ಸಂತೋಷಕೂಟದಲ್ಲಿ ಪ್ರದರ್ಶನ ನೀಡುವ ಗಾಯಕನಾಗಿ.
ಜರ್ಮನಿಯ ಬರ್ಲಿನ್ ಗೋಡೆಯ ಪತನದ ಸ್ಮರಣೆಗಾಗಿ ೧೯೯೦ರಲ್ಲಿ ಆಡಮ್ಸ್ ಇನ್ನೂ ಬಹಳ ಆತಿಥಿ(ತನ್ನ ಸಹ-ಗೀತರಚನಕಾರನಾದ ಮೈಕಲ್ ಕ್ಯಾಮೆನ್ ಸೇರಿದಂತೆ)ಗಳೊಡನೆ ಜರ್ಮನಿಯ ಬರ್ಲಿನ್ ನಲ್ಲಿ ರೋಜರ್ ವಾಟರ್ಸ್ ಏರ್ಪಡಿಸಿದ್ದ ಬೃಹತ್ ಕಾರ್ಯಕ್ರಮವಾದ ದ ವಾಲ್ ನಲ್ಲಿ ಪಾಲ್ಗೊಂಡು ಅದರ ಯಶಸ್ಸಿಗೆ ಕಾರಣನಾದನು.[೩೫] ಅವನು ಪಿಂಕ್ ಫ್ಲಾಯ್ಡ್ ನ ಗೀತೆಗಳಾದ ವಾಟ್ ಷಕ್ ವಿ ಡು ನೌ? ಮತ್ತು ಯಂಗ್ ಲಸ್ಟ್ ಗೀತೆಗಳನ್ನು, ದ ವಾಲ್ ಪ್ರದರ್ಶನ ಸಮಯದಲ್ಲಿ ಹಾಡಿ, ಅಭಿನಯಿಸಿದನು, ಮತ್ತು ವಾಟರ್ಸ್, ಜಾನಿ ಮಿಚೆಲ್, ಸಿಂಡಿ ಲಾಪರ್, ವ್ಯಾನ್ ಮಾರಿಸನ್, ಪಾಲ್ ಕರ್ರಾಕ್ ಮತ್ತು ಇತರರೊಡನೆ ಸೇರಿ ವಾಟರ್ಸ್ ನ "ದ ಟೈಡ್ ಈಸ್ ಟರ್ ನಿಂಗ್" ಎಂಬ ಹಾಡಿನ ಮೂಲಕ ಕಾರ್ಯಕರ್ಮಕ್ಕೆ ಮಂಗಳ ಹಾಡಿದನು. ಅವನು ಹಾಡಿದ ಯಂಗ್ ಲಸ್ಟ್ ನ ರೀತಿಯು, ನೇರ ಕಾರ್ಯಕ್ರಮದಲ್ಲಿ ಉಂಟಾದ ತಾಂತ್ರಿಕ ತೊಂದರೆಗಳಿಂದ ಭಾಗಶಃ ಮರು-ರೆಕಾರ್ಡ್ ಮಾಡಲ್ಪಟ್ಟು, ಬಿಡುಗಡೆಗೊಂಡು ಮೇಯ್ನ್ ಸ್ಟ್ರೀಮ್ ರಾಕ್ ಟ್ರಾಕ್ಸ್ ಪಟ್ಟಿಯಲ್ಲಿ ೭ನೆಯ ಸ್ಥಾನ ಗಳಿಸಿತು.
ಜನವರಿ ೨೯, ೨೦೦೫ರಂದು ಆಡಮ್ಸ್ CBC ಸಹಾಯಾರ್ಥ ಕಾರ್ಯಕ್ರಮಕ್ಕೆಂದು ಟೊರೊಂಟೋಗೆ ತೆರಳಿ 2004ರ ಹಿಂದೂಮಹಾಸಾಗರದ ಭೂಕಂಪದಲ್ಲಿ ಹಾನಿಗೊಳಗಾದವರ ಸಹಾಯಾರ್ಥ ಪ್ರದರ್ಶನದಲ್ಲಿ ಭಾಗವಹಿಸಿದನು. USAಯಲ್ಲಿ ಲೈವ್ ಏಯ್ಡ್ ಗಾಗಿ ಪ್ರದರ್ಶನ ನೀಡಿದ ಇಪ್ಪತ್ತು ವರ್ಷಗಳ ನಂತರ ಆಡಮ್ಸ್ ಕೆನಡಾದ ಲೈವ್ 8 ಷೋ ಇನ್ ಬ್ಯಾರೀ, ಆಂಟೇರಿಯೋ ದಲ್ಲಿ ಪ್ರದರ್ಶನ ನೀಡಿದನು.[೩೬] ನಂತರ ಅದೇ ವರ್ಷದಲ್ಲಿ ಕತಾರ್ ನಲ್ಲಿ ಕಾರ್ಯಕ್ರಮ ನೀಡಿ £೧.೫M ($೨,೬೧೭,೦೦೦) ಮೊತ್ತವನ್ನು ತನ್ನ ಸಂಗೀತ ಕಚೇರಿ ಮತ್ತು ತನ್ನ, ಜಗತ್ತಿನ ಬಹುತೇಕ ಪ್ರಮುಖ ಗಿಟಾರ್ ವಾದಕರು ಸಹಿ ಹಾಕಿದ್ದ, ಗಿಟಾರೊಂದನ್ನು ಹರಾಜು ಹಾಕುವ ಮೂಲಕ ಸಹಾಯಧನವಾಗಿ ವಸೂಲಿ ಮಾಡಿದನು.[೩೬] ಆ ಹಣವು ಕತಾರ್ ನ "ರೀಚ್ ಔಟ್ ಟು ಏಷ್ಯಾ" ಎಂಬ ನಿರ್ಗತಿಕರಿಗೆ ಸಹಾಯ ಮಾಡುವ ಕಾರ್ಯದ ಅಂಗವಾಗಿ ಆ ಖಂಡದ ದೀನರಿಗೆ ನೀಡಲ್ಪಟ್ಟಿತು.[೩೬] ಸಂದ ಹಣದಲ್ಲಿ ಸ್ವಲ್ಪ ಭಾಗವು ತನ್ನದೇ ಆದ ಸಹಾಯಾರ್ಥ ಕೆಲಸಗಳಾದ, ಹಿಂದೂ ಮಹಾಸಾಗರದ ಸುನಾಮಿಯಿಂದ ನಾಶವಾಗಿದ್ದ ಥೈಲ್ಯಾಂಡ್ ನಲ್ಲಿನ ಶಾಲೆಯ ಪುನರ್ನಿಮಾಣಕ್ಕೂ,ಶ್ರೀಲಂಕಾದಲ್ಲಿ ನೂತನ ಕ್ರೀಡಾಂಗಣ ನಿರ್ಮಾಣಕ್ಕೂ ಉಪಯೋವಿಸಲ್ಪಟ್ಟಿತು.[೩೬]
ಜನವರಿ ೨೯ , ೨೦೦೬ರಂದು ಪಾಕಿಸ್ತಾನದ ಕರಾಚಿಯಲ್ಲಿ ಪ್ರದರ್ಶನ ನೀಡಿದ ಮೊದಲ ಪಾಶ್ಚಿಮಾತ್ಯ ಕಲಾವಿದನೆಂಬ ಹಿರಿಮೆಗೆ ಪಾತ್ರನಾದ ಆಡಮ್ಸ್, ಸೆಪ್ಟೆಂಬರ್ ೧೧ರ ಆಕ್ರಮಣದ ನಂತರ, ಷೆಹಝಾದ್ ರಾಯ್ ನೊಡನೆ ಸಂಗೀತ ಸಭೆ ನಡೆಸಿ ಬಂದ ಹಣವನ್ನು ಬಡ ಮಕ್ಕಳು ಶಾಲೆಗೆ ಹೋಗಲು ಸಹಾಯ ಮಾಡುವುದಕ್ಕಾಗಿ ನೀಡುವ ಮಹತ್ಕಾರ್ಯದಲ್ಲಿ ಭಾಗವಹಿಸಿದನು.[೩೭] ಆ ಪ್ರದರ್ಶನದಲ್ಲಿ ಹರಿದುಬಂದ ಹಣದಲ್ಲಿ ಕೊಂಚ ಭಾಗವನ್ನು 2005ರ ಪಾಕಿಸ್ತಾನದ ಭೂಕಂಪ ಪೀಡಿತರಿಗೂ ನೀಡಲಾಯಿತು.[೩೭]
ಅಕ್ಟೋಬರ್ ೧೮, ೨೦೦೭ರಂದು ಆಡಮ್ಸ್ ಟೆಲ್ ಅವೀವ್ ಮತ್ತು ಜೆರಿಕೋಗಳಲ್ಲಿ ಒನ್ ವಾಯ್ಸ್ ಮೂಮೆಂಟ್ ನ ಅಂಗವಾಗಿ ಇಸ್ರೇಲ್-ಪ್ಯಾಲೆಸ್ಟೈನ್ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ಸಂಗೀತ ಕಾರ್ಯಕ್ರಮಗಳನ್ನು ನೀಡಬೇಕಿತ್ತು.[೩೮] ಆದರೆ ಭದ್ರತಾ ವ್ಯವಸ್ಥೆಯ ಬಗ್ಗೆ ಗುಮಾನಿಯುಂಟಾದುದರಿಂದ ಎರಡೂ ದೇಶಗಳ ಸಮಸ್ಯೆ ಬಗೆಹರಿಸಲಿಚ್ಚಿಸಿದ ಬೆಂಬಲಿಗರು ಪ್ರದರ್ಶನವನ್ನು ರದ್ದುಗೊಳಿಸಿದರು.[೩೮]
೧೯೯೦ರ ದಶಕದ ಮಧ್ಯಭಾಗದಲ್ಲಿ ಆಡಮ್ಸ್ ಸದರನ್ ಓಷನ್ ವೇಲ್ಸ್ ಸ್ಯಾಂಕ್ಚುಯರಿಗಾಗಿ ಗ್ರೀನ್ ಪೀಸ್ ನ ಚೇರ್ ಮನ್ ಆದ ಡೇವಿಡ್ ಮೆಕ್ ಟಗಾರ್ಟ್ ನೊಡನೆ ಕೈಗೂಡಿಸಿ ಯಶಸ್ವಿ ಚಳುವಳಿ ನಡೆಸಿದನು.(ಇವರಿಬ್ಬರೂ ವಿಶ್ವದಾದ್ಯಂತ ತಮ್ಮ ಸಂಗೀತಸಭೆಗಳಲ್ಲಿ ೫೦೦,೦೦೦ಕ್ಕೂ ಹೆಚ್ಚು ಅಂಚೆ ಕಾರ್ಡ್ ಗಳನ್ನು ಹಂಚಿ, ರಾಜಕಾರಣಿಗಳು ಈ ಚಳುವಳಿಗೆ "yes " ಎನ್ನುವಂತೆ ಮಾಡಿ, ಈ ಸ್ಯಾಂಕ್ಚುಯರಿಯ ಸ್ಥಾಪನೆಗೆ ಕಾರಣರಾದರು)
ಆಡಮ್ಸ್ ಆಗಾಗ್ಗೆ ಅನಿಮಲ್ ರೈಟ್ಸ್ ಗ್ರೂಪ್ (ಪ್ರಾಣಿಗಳ ಹಕ್ಕು ಬಣ) PETA ಪರವಾಗಿ ಕಾಗದಗಳನ್ನು ಬರೆದು ಪ್ರಾಣಿಗಳನ್ನು ನಿಯಮವಾಗಿ ನೋಡಿಕೊಳ್ಳಬೇಕಾದ ಬಗ್ಗೆ ಬೆಂಬಲ ಸೂಚಿಸುತ್ತಾನೆ. ಕೆನಡಾದ ಸುಮಾರು KFC ರೆಸ್ಟೋರೆಂಟ್ ಗಳ CEOಗಳಿಗೆ ನವೆಂಬರ್ ೨೦೦೭ರಲ್ಲಿ ಪತ್ರ ಬರೆದು ಆಡಮ್ಸ್ ಕೋಳಿಮರಿಗಳನ್ನು ಕೊಲ್ಲಬೇಕಾದರೆ ನೂತನ ಮತ್ತು ಮಾನವೀಯ ರೀತಿಯಲ್ಲಿ ಅವುಗಳಿಗೆ ಹೆಚ್ಚು ನೋವಾಗದ ರೀತಿಯಲ್ಲಿ ಕೊಲ್ಲಬೇಕೆಂದು ಮನವಿ ಮಾಡಿಕೊಂಡನು.[೩೯] ಆಡಮ್ಸ್ ೧೭ ವರ್ಷ[೪೦] ಗಳಿಂದಲೂ ಸಸ್ಯಾಹಾರಿಯಾಗಿದ್ದು, "ಸೆಕ್ಸೀಯೆಸ್ಟ್ ವಿಜಿಟೇರಿಯನ್ ಆಫ್ ದ ಇಯರ್" ಎಂಬ PETAದ ಪ್ರಶಸ್ತಿಗೂ ಆಯ್ಕೆಯಾಗಿದ್ದನು.
ಮೇ ೨೫, ೨೦೦೫ರಂದು ತನ್ನ ಸೋದರಸಂಬಂಧಿ ಜಾನಿ ಆರ್ಮಿಟೇಜ್ ನೊಡಗೂಡಿ ಲಂಡನ್ ನ ರಾಯಲ್ ಮಾರ್ಸ್ ಡೆನ್ ಹಾಸ್ಪಿಟಲ್ ಗಾಗಿ ರಾಕ್ ಬೈ ದ ರಿವರ್ ಎಂಬ ಕಾರ್ಯಕ್ರಮ ಮತ್ತು ಹರಾಜಿನ ಮೂಲಕ £೧.೩M ಸಂಗ್ರಹಿಸಿಕೊಟ್ಟನು.[೪೧] ಮರುವರ್ಷ ಮೇ ೧೫ರಂದು ಹೋಪ್ಸ್ ಫೌಂಡೇಷನ್ ನ ಕಾರ್ಯಕ್ರಮಕ್ಕೆ ಬಂದ ಆಡಮ್ಸ್ (ವಿನ್ಯಾಸಕಾರ್ತಿ ಬೆಲ್ಲಾ ಫ್ರೂಡ್ ಅತಿಥೇಯಳಾಗಿದ್ದದ್ದು) ಪ್ಯಾಲೆಸ್ಟೇನಿಯನ್ ನಿರಾಶ್ರಿತ ಮಕ್ಕಳ ಸಹಾಯಾರ್ಥವಾಗಿ ಹರಿದು ಬಂದ £೨೫೦,೦೦೦ರ ಮೊತ್ತದಲ್ಲಿ ಭಾಗಶಃ ಸಂಗ್ರಹವಾಗಲು ಸಹಾಯ ಮಾಡಿದನು.[೪೨] ಅದರ ನಂತರದ ವರ್ಷದ ಜೂನ್ ನಲ್ಲಿ ಲಂಡನ್ನಿನ ಮೂರು ಬೇರೆ ಬೇರೆ ಕಡೆ ನಡೆದ ಸಹಾಯಾರ್ಥ ಸಂಗೀತಸಭೆಗಳಲ್ಲಿ ಸಾರ್ವಜನಿಕರು ತನ್ನೊಡನೆ ಹಾಡಲು ಇಚ್ಛಿಸಿದಲ್ಲಿ ಹರಾಜಿನ ಮೂಲಕ ಹಣ ನೀಡಿ, ಹೆಚ್ಚು ಹಣ ನೀಡುವವರು ತನ್ನೊಡನೆ ವೇದಿಕೆಯನ್ನು ಹಂಚಿಕೊಳ್ಳಬಹುದು ಎಂದನು. ಹೀಗೆ ಸಂಗ್ರಹವಾದ £೫೦,೦೦೦ಕ್ಕೂ ಹೆಚ್ಚಿನ ಮೊತ್ತವನ್ನು NSPCC, ಚಿಲ್ಡ್ರನ್ ಇನ್ ನೀಡ್ ಮತ್ತು ಯೂನಿವರ್ಸಿಟಿ ಕಾಲೇಜ್ ಹಾಸ್ಪಿಟಲ್ ಗಳಿಗೆ ನೀಡಲಾಯಿತು.[೪೩] ಫೆಬ್ರವರಿ ೨೮, ೨೦೦೮ರಂದು ಅವನು ಕೆನಡಾದ ಟೊರೊಂಟೋದಲ್ಲಿನ ಏರ್ ಕೆನಡಾ ಸೆಂಟರ್ ನಲ್ಲಿ ಒನ್ ನೈಟ್ ಲೈವ್ ಕಾರ್ಯಕ್ರಮದಲ್ಲಿ ಜೋಷ್ ಗ್ರೋಬನ್, ಸಾರಾ ಮೆಕ್ಲಾಕ್ಲಾನ್, ಜಾನ್ ಆರ್ಡೆನ್, ಮತ್ತು ರಿಯಾನ್ಡಾನ್ ರೊಡನೆ ಸೇರಿ ಸನ್ನಿಬ್ರೂಕ್ ಹಾಸ್ಪಿಟಲ್ ನ ವುಮೆನ್ ಎಂಡ್ ಬೇಬೀಸ್ ಪ್ರೋಗ್ರಾಮ್ ನಲ್ಲಿ ಆ ರೋಗಿಗಳ ಸಹಾಯಾರ್ಥವಾಗಿ ಭಾಗವಹಿಸಿದನು.[೪೩]
ಜಾರ್ಜಿಯಾದಲ್ಲಿ ಶಾಂತಿಯನ್ನು ಪ್ರತಿಪಾದಿಸಲು ಆಡಮ್ಸ್ ಟಿಬಿಲಿಸಿಯಲ್ಲಿ ಸೆಪ್ಟೆಂಬರ್ ೨೩ , ೨೦೦೮ರಂದು ಒಂದು ವಿಶೇಷ ಹೊರಾಂಗಣ ಸಂಗೀತ ಸಭೆ ನಡೆಸಿಕೊಟ್ಟನು.
"ವೈಲ್ಡ್ ಎಂಡ್ ಲೈವ್"ನಲ್ಲಿ ನವೆಂಬರ್ ೧೪ , ೨೦೦೯ರಂದು ಬಾರ್ನ್ ಫ್ರೀ ಫೌಂಡೇಷನ್ ಗಾಗಿ ರಾಯಲ್ ಆಲ್ಬರ್ಟ್ ಹಾಲ್ ನಲ್ಲಿ ಕಾರ್ಯಕ್ರಮ ನೀಡಿದನು.
ಹೊಸ ಜನಪ್ರಿಯವಾದ ಬಿಗ್ ಗ್ರೀನ್ ಟ್ರ್ಯಾಕ್ಟರ್ ನ ಜೇಸನ್ ಆಲ್ಡಿಯನ್ ಒಂದಿಗೆ CMTಯವರ ಕ್ರಾಸ್ ರೋಡ್ಸ್ ನಲ್ಲಿ ಕಾಣಿಸಿಕೊಳ್ಳಬೇಕಾದುದಿದೆ.
ಛಾಯಾಚಿತ್ರಗ್ರಾಹಕನಾಗಿ
[ಬದಲಾಯಿಸಿ]ಆಡಮ್ಸ್ ನ ಚಿತ್ರಗಳು ಬ್ರಿಟಿಷ್ ವೋಗ್, ಲುಓಮೋ ವೋಗ್, ವ್ಯಾನಿಟಿ ಫೇಯ್ರ್, ಹಾರ್ಪರ್ಸ್ ಬಝಾರ್, ಈಸ್ಕ್ವೈರ್, ಇಂಟರ್ ವ್ಯೂ ಪತ್ರಿಕಗಳಲ್ಲಿ ಮತ್ತು i-D ಹಾಗೂ ಇತರ ಕಡೆಗಳಲ್ಲಿ ಪ್ರಕಟಗೊಂಡಿವೆ.[೪೪] ಅವನ ಇತರ ಛಾಯಾಗ್ರಾಹಕ ಪ್ರಯತ್ನಗಳಲ್ಲಿ ಜರ್ಮನಿಯ ಬರ್ಲಿನ್ ನಿಂದ ಪ್ರಕಾಶಗೊಳ್ಳುವ ಫ್ಯಾಷನ್ ಮತ್ತು ಕಲೆಗೆ ಸೀಮಿತವಾದ ಝೂ ಮ್ಯಾಗಝೈನ್ ಪ್ರಕಾಶನವೂ ಒಂದು. ಜೂನ್ ೧, ೨೯೯೫ರಂದು ಅವನು ತನ್ನ ಚಿತ್ರಗಳ ಮೊಟ್ಟಮೊದಲ ಹೊತ್ತಿಗೆಯನ್ನು ಯುನೈಟೆಡ್ ಸ್ಟೇಟ್ಸ್ ನ ಕ್ಯಾಲ್ವಿನ್ ಕ್ಲೀನ್ ನೊಡಗೂಡಿ ಅಮೆರಿಕನ್ ವಿಮೆನ್ ಎಂಬ ಹೆಸರಿನಲ್ಲಿ ಹೊರತಂದು, ಅದರಿಂದ ಬಂದ ಹಣವನ್ನು ಸ್ತನ ಕ್ಯಾನ್ಸರ್ ಸಂಶೋಧನಾ ಯೋಜನೆಗೆಂದು ನ್ಯೂ ಯಾರ್ಕ್ ಸಿಟಿಯಲ್ಲಿನ ಮೆಮೋರಿಯಲ್ ಸ್ಲೋವನ್-ಕೆಟ್ಟೆರಿಂಗ್ ಕ್ಯಾನ್ಸರ್ ಸೆಂಟರ್ ಗೆ ನೀಡಿದನು.[೪೪] ಅದೇ ರೀತಿಯ ಇನ್ನೊಂದು ಛಾಯಾಚಿತ್ರಗಳ ಪುಸ್ತಕವಾದ ಮೇಡ್ ಇನ್ ಕೆನಡಾ ಪುಸ್ತಕವನ್ನು ಡಿಸೆಂಬರ್ ೧೯೯೯ರಂದು ಬಿಡುಗಡೆ ಮಾಡಿ, ನಂತರ ೨೦೦೦ದಲ್ಲಿ ಹ್ಯಾವನ್ ಎಂಬ ಪುಸ್ತಕವನ್ನು ಹೊರತಂದನು. ಇವನ ಎಲ್ಲಾ ಪುಸ್ತಕಗಳೂ ತನ್ನ ಸ್ನೇಹಿತೆಯಾದ,ಸ್ತನ ಕ್ಯಾನ್ಸರ್ ನಿಂದ ಮೃತಳಾದ, ಡೋನಾಗೆ ಅರ್ಪಿತವಾಗಿವೆ.[೪೪]
ಛಾಯಾಗ್ರಾಹಕನಾಗಿ ಆಡಮ್ಸ್ ತನ್ನ ಹಲವಾರು ಗಾಯಕ ಸ್ನೇಹಿತರೊಡನೆ ತೊಡಗಿಕೊಂಡಿದ್ದು ಅವರಲ್ಲಿ ಮಿಕ್ ಜ್ಯಾಗರ್, ರಾಡ್ ಸ್ಟುವರ್ಟ್, ರಾಬರ್ಟ್ ಪ್ಲ್ಯಾಂಟ್, ಜಾಸ್ ಸ್ಟೋನ್, ಪ್ಲೇಸಿಡೋ ಡೊಮಿಂಗೋ, ಸೆಲೀನ್ ಡಿಯಾನ್, ಬಿಲ್ಲಿ ಐಡಲ್, ಮಾಬಿ, ಏಮೀ ವೈನ್ ಹೌಸ್, t.A.T.u., ಆನೀ ಲೆನಾಕ್ಸ್,ಪೀಟರ್ ಗೇಬ್ರಿಯಲ್, ಲೆನ್ನೀ ಕ್ರಾವಿಟ್ಝ್ ಮತ್ತು ಮಾರಿಸ್ಸೇ ಹೆಸರಿಸಬಲ್ಲ ಕೆಲವು ಪ್ರಮುಖರು.[೪೫] ನವೆಂಬರ್ ೨೭, ೨೦೦೦ದಂದು ಬ್ರಿಯಾನ್ ವೇದಿಕೆಯ ಮೇಲೆ The Whoನೊಡನೆ ರಾಯಲ್ ಆಲ್ಬರ್ಟ್ ಹಾಲ್ ನಲ್ಲಿ ಕಾರ್ಯಕ್ರಮವಿತ್ತನು. ಆ ಕಚೇರಿಯ DVD ಕೊಡಮಾಡಲ್ಪಟ್ಟಿತು. ಬ್ರಿಯಾನ್ ಆ ತಂಡದವರ ಛಾಯಾಚಿತ್ರಗಳನ್ನು ತೆಗೆದನು ಮತ್ತು ಅವು ಅ DVDಯ ಕಿರುಹೊತ್ತಿಗೆಯಲ್ಲಿ ಅಚ್ಚಾಗಿವೆ.
೨೦೦೨ರಲ್ಲಿ ಇತರೆ ಕಾಮನ್ ವೆಲ್ತ್ ನ ಛಾಯಾಗ್ರಾಹಕರೊಡನೆ ಕ್ವೀನ್ ಎಲಿಜೆಬತ್ ನ ರಜತ ಮಹೋತ್ಸವದಂದು ರಾಣಿಯ ಫೋಟೋ ತೆಗೆಯಲು ಕರೆಯಲಾಯಿತು;ಆ ಅವಧಿಯಲ್ಲಿ ತೆಗೆಯಲ್ಪಟ್ಟ ಒಂದು ಚಿತ್ರವನ್ನು ಕೆನಡಿಯನ್ ಅಂಚೆ ಚೀಟಿಯಾಗಿ ೨೦೦೪ರಲ್ಲಿ ಮತ್ತು ಮತ್ತೆ ೨೦೦೫ರಲ್ಲಿ ಉಪಯೋಗಿಸಲಾಯಿತು.(ನೋಡಿ ಕ್ವೀನ್ ಎಲಿಜೆಬತ್ II ಡೆಫೆನಿಟಿವ್ ಸ್ಟ್ಯಾಂಪ್, (ಕೆನಡಾ)), ರಾಣಿ ಎಲಿಜೆಬತ್ II ಮತ್ತು ರಾಜಕುಮಾರ ಫಿಲಿಪ್ಸ್ ರ ಭಾವಚಿತ್ರವೊಂದು ಈಗ ಲಂಡನ್ ನ ನ್ಯಾಷನಲ್ ಪೋರ್ಟ್ ರೈಟ್ ಗ್ಯಾಲರಿಯಲ್ಲಿ ಇದೆ.[೪೬]
ಬ್ರಿಯಾನ್ ಆಡಮ್ಸ್ ಹಿಯರ್ ದ ವರ್ಲ್ಡ್ ಇನಿಷಿಯೇಟಿವ್ ಅನ್ನು ಒಬ್ಬ ಛಾಯಾಗ್ರಾಹಕನಾಗಿ ಬೆಂಬಲಿಸುತ್ತಾ ಅದರ ಧ್ಯೇಯಗಳಾದ ಆಲಿಸುವಿಕೆ ಮತ್ತು ಶ್ರವಣಶಕ್ತಿಯ ನಾಶದ ಬಗ್ಗೆ ಜಗದಾದ್ಯಂತ ತಿಳುವಳಿಕೆ ನೀಡುವಲ್ಲಿ ಸಹಾಯ ಹಸ್ತ ನೀಡುತ್ತಿದ್ದಾನೆ. ಅವರ ಪತ್ರಿಕೆಗಳ ಮುಖಪುಟಕ್ಕಾಗಿ ಛಾಯಾಚಿತ್ರಗಳನ್ನು ಒದಗಿಸುತ್ತಾ, ಆ ತ್ರೈಮಾಸಿಕ ಸಂಸ್ಕೃತಿ ಮತ್ತು ಜೀವನಶೈಲಿಯ, ಶ್ರವಣಶಕ್ತಿಗೆ ಅರ್ಪಿತವಾದ ಪ್ರಕಾಶನದೊಡನೆ ತನ್ನ ಕೈ ಜೋಡಿಸಿದ್ದಾನೆ.[೪೭]
ಛಾಯಾಚಿತ್ರ ಪ್ರದರ್ಶನಗಳು ಈ ಕೆಳಕಂಡವನ್ನು ಒಳಗೊಂಡಿದೆ:
- ರಾಯಲ್ ಆಂಟಾರಿಯೋ ಮ್ಯೂಸಿಯಮ್, ಟೊರೊಂಟೋ, ೧೯೯೯
- ಮೆಕ್ ಕಾರ್ಡ್ ಮ್ಯೂಸಿಯಮ್, ಮಾಂಟ್ರಿಯಲ್ ೨೦೦೦
- ಸಾಚಿ ಗ್ಯಾಲರಿ, ಲಂಡನ್ ೨೦೦೦
- ಫೋಟೋಕಿನಾ, ಕೋಲ್ನ್ (ಕೊಲೋನ್), ಜರ್ಮನಿ ೨೦೦೦
- ICA, ಇನ್ಸ್ಟಿಟ್ಯೂಟ್ ಆಫ್ ಕಾಂಟೆಂಪೊರರಿ ಆರ್ಟ್ಸ್, ಲಂಡನ್ ೨೦೦೪
- ರಾಯಲ್ ಆಂಟಾರಿಯೋ ಮ್ಯೂಸಿಯಮ್, ಟೊರೊಂಟೋ, ೨೦೦೪
- ಕ್ಯಾಲ್ವಿನ್ ಕ್ಲೀನ್, ನಿಕ್, ಡಲ್ಲಾಸ್, ಪ್ಯಾರಿಸ್ ೨೦೦೫
- ಕೆನಡಾ ಹೌಸ್, ಟ್ರಫಾಲ್ಗರ್ ಸ್ಟ್ವೇರ್, ಲಂಡನ್ ೨೦೦೫/೨೦೦೬
- || ಟೆಂಪಿಯೋ ಡಿ ಆಡ್ರಿಯಾನೋ, ರೋಮ್, ಇಟಲಿ, ಜುಲೈ, ೨೦೦೬
- ಫೋಟೋಕಿನಾ, ಕೋಲ್ನ್ (ಕೊಲೋನ್), ಜರ್ಮನಿ, ಸೆಪ್ಟೆಂಬರ್ ೨೦೦೬
- ಲೈಕಾ ಗ್ಯಾಲರಿ, ವಿಯೆನ್ನಾ, ಆಸ್ಟ್ರಿಯಾ, ನವೆಂಬರ್, ೨೦೦೬
- ಗ್ಯಾಲರಿಜಾ ಫೋಟೋಗ್ರಾಫಿಜಾ, ಲ್ ಜುಬ್ಲ್ ಜನ, ಸ್ಲೋವಾನಿಯಾ, ನವೆಂಬರ್, ೨೦೦೬
- H.ಸ್ಟೆರ್ನ್ ಎಕ್ಷಿಬಿಷನ್, ಸಾವೋ ಪಾವ್ಲೋ, ಬ್ರೆಝಿಲ್, ಮಾರ್ಚ್ ೨೦೦೭
- ಫೋಟೋಯೆಸ್ಪಾನಾ, ಮ್ಯಾಡ್ರಿಡ್, ಸ್ಪೇಯ್ನ್, ಫೋಟೋಗ್ರಾಫೋಸ್ ಇನ್ಸೋಸ್ಪೆಕಾಡೋಸ್ (ಅನುಮಾನಾಸ್ಪೆವಲ್ಲದ ಛಾಯಾಚಿತ್ರಗ್ರಾಹಕರು) ಮಿಕ್ಕೀ ರೂರ್ಕೆ ಛಾಯಾಚಿತ್ರಗಳು, ಮೇಯಿಂದ ಜುಲೈವರೆಗೆ ೨೦೦೭
- ನನ್ನಿಂಗ್ಟನ್ ಹಾಲ್, ಉತ್ತರ ಯಾರ್ಕ್ ಷೈರ್, ಇಂಗ್ಲೆಂಡ್, ಮೇಯಿಂದ ಜೂನ್, ೨೦೦೭
- ೪೦೧ ಯೋಜನೆಗಳು, NYC, NY ಸೆಪ್ಟೆಂಬರ್ನಿಂದ ನವೆಂಬರ್, ೨೦೦೭
- ದ ಹಾಸ್ಪಿಟಲ್, ಕೋವೆಂಟ್ ಗಾರ್ಡನ್, ಲಂಡನ್, ಇಂಗ್ಲೆಂಡ್. ನವೆಂಬರ್ ೨೦೦೭ (ಮಾಡ್ರನ್ ಮ್ಯೂಸಸ್)
- ದ ನ್ಯಾಷನಲ್ ಪೋರ್ಟ್ ರೈಟ್ ಗ್ಯಾಲರಿ, ಲಂಡನ್, ಇಂಗ್ಲೆಂಡ್. ಫೆಬ್ರವರಿಯಿಂದ ಮೇ, ೨೦೦೮ (ಮಾಡ್ರನ್ ಮ್ಯೂಸಸ್)
- ಹಾಸ್ ಡೆರ್ ಕನ್ಸ್ಟ್, ಮ್ಯುನಿಕ್, ಜರ್ಮನಿ. ಮೇ ೨೦೦೮ (ಜರ್ಮನ್ ರಾಷ್ಟ್ರೀಯ ಫುಟ್ ಬಾಲ್ ತಂಡದ ಫೋಟೋಗಳು)
- ೧೪ನೇ ರಸ್ತೆಯ ಗ್ಯಾಲರಿ, NYC, NY. ಮೇ ೨೦೦೮. (ಹಿಯರ್ ದ ವರ್ಲ್ಡ್) (ಅಲ್ಲದೆ ಬರ್ಲಿನ್ ಮತ್ತು ಝ್ಯುರಿಚ್ ಗಳಲ್ಲಿ ಇದೇ ವಿಷಯದ ವಸ್ತುಪ್ರದರ್ಶನಗಳು)
- ಸಾಚಿ ಗ್ಯಾಲರಿ, ಲಂಡನ್, ಜುಲೈ, ೨೦೦೯ (ಹಿಯರ್ ದ ವರ್ಲ್ಡ್)
ಧ್ವನಿಮುದ್ರಿಕೆ ಪಟ್ಟಿ
[ಬದಲಾಯಿಸಿ]ವರ್ಷ | ಶೀರ್ಷಿಕೆ | ಗುರುತುಚೀಟಿ |
---|---|---|
೧೯೮೦ | ಬ್ರಿಯಾನ್ ಆಡಮ್ಸ್ | A&M ರೆಕಾರ್ಡ್ಸ್ |
೧೯೮೧ | ಯೂ ವಾಂಟ್ ಇಟ್ ಯೂ ಗಾಟ್ ಇಟ್ | |
೧೯೮೩ | ಕಟ್ಸ್ ಲೈಕ್ ಎ ನೈಫ್ | |
೧೯೮೪ | ರೆಕ್ ಲೆಸ್ | |
೧೯೮೭ | ಇಂಟು ದ ಫೈರ್ | |
೧೯೮೮ | ಹಿಟ್ಸ್ ಓನ್ ಫೈರ್ | |
೧೯೮೮ | ಲಿವ್! ಲೈವ್! ಲೈವ್! | |
೧೯೯೧ | ವೇಕಿಂಗ್ ಅಪ್ ದ ನೈಬರ್ಸ್ | |
೧೯೯೩ | ಸೋ ಫಾರ್ ಸೋ ಗುಡ್ | |
೧೯೯೬ | 18 ಟಿಲ್ ಐ ಡೈ | |
೧೯೯೭ | MTV ಅನ್ ಪ್ಲಗ್ಡ್ | |
೧೯೯೮ | ಆನ್ ಎ ಡೇ ಲೈಕ್ ಟುಡೇ | |
೧೯೯೯ | ದ ಬೆಸ್ಟ್ ಆಫ್ ಮೀ | |
೨೦೦೨ | ಸ್ಪಿರಿಟ್ | |
೨೦೦೩ | ಲೈವ್ ಎಟ್ ದ ಬ್ಯುಡೋಕನ್ | |
೨೦೦೪ | ರೂಂ ಸರ್ವೀಸ್ | ಪಾಲಿಡೋರ್ |
೨೦೦೫ | ಲೈವ್ ಇನ್ ಲಿಸ್ಬಾನ್ | |
೨೦೦೮ | 11 |
ಪ್ರಶಸ್ತಿಗಳು
[ಬದಲಾಯಿಸಿ]ಜುನೋಸ್ ಮತ್ತು ಗ್ರ್ಯಾಮೀಸ್ ಹಾಗೂ ಇತರ ಗಾಯನ ಪ್ರಶಸ್ತಿಗಳಲ್ಲದೆ, ಆಡಮ್ಸ್ ಬಾಬಿ ಎಂಬ ಚಿತ್ರದಲ್ಲಿ ಅರೆಥಾ ಫ್ರ್ಯಾಂಕ್ಲಿನ್ ಮತ್ತು ಮೇರಿ ಜೆ. ಬ್ಲೈಜ್ ಹಾಡಿದ, ತಾನು ರಚಿಸಿದ ಹಾಡಿಗಾಗಿ ಐದನೆಯ ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ನಾಮನಿರ್ದೇಶಿತನಾಗಿದ್ದನು, ಮತ್ತು ಚಲನಚಿತ್ರಗಳಿಗೆ ಗೀತೆ ರಚಿಸಿದ್ದಕ್ಕಾಗಿ ಮೂರು ಬಾರಿ ಅಕಾಡೆಮಿ ಪ್ರಶಸ್ತಿಗೆ ಇವನ ಹೆಸರು ಸೂಚಿತವಾಗಿತ್ತು.[೨೯][೪೮]
ಪುಸ್ತಕಗಳು
[ಬದಲಾಯಿಸಿ]- ಸೊರೆಲೆ ಸಯಿದಮನ್ ಬ್ರಿಯಾನ್ ಆಡಮ್ಸ್ ಎವೆರಿಥಿಂಗ್ ಹಿ ಡಸ್ , ರಾಂಡಮ್ ಹೌಸ್, ಟೊರೊಂಟೋ, ೧೯೯೩ ISBN ೦-೩೯೪-೨೨೩೦೦-X
- ಬ್ರಿಯಾನ್ ಆಡಮ್ಸ್, ಬ್ರಿಯಾನ್ ಆಡಮ್ಸ್ (ಚಿತ್ರಗಳ ಸಂಗ್ರಹ), ಫೈರ್ ಫ್ಲೈ ಬುಕ್ಸ್, ವಿಲ್ಲೋಡೇಲ್ ಕೆನಡಾ,೧೯೯೫, ISBN ೧-೮೯೫೫೬೫-೮೩-೯
ಮೊಕದ್ದಮೆ ಹಂಚಿಕೊಂಡ ಕಡತ
[ಬದಲಾಯಿಸಿ]ಯುನೈಟೆಡ್ ಸ್ಟೇಟ್ಸ್ ನ ಮೇಜರ್ ರೆಕಾರ್ಡ್ ಲೇಬಲ್ಸ್ ರವರು ಜ್ಯೂರಿಯ ಮುಂದೆ ಪ್ರಸ್ತುತ ಪಡಿಸಿದ ಕಾಪಿರೈಟ್ ಉಲ್ಲಂಘನೆಯ ಮೊಕದ್ದಮೆಯು ಆಡಮ್ಸ್ ನ ಮೊದಲ ಕಡತ-ಹಂಚಿಕೊಂಡಂತಹ ೨೪ ಹಾಡುಗಳ ಪೈಕಿ ಸಂಬಡಿ ಎಂಬ ಹಾಡಿಗೆ ಸಂಬಂಧಿತವಾದುದಾಗಿತ್ತು.
ಇವನ್ನೂ ಗಮನಿಸಿ
[ಬದಲಾಯಿಸಿ]- ಕೆನಡಿಯನ್ ರಾಕ್
- ಕೆನಡಾದ ಸಂಗೀತ
- ಅತಿ ಹೆಚ್ಚು ಬೇಡಿಕೆಯಲ್ಲಿರುವ ಸಂಗೀತ ಕಲಾವಿದರ ಪಟ್ಟಿ.
- ಅತಿ ಹೆಚ್ಚು ಬೇಡಿಕೆಯಲ್ಲಿರುವ ಆಲ್ಬಮ್ ಕಲಾವಿದರ ಪಟ್ಟಿ.
ಆಕರಗಳು
[ಬದಲಾಯಿಸಿ]- ↑ "Bryan Adams receives the Order of Canada". gg.ca. 1986-09-05. Archived from the original on 2008-05-04. Retrieved 2010-03-03.
- ↑ "O.B.C. Biography - Bryan Adams". protocol.gov.bc.ca. 1986-09-05. Archived from the original on 2008-07-20. Retrieved 2010-03-03.
- ↑ "Canada's Walk of Fame". Canada's Walk of Fame. 1986-09-05. Archived from the original on 2008-05-13. Retrieved 2010-03-03.
- ↑ "2008 Juno Awards". Juno Awards. 1986-09-05. Archived from the original on 2010-12-30. Retrieved 2010-03-03.
- ↑ ೫.೦ ೫.೧ ೫.೨ ೫.೩ ೫.೪ ೫.೫ ೫.೬ "Biography: Bryan Adams". musicianguide.com. Retrieved 2008-06-24.
- ↑ ಸೊರೆಲೆ ಸಯಿದಮನ್ ಬ್ರಿಯಾನ್ ಆಡಮ್ಸ್ ಎವೆರಿಥಿಂಗ್ ಹಿ ಡಸ್ , ರಾಂಡಮ್ ಹೌಸ್, ಟೊರೊಂಟೋ, ೧೯೯೩ ISBN ೦-೩೯೪-೨೨೩೦೦-X, ಅಧ್ಯಾಯ ೩: ಸ್ವೀನೀ ಟಾಡ್: ಇನ್ ದ ನಿಕ್ ಆಫ್ ಟೈಮ್ ಪುಟ. ೨೩ ಮತ್ತು ff
- ↑ ಸಯಿದ್ ಮನ್, ಪುಟ ೪೭
- ↑ ೮.೦ ೮.೧ ೮.೨ "CRIA Certifications". CRIA. Archived from the original on 2009-07-26. Retrieved 2008-06-24.
- ↑ ೯.೦ ೯.೧ ೯.೨ ೯.೩ ೯.೪ ೯.೫ ೯.೬ ೯.೭ "Artist Chart History - Bryan Adams". Allmusic. Archived from the original on 2010-10-17. Retrieved 2008-06-24.
- ↑ ೧೦.೦ ೧೦.೧ "ARIA Certifications". Australian Recording Industry Association. Retrieved 2008-06-24.
- ↑ ೧೧.೦ ೧೧.೧ "Bryan Adams - June 20" (in (Danish)). newmarketracecourses.co.uk. Archived from the original on 2008-05-26. Retrieved ೨೦೦೮-೦೬-೨೪.
{{cite web}}
: Check date values in:|accessdate=
(help)CS1 maint: unrecognized language (link) - ↑ ೧೨.೦ ೧೨.೧ ೧೨.೨ ೧೨.೩ "RIAA Certifications". Recording Industry Association of America. Retrieved 2008-06-24.
- ↑ ೧೩.೦೦ ೧೩.೦೧ ೧೩.೦೨ ೧೩.೦೩ ೧೩.೦೪ ೧೩.೦೫ ೧೩.೦೬ ೧೩.೦೭ ೧೩.೦೮ ೧೩.೦೯ ೧೩.೧೦ ೧೩.೧೧ "The Life Of Bryan" (in (Danish)). skolarbete.nu. Archived from the original on 2013-04-07. Retrieved ೨೦೦೮-೦೬-೨೪.
{{cite web}}
: Check date values in:|accessdate=
(help)CS1 maint: unrecognized language (link) - ↑ "Everything I Do". BBC. Retrieved 2008-06-24.
- ↑ ೧೫.೦ ೧೫.೧ "Bryan Adams not Canadian?". Ruling the Airwaves: The CRTC and Canadian Content. Retrieved 2008-06-24.
- ↑ "Allmusic - Grammy Awards". Allmusic. Archived from the original on 2010-10-17. Retrieved 2008-06-24.
- ↑ ೧೭.೦ ೧೭.೧ "Live Daily - Bryan Adams". -Live Daily. Archived from the original on 2010-02-05. Retrieved 2008-06-24.
- ↑ "Australian Chart". australian-charts.com. Retrieved 2008-06-24.
- ↑ "Austrian Chart". austriancharts.com. Archived from the original on 2009-02-04. Retrieved 2008-06-24.
- ↑ "Finnish Chart". finnishchartscom. Retrieved 2008-06-24.
- ↑ "French Chart". lescharts.com. Retrieved 2008-06-24.
- ↑ "Chartverfolgung / BRYAN ADAMS / Longplay" (in German). musicline.de. Archived from BRYAN/?type=longplay the original on 2012-01-11. Retrieved 2008-06-24.
{{cite web}}
: Check|url=
value (help)CS1 maint: unrecognized language (link) - ↑ "Irish Album Chart". irish-charts.com. Retrieved 2008-06-24.
- ↑ "Dutch Chart". dutchcharts.nl. Retrieved 2008-06-24.
- ↑ "Norwegian Chart". norwegiancharts.com. Retrieved 2008-06-24.
- ↑ "Swiss Chart". hitparade.ch. Retrieved 2008-06-24.
- ↑ "Belgian Chart (WAL)". Ultratop.be. Retrieved 2008-06-20.
- ↑ "BPI Certifications". British Phonographic Industry. Archived from the original on 2008-04-24. Retrieved 2008-06-24.
- ↑ ೨೯.೦ ೨೯.೧ "64th Golden Globe Awards Nominations". Golden Globe. 2006-12-14. Archived from the original on 2008-03-27. Retrieved 2008-09-01.
- ↑ "Wal-Mart secures album exclusive". Billboard.com. Retrieved 2008-06-24.
- ↑ "Coming attractions: Bryan Adams is down to the '11' hour". usatoday. Retrieved 2008-06-24.
- ↑ ಕೆನಡಾದ ಅಂಚೆಚೀಟಿ ವಿವರಗಳು, ಜುಲೈಯಿಂದಿ ಸೆಪ್ಟೆಂಬರ್ ೨೦೦೯, ಸಂಪುಟ XVIII, ಸಂಖ್ಯೆ ೩, ಪುಟ ೬
- ↑ "Bryan Adams gets the stamp of approval". vancouversun.com. Archived from the original on 2009-04-14. Retrieved 2009-01-03.
- ↑ ೩೪.೦ ೩೪.೧ ೩೪.೨ "1985: Was Live Aid the best rock concert ever?". BBC. 1985-07-13. Retrieved 2006-01-29.
- ↑ "Pink Floyd - The Wall". BBC. Retrieved 2006-01-29.
- ↑ ೩೬.೦ ೩೬.೧ ೩೬.೨ ೩೬.೩ "Reach Out to Asia". qf.edu.qa. Archived from the original on 2006-02-21. Retrieved 2006-01-29.
- ↑ ೩೭.೦ ೩೭.೧ "Bryan Adams performs to Karachi". BBC. 2006-01-29. Retrieved 2006-01-29.
- ↑ ೩೮.೦ ೩೮.೧ "Adams' peace concerts called off". BBC. 2007-10-15. Retrieved 2007-10-15.
- ↑ The PETA Files: Bryan Adams Takes On KFC Canada Archived 2009-08-03 ವೇಬ್ಯಾಕ್ ಮೆಷಿನ್ ನಲ್ಲಿ. ದ
- ↑ "ಆರ್ಕೈವ್ ನಕಲು". Archived from the original on 2009-12-22. Retrieved 2010-03-03.
- ↑ "Bryan Adams rocks by the river". royalmarsden.nhs.uk. Archived from the original on 2006-10-10. Retrieved 2006-01-29.
- ↑ "Hoping Foundation" (PDF). hopingfoundation.org. Archived from the original (PDF) on 2008-09-08. Retrieved 2006-01-29.
- ↑ ೪೩.೦ ೪೩.೧ "One Night Live". onenightlive.ca. Archived from the original on 2007-11-24. Retrieved 2006-01-29.
- ↑ ೪೪.೦ ೪೪.೧ ೪೪.೨ "telegraph.co.uk - Bryan Adams". telegraph.co.uk. Archived from the original on 2008-06-02. Retrieved 2021-08-10.
- ↑ Richard Melville Hall (March 20, 2007). "you want to hear a funny story?". Moby's journal. moby.com. Archived from the original on 2008-06-18. Retrieved 2007-03-20.
- ↑ Canada Post (March 20, 2007). "Canada Post - Press Releases - Bryan Adams attends the official unveiling of the new Queen stamp". Moby's journal. Canadas Post. Archived from the original on 2007-03-13. Retrieved 2007-03-20.
- ↑ Hear the World (May 2, 2006). "'Hear the World initiative". Hear the World. hear-the-world. Retrieved 2007-03-20.
- ↑ "Honours". thecanadianencyclopedia. Archived from the original on 2008-10-25. Retrieved 2007-04-13.
ಹೊರಗಿನ ಕೊಂಡಿಗಳು
[ಬದಲಾಯಿಸಿ]- Pages using the JsonConfig extension
- Articles with Danish-language external links
- CS1 errors: dates
- CS1 maint: unrecognized language
- CS1 errors: URL
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Articles with hatnote templates targeting a nonexistent page
- Articles with hCards
- Articles with unsourced statements from September 2009
- Articles with invalid date parameter in template
- Commons link is on Wikidata
- ಕೆನಡಾದ ಗಾಯಕರು
- ೧೯೫೯ ಜನನ
- A&M ರೆಕಾರ್ಡ್ಸ್ ನ ಕಲಾವಿದರು
- ಬ್ರಿಟಿಷ್ ಕೊಲಂಬಿಯಾದ ಸಂಗೀತಗಾರರು
- ಬ್ರಿಯಾನ್ ಆಡಮ್ಸ್
- ಕೆನಡಾದ ಚಟುಲ ವ್ಯಕ್ತಿಗಳು
- ಯುನೈಟೆಡ್ ಕಿಂಗ್ ಡಮ್ ನಲ್ಲಿರುವ ವಿದೇಶೀ ಕೆನಡಿಯನ್ನರು
- ಕೆನಡಾದ ಮ್ಯೂಸಿಕ್ ಹಾಲ್ ಆಫ್ ಫೇಮ್ ಗೆ ಸೇರಿಸಲ್ಪಟ್ಟವರು
- ಕೆನಡಾದ ಛಾಯಾಚಿತ್ರಗ್ರಾಹಕರು
- ಕೆನಡಾದ ರಾಕ್ ಗಿಟಾರ್ ವಾದಕರು
- ಕೆನಡಾದ ರಾಕ್ ಗಾಯಕರು
- ಕೆನಡಾದ ಗಾಯಕ-ಗೀತರಚನಕಾರರು
- ಕೆನಡಾದ ಗೀತರಚನಕಾರರು
- ಕೆನಡಾದ ವೆಗಾನರು
- ಇ೦ಗ್ಲೀಷ್ ಪೀಳಿಗೆಯ ಕೆನಡಿಯನ್ನರು
- ಮಾಲ್ಟೀಸ್ ಪೀಳಿಗೆಯ ಕೆನಡಿಯನ್ನರು
- ಇಂಗ್ಲಿಷ್ ಕೆನಡಿಯನ್ನರು
- ಇಂಗ್ಲಿಷ್ -ಭಾಷೆಯ ಗಾಯಕರು
- ಗ್ರ್ಯಾಮಿ ಅವಾರ್ಡ್ ವಿಜೇತರು
- ಇವಾರ್ ನೋವೆಲೋ ಪ್ರಶಸ್ತಿ ವಿಜೇತರು
- ಜೂನೋ ಪ್ರಶಸ್ತಿ ವಿಜೇತರು
- ಈಗಿರುವ ಜನರು
- ಆರ್ಡರ್ ಆಫ್ ದ ಬ್ರಿಟಿಷ್ ಕೊಲಂಬಿಯಾದ ಸದಸ್ಯರು.
- MTV ಯುರೋಪ್ ಸಂಗೀತ ಪ್ರಶಸ್ತಿ ವಿಜೇತರರು.
- ಆರ್ಡರ್ ಆಫ್ ಕೆನಡಾದ ಅಧಿಕಾರಿಗಳು
- ಕಿಂಗ್ ಸ್ಟನ್, ಆಂಟಾರಿಯೋದ ಜನಗಳು
- ಉತ್ತರ ವ್ಯಾಂಕೋವರ್ ನ ಜನಗಳು
- ಮಾಲ್ಟೀಸ್-ಬ್ರಿಟಿಷ್ ಪೀಳಿಗೆಯ ಜನಗಳು
- ವ್ಯಕ್ತಿಚಿತ್ರ ಛಾಯಾಚಿತ್ರಗ್ರಾಹಕರು
- ಸೋನಿ/ATV ಸಂಗೀತ ಪ್ರಕಾಶನದ ಕಲಾವಿದರು
- ವಿಶ್ವದಾಖಲೆ ಮಾಡಿರುವವರು
- ಪಾಶ್ಚಾತ್ಯ ಸಂಗೀತಗಾರರು