ಲುಧಿಯಾನ
Ludhiana
ਲੁਧਿਆਣਾ | |
---|---|
Country | India |
State | Punjab |
District | Ludhiana |
Named for | Sikander Lodi |
Government | |
• Type | Mayor–Council |
• Mayor | Harcharan Singh Gohalwaria (SAD) |
• DC[disambiguation needed] | Ravi Bhagat,IAS |
Area | |
• Total | ೩೧೦ km೨ (೧೨೦ sq mi) |
Elevation | ೨೬೨ m (೮೬೦ ft) |
Population (೨೦೧೧) | |
• Total | ೧೬೧೮೮೭೯ |
• Rank | 22nd |
• Density | ೯,೭೫೨/km೨ (೨೫,೨೬೦/sq mi) |
Demonym | Ludhianvi |
Languages | |
• Official | Punjabi, English |
Time zone | UTC+5:30 (IST) |
PIN | Multiple 141001-141011 |
Telephone code0161 | ೦೧೬೧ |
Vehicle registration | PB 10 |
Website | ludhiana.nic.in/ |
ಸಟ್ಲೆಜ್ ನದಿ ತಟದಲ್ಲಿರುವ ಲುಧಿಯಾನ ಪಂಜಾಬ್ ರಾಜ್ಯದ ಅತ್ಯಂತ ದೊಡ್ಡ ನಗರ. ರಾಜ್ಯದ ಕೇಂದ್ರದಲ್ಲಿ ನೆಲೆಯಾಗಿರುವ ನಗರವು ಹೊಸ ನಗರ ಮತ್ತು ಹಳೆ ನಗರವನ್ನು ಪ್ರತ್ಯೇಕಿಸುತ್ತದೆ. ೧೪೮೦ ರಲ್ಲಿ ನಿರ್ಮಿಸಲಾದ ಈ ನಗರಕ್ಕೆ ಲೋಧಿ ಆಡಳಿತದ ಹೆಸರನ್ನಿಡಲಾಯಿತು. ಕೆನಡಾ, ಬ್ರಿಟನ್, ಆಸ್ಟ್ರೇಲಿಯಾ ಮತ್ತು ಅಮೆರಿಕಾದಲ್ಲಿರುವ ಅನಿವಾಸಿ ಭಾರತೀಯರು ಈ ನಗರದವರಾಗಿದ್ದಾರೆ. ಆತಿಥ್ಯಕ್ಕೆ ಹೆಸರಾಗಿರುವ ಇಲ್ಲಿನ ಜನರನ್ನು ಲುಧಿನವಿಸ್ ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ.[೧]
ಲುಧಿಯಾನಾದಲ್ಲಿ ಅನಿವಾಸಿಗಳದ್ದೇ ಕಾರುಬಾರು
[ಬದಲಾಯಿಸಿ]ಲುಧಿಯಾನಾ ಪಂಜಾಬ್ ರಾಜ್ಯದ ಅತ್ಯಂತ ದೊಡ್ಡ ನಗರ. ರಾಜ್ಯದ ಕೇಂದ್ರದಲ್ಲಿ ನೆಲೆಯಾಗಿರುವ ನಗರ ಹೊಸ ನಗರ ಮತ್ತು ಹಳೆ ನಗರವನ್ನು ಪ್ರತ್ಯೇಕಿಸುತ್ತದೆ. ಕೆನಡಾ, ಬ್ರಿಟನ್, ಆಸ್ಟ್ರೇಲಿಯಾ ಮತ್ತು ಅಮೆರಿಕಾದಲ್ಲಿರುವ ಅನಿವಾಸಿ ಭಾರತೀಯರು ಈ ನಗರದಲ್ಲಿದ್ದಾರೆ. ಆತಿಥ್ಯಕ್ಕೆ ಹೆಸರಾಗಿರುವ ಇಲ್ಲಿನ ಜನರನ್ನು ಲುಧಿನವಿಸ್ ಎನ್ನುವ ಹೆಸರಿನಿಂದ ಕರೆಯುತ್ತಾರೆ.
ಲುಧಿಯಾನ ಪ್ರವಾಸೋದ್ಯಮದ ಕೆಲವು ಪ್ರಮುಖ ಆಕರ್ಷಣೆಗಳೆಂದರೆ ಗುರುದ್ವಾರ ಮನ್ಜಿ ಸಾಹಿಬ್, ಗುರುನಾನಕ್ ಭವನ್, ಫಿಲ್ಲೌರ್ ಕೋಟೆ, ಮಹಾರಾಜ ರಂಜಿತ್ ಸಿಂಗ್ ಯುದ್ಧ ಮ್ಯೂಸಿಯಂ, ಗುರುನಾನಕ್ ಸ್ಟೇಡಿಯಂ ಮತ್ತು ರಾಖ್ ಬಾಗ್ ಪಾರ್ಕ್. ಇವುಗಳನ್ನು ಹೊರತುಪಡಿಸಿ ಬೆಳಿಗ್ಗೆ ಮತ್ತು ಸಂಜೆ ವೇಳೆ ವಾಕಿಂಗ್ ಗೆ ಹೋಗುವಂತಹ ಹಲವಾರು ಗಾರ್ಡನ್ ಮತ್ತು ಪಾರ್ಕ್ ಗಳಿವೆ. ವಿರಾಮದ ವೇಳೆ ಲುಧಿಯಾನ ಪ್ರವಾಸೋದ್ಯಮದ ಭಾಗವಾಗಿರುವ ಅಮ್ಯೂಸ್ ಮೆಂಟ್ ಪಾರ್ಕ್‌ಗಳು ಮತ್ತು ಮೃಗಾಲಯಗಳಿಗೆ ಭೇಟಿಕೊಟ್ಟು ನೋಡಬಹುದು. ಅಂದಹಾಗೆ ಒಂದೇ ಮಾತಿನಲ್ಲಿ ಲುಧಿಯಾನ ಶಾಪಿಂಗ್‌ಗೆ ಹೇಳಿ ಮಾಡಿಸಿದ ನಗರ.
ಈ ಒಂದೇ ನಗರದಲ್ಲಿ ೨೦ಕ್ಕೂ ಹೆಚ್ಚು ಮಾಲ್‌ಗಳಿವೆ. ಇದರಲ್ಲಿ ಅಂತಾರಾಷ್ಟ್ರೀಯ ಮತ್ತು ದೇಶೀಯ ಬ್ರಾಂಡ್ ಗಳ ಮಳಿಗೆಗೆ ಮಣೆ ಹಾಕಲಾಗಿದೆ. ಇದರ ಜತೆಗೆ ದೇಶಿಯ ಫುಡ್ ಹಾಗೂ ವಿದೇಶಿ ಫುಡ್‌ಗಳಿಗೆ ಹೇಳಿಮಾಡಿಸಿದ ರೆಸ್ಟೋರೆಂಟ್‌ಗಳ ಸಂಖ್ಯೆನೂ ಹೆಚ್ಚುತ್ತಾ ಹೋಗುತ್ತಿದೆ. ಲಸ್ಸಿ ಪಂಜಾಬಿ ಪಾನೀಯದಲ್ಲಿ ಅತ್ಯಂತ ಜನಪ್ರಿಯ. ಇದನ್ನು ಸಿಹಿ ಹಾಗೂ ಉಪ್ಪು ಎರಡು ವಿಧದಲ್ಲಿ ಕುಡಿಯಬಹುದು. ಇಲ್ಲಿಂದ ರಸ್ತೆ ಮೂಲಕ ಕೇವಲ ನಾಲ್ಕು ಗಂಟೆಗಿಂತಲೂ ಕಡಿಮೆ ಅವಧಿಯಲ್ಲಿ ತಲುಪಬಹುದಾದ ನಗರಗಳೆಂದರೆ ಚಂದೀಗಢ್, ಕಸೌಲಿ, ಮಕ್ಲೊಡಗಂಜ್, ಧರ್ಮಸಾಲಾ, ಶಿಮ್ಲಾ ಮತ್ತು ಕುಫ್ರಿ.
ಲುಧಿಯಾನ ಮತ್ತು ಸುತ್ತಮುತ್ತಲಿನ ಪ್ರವಾಸಿ ತಾಣಗಳು
[ಬದಲಾಯಿಸಿ]ಲುಧಿಯಾನಾದ ಜಿಂಕೆ ಪಾರ್ಕ್
[ಬದಲಾಯಿಸಿ]ನೀಲನ್‌ನಲ್ಲಿರುವ ಜಿಂಕೆ ಪಾರ್ಕ್‌ನ ಹಸಿರು ಹೊದ್ದುಕೊಂಡಿರುವ ಸುತ್ತಮುತ್ತಲ ಪರಿಸರದಿಂದಾಗಿ ಒಳ್ಳೆಯ ಪಿಕ್ನಿಕ್ ತಾಣ. ಇಲ್ಲಿ ಬೃಹತ್ ಸಂಖ್ಯೆಯ ಜಿಂಕೆಗಳಿರುವ ಕಾರಣ ಇದನ್ನು ಜಿಂಕೆ ಪಾರ್ಕ್ ಎಂದು ಕರೆಯಲಾಗುತ್ತದೆ. ಲುಧಿಯಾನದಿಂದ ೨೦ ಕಿ.ಮೀ. ದೂರದಲ್ಲಿರುವ ಈ ಪಾರ್ಕ್ ಗೆ ದಿನಾಲೂ ವಾಕಿಂಗ್, ಜಾಗಿಂಗ್ ಮತ್ತು ಕೌಟುಂಬಿಕ ಪಿಕ್ನಿಕ್ ಮಾಡಲು ಪ್ರವಾಸಿಗರು ಬರುತ್ತಾರೆ. ಈ ಉದ್ಯಾನಕ್ಕೆ ಭೇಟಿ ನೀಡುವ ಪ್ರವಾಸಿಗಳು ಜಿಂಕೆ, ಸಾಂಬಾರ್, ಮುಳ್ಳುಹಂದಿ, ಬ್ಲ್ಯಾಕ್ ಬಕ್ ಮತ್ತು ಮೊಲಗಳನ್ನು ವೀಕ್ಷಿಸಬಹುದು. ಕೆಂಪುಗಿಣಿ, ಬೂದು ಕೌಜಗ ಮುಂತಾದ ವಿವಿಧ ಜಾತಿಯ ಪಕ್ಷಿಗಳು ಪ್ರವಾಸಿಗಳ ಕಣ್ಣೆದುರಿಗೆ ಹಾರುತ್ತಿರುತ್ತದೆ. .
ಗುರು ನಾನಕ್ ಸ್ಟೇಡಿಯಂ
[ಬದಲಾಯಿಸಿ]ಅಂತಾರಾಷ್ಟ್ರೀಯ ಗುಣಮಟ್ಟವನ್ನು ಹೊಂದಿರುವ ಈ ಸ್ಟೇಡಿಯಂನಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟಗಳು ನಡೆಯುತ್ತದೆ. ೨೦೦೧ರಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭವನ್ನು ಆಯೋಜಿಸಿತ್ತು. ಕಬಡ್ಡಿ ವಿಶ್ವಕಪ್ ಇದೇ ಸ್ಟೇಡಿಯಂನಲ್ಲಿ ನಡೆದಿತ್ತು. ಲುಧಿಯನ್ವಿಸ್ ನ ಪ್ರತಿಷ್ಠೆ ಯಾಗಿ ಉತ್ತಮವಾಗಿ ನಿರ್ವಹಣೆ ಮಾಡಿರುವ ಫುಟ್ಬಾಲ್ ಮೈದಾನವಿದೆ ಮತ್ತು ಇದರಲ್ಲಿ ರಾಷ್ಟ್ರೀಯ ಫುಟ್ಬಾಲ್ ಲೀಗ್(ಎನ್ ಎಫ್ ಎಲ್) ಪಂದ್ಯಗಳು ನಡೆಯುತ್ತದೆ. ಅತ್ಯಾಧುನಿಕ ಸೌಕರ್ಯಗಳನ್ನು ಒಳಗೊಂಡಿರುವ ಕಾಂಪ್ಲೆಕ್ಸ್ ನಲ್ಲಿ ಹಲವಾರು ಅಥ್ಲೆಟಿಕ್ಸ್, ಬಾಸ್ಕೆಟ್ ಬಾಲ್, ಫುಟ್ಬಾಲ್, ಹ್ಯಾಂಡ್ ಬಾಲ್, ವಾಲಿಬಾಲ್, ಬ್ಯಾಡ್ಮಿಂಟನ್, ಜಿಮ್ನಾಸ್ಟಿಕ್ ಮತ್ತು ಟೇಬಲ್ ಟೆನ್ನಿಸ್ ಕ್ರೀಡಾಕೂಟಗಳು ನಡೆಯುತ್ತದೆ.
ಹಾರ್ಡಿಸ್ ವರ್ಲ್ಡ್
[ಬದಲಾಯಿಸಿ]ಪಂಜಾಬ್ ರಾಜ್ಯದಲ್ಲಿರುವ ಬೃಹತ್ ವಾಟರ್ ಪಾರ್ಕ್ ಹಾರ್ಡಿಸ್ ವರ್ಲ್ಡ್ ಆಗಿದೆ. ಇದು ನಗರದಿಂದ ೧೩.೧ ಕಿ.ಮೀ. ದೂರದಲ್ಲಿ ಲುಧಿಯಾನ-ಜಲಂಧರ್ ಹೈವೇಯಲ್ಲಿದೆ. ಇದರ ಆವರಣದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್, ಪಾರ್ಟಿ ಏರಿಯಾ ಮತ್ತು ಆಹಾರ ಮಳಿಗೆಗಳಿವೆ. ಪಾರ್ಕ್ ನ ಒಳಗಡೆಯಿರುವ ವಾಟರ್ ಸಿಟಿ ಐಸ್ ಸ್ಕೇಟಿಂಗ್‌ನಂತಹ ಹಲವಾರು ರೀತಿಯ ಮನೋರಂಜನಾ ಚಟುವಟಿಕೆಗಳನ್ನು ಪ್ರವಾಸಿಗಳಿಗೆ ಒದಗಿಸಿಕೊಡುತ್ತಿದೆ. ಪ್ರವಾಸಿಗಳು ನದಿಯ ಬಳಿ ವಿಶ್ರಾಂತಿ ಪಡೆಯಬಹುದು ಮತ್ತು ವಿಶ್ವದ ದೊಡ್ಡ ವಾಟರ್ ಕೋಸ್ಟರ್ ನಲ್ಲಿ ರೈಡ್ ಮಾಡಬಹುದು. ಇಲ್ಲಿರುವ ತಂಪಾದ ಮತ್ತು ಪುಟಿದೇಳುವ ಅಲೆಗಳ ಕೊಳ ಮಕ್ಕಳಲ್ಲಿ ಈ ಪ್ರದೇಶವನ್ನು ಜನಪ್ರಿಯವಾಗಿಸುವಂತೆ ಮಾಡಿದೆ.
ನೆಹರೂ ಗುಲಾಬಿ ಉದ್ಯಾನ
[ಬದಲಾಯಿಸಿ]೨೭ ಎಕರೆ ಜಾಗದಲ್ಲಿ ವ್ಯಾಪಿಸಿರುವ ಈ ಉದ್ಯಾನ ಏಶ್ಯಾದ ಅತೀ ದೊಡ್ಡ ಗುಲಾಬಿ ಉದ್ಯಾನ. ಸುಮಾರು ೧೬೦೦ ಬಗೆಯ ಗುಲಾಬಿಗಳ ಸುಮಾರು ೧೭೦೦೦ ಗಿಡಗಳು ಈ ಉದ್ಯಾನದಲ್ಲಿದೆ. ಪ್ರತೀ ವರ್ಷ ಇಲ್ಲಿ ಗುಲಾಬಿ ಉತ್ಸವ ನಡೆಯುತ್ತಿದ್ದು, ಇದನ್ನು ವೀಕ್ಷಿಸಲು ಸ್ಥಳೀಯರು ಹಾಗೂ ಹೊರಗಿನವರು ಭಾರೀ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಭವ್ಯ ಕಾರಂಜಿಗಳಿಂದ ಉದ್ಯಾನದ ಸೌಂದರ್ಯ ಹೆಚ್ಚಿಸಿರುವುದಲ್ಲದೆ ನಗರಕ್ಕೆ ವಿಶ್ವಮಾನ್ಯತೆಯನ್ನು ತಂದುಕೊಟ್ಟಿದೆ. ಇದು ವಾಕಿಂಗ್ ಮಾಡುವವರಿಗೆ ಪ್ರಶಾಂತವಾದ ಮತ್ತು ಕುಟುಂಬದೊಂದಿಗೆ ಸಮಯ ಕಳೆಯಲು ಒಳ್ಳೆಯ ಸ್ಥಳ.
ಪಂಜಾಬ್ ಕೃಷಿ ವಿಶ್ವವಿದ್ಯಾನಿಲಯ ಮ್ಯೂಸಿಯಂ
[ಬದಲಾಯಿಸಿ]ಸುಮಾರು ೧೦೦೦ ಚದರ ಅಡಿ ಪ್ರದೇಶದಲ್ಲಿದ್ದು, ಇದು ಪಂಜಾಬ್ ನ ಗ್ರಾಮೀಣ ಜೀವನಶೈಲಿಯನ್ನು ಪರಿಚಯಿಸುತ್ತದೆ. ಹಿಂದಿನ ಕಾಲದಲ್ಲಿ ಗ್ರಾಮೀಣ ಭಾಗದ ಜನರು ದೈನಂದಿನ ಚಟುವಟಿಕೆಗಳಲ್ಲಿ ಬಳಸುತ್ತಿದ್ದ ಕಂಚಿನ ಮಡಕೆಗಳಲ್ಲಿ ನೀರನ್ನು ಸಾಗಿಸುವುದನ್ನು(ಈಗ ವಿದ್ಯುತ್ ಮೋಟರ್ ಗಳು ಮತ್ತು ಪಂಪ್ ಗಳು ಕೆಲಸ ಮಾಡುತ್ತಿವೆ) ಪ್ರವಾಸಿಗಳು ನೋಡಬಹುದು. ಪಂಜಾಬ್ ನ ನೈಜ ಅಥವಾ ಗ್ರಾಮೀಣ ಜೀವನವನ್ನು ನೋಡಬಯಸುವ ಪ್ರವಾಸಿಗರು ಈ ಮ್ಯೂಸಿಯಂಗೆ ಭೇಟಿ ನೀಡಲೇಬೇಕು. ಈ ಮ್ಯೂಸಿಯಂ ಹೋಮ್ ಸೈನ್ಸ್ ಕಾಲೇಜಿನ ಹಿಂದುಗಡೆಯಿದೆ ಮತ್ತು ರಜಾ ದಿನಗಳನ್ನು ಹೊರತುಪಡಿಸಿ ಉಳಿದೆಲ್ಲಾ ದಿನಗಳಲ್ಲಿ ಬೆಳಿಗ್ಗೆ ೯ ಗಂಟೆಯಿಂದ ಮಧ್ಯಾಹ್ನ ೧ ಗಂಟೆ ಮತ್ತು ಮಧ್ಯಾಹ್ನ ೨ರಿಂದ ೫ ಗಂಟೆ ತನಕ ಈ ಮ್ಯೂಸಿಯಂ ತೆರೆದಿರುತ್ತದೆ.
ಮಹಾರಾಜ ರಂಜಿತ್ ಸಿಂಗ್ ಯುದ್ಧ ಮ್ಯೂಸಿಯಂ
[ಬದಲಾಯಿಸಿ]ಧೀರ ಯೋಧರಿಗೆ ಗೌರವ ಸೂಚಕವಾಗಿ ಪಂಜಾಬ್ ಸರ್ಕಾರ ೧೯೯೯ರಲ್ಲಿ ಮಹಾರಾಜ ರಂಜಿತ್ ಸಿಂಗ್ ಯುದ್ಧ ಮ್ಯೂಸಿಯಂನ್ನು ಸ್ಥಾಪಿಸಿತು. ಇದು ಲುಧಿಯಾನ ರೈಲ್ವೆ ನಿಲ್ದಾಣದಿಂದ ೬.೭ ಕಿ.ಮೀ. ದೂರದಲ್ಲಿರುವ ಜಿಟಿ ರಸ್ತೆ(ಲುಧಿಯಾನ-ಅಮೃತಸರ ಹೈವೇ)ಯಲ್ಲಿದೆ. ಮ್ಯೂಸಿಯಂನ ಪ್ರವೇಶ ದ್ವಾರದಲ್ಲಿ ಮಹಾರಾಜ ರಂಜಿತ್ ಸಿಂಗ್ ರ ದೊಡ್ಡ ಮೂರ್ತಿಯಿದೆ. ಮೂರ್ತಿಯ ಬದಿಯಲ್ಲಿ ಐಎನ್ ಎಸ್ ವಿಕ್ರಾಂತ್ ನ ಮಾದರಿ ಸೇರಿದಂತೆ ಹಳೆಯ ಶಸ್ತ್ರಾಸ್ತ್ರಗಳಿವೆ. ಮ್ಯೂಸಿಯಂನಲ್ಲಿ ಬೆಳಕು ಮತ್ತು ಶಬ್ದದ ಪ್ರದರ್ಶನವನ್ನು ಆಯೋಜಿಸಲಾಗುತ್ತದೆ. ಪರಮವೀರ ಚಕ್ರ, ಮಹಾವೀರ ಚಕ್ರ ಮತ್ತು ವೀರ ಚಕ್ರಗಳಂತಹ ಪ್ರತಿಷ್ಠಿತ ಶೌರ್ಯ ಪ್ರಶಸ್ತಿಗಳನ್ನು ಪಡೆದಿರುವಂತಹ ಪಂಜಾಬಿಗಳ ಭಾವಚಿತ್ರಗಳನ್ನು ಇಲ್ಲಿ ಕಾಣಬಹುದು. ಬ್ರಿಟಿಷರ ಕಾಲದಿಂದ ಹಿಡಿದು ಇಂದಿನವರೆಗಿನ ಭಾರತದ ಸೇನೆಯ ಯೂನಿಫಾರಂನ್ನು ಇಲ್ಲಿ ಪ್ರದರ್ಶಿಸಲಾಗಿದೆ.
ಗುರುದ್ವಾರ ಚರಣ ಕವಲ್ ಸಾಹಿಬ್ ಮಚ್ಛಿವಾರ
[ಬದಲಾಯಿಸಿ]ಲುಧಿಯಾನದಿಂದ ೩೯ ಕಿ.ಮೀ. ದೂರದಲ್ಲಿರುವ ಮಚ್ಛಿವಾರ ನಗರದಲ್ಲಿನ ಚರಣ್ ಕಮಲ್ ರಸ್ತೆಯಲ್ಲಿದೆ. ಈ ಗುರುದ್ವಾರದಲ್ಲಿರುವ ಉದ್ಯಾನದಲ್ಲಿ ಗುರು ಗೋಬಿಂದ್ ಸಿಂಗ್ ಜೀ ಅವರು ನೀರು ಕುಡಿದು ಕಿರು ನಿದ್ದೆ ಮಾಡಿದರೆಂಬ ನಂಬಿಕೆಯಿದೆ. ಇದೇ ಸ್ಥಳದಲ್ಲಿ ಅವರ ಮೂವರು ಅನುಯಾಯಿಗಳಾದ ಧರಂ ಸಿಂಗ್, ದಾಗಾ ಸಿಂಗ್ ಮತ್ತು ಮನು ಸಿಂಗ್ ಜತೆ ಸೇರಿದರು. ಈ ಮಹತ್ವದ ಘಟನೆ ನಡೆದ ಸ್ಮರಣಾರ್ಥಕವಾಗಿ ಡಿಸೆಂಬರ್ ತಿಂಗಳಲ್ಲಿ ಬೃಹತ್ ಮೇಳವನ್ನು ನಡೆಸಲಾಗುತ್ತದೆ. ಇದರ ಸಮೀಪದಲ್ಲೇ ಇರುವ ಮತ್ತೊಂದು ಪೂಜಾ ಕೇಂದ್ರವೆಂದರೆ ಗುರುದ್ವಾರ ಚುಬಾರ ಸಾಹಿಬ್. ಇದನ್ನು ಗುಲಾಬದ ಬುಬಾರ ಎಂದು ಕರೆಯಲಾಗುತ್ತದೆ. ಗುಲಾಬ್ ಮಸಂದ್ ಮನೆಯಲ್ಲಿ ಗುರುಜೀ ಒಂದು ರಾತ್ರಿ ಕಳೆದಿದ್ದರೆಂಬ ಪ್ರತೀತಿಯಿದೆ.
ಗುರುದ್ವಾರ ಅಲಮ್ಗಿರ್ ಸಾಹಿಬ್
[ಬದಲಾಯಿಸಿ]ಗುರುದ್ವಾರ ಮನ್ಜಿ ಸಾಹಿಬ್‌ನ್ನು ಗುರುದ್ವಾರ ಅಲಮ್ಗಿರ್ ಸಾಹಿಬ್ ಎಂದೂ ಪ್ರಸಿದ್ಧಿ ಪಡೆದಿದೆ. ಇದು ಲುಧಿಯಾನದ ಆಗ್ನೇಯ ಭಾಗದಲ್ಲಿ ೧೧ ಕಿ.ಮೀ. ದೂರದಲ್ಲಿದೆ. ಗುರು ಗೋಬಿಂದ್ ಸಿಂಗ್ ಜಿ ಅವರು ಮಚ್ಛಿವಾರ್ ಗೆ ತೆರಳುವ ಮೊದಲು ಕೆಲ ಸಮಯ ಇಲ್ಲಿ ತಂಗಿದ್ದರೆಂದು ಹೇಳಲಾಗುತ್ತಿದೆ. ಈ ಪ್ರದೇಶದಲ್ಲಿ ನೀರಿಲ್ಲವೆಂದು ಅರಿತ ಗುರು ಜೀ ಅವರು ನೆಲಕ್ಕೊಂದು ಬಾಣ ಬಿಟ್ಟರು. ಆ ಬಾಣ ನಾಟಿದ ಸ್ಥಳದಲ್ಲಿ ನೀರಿನ ಕಾರಂಜಿಯೇ ಚಿಮ್ಮಿತ್ತು. ಇದನ್ನು ಬಳಿಕ ಕೊಳವಾಗಿ ಪರಿವರ್ತಿಸಲಾಗಿದ್ದು, ಈಗ ಇದನ್ನು ಬಾಣದ ಕೊಳ- ತಿರ್ಸಾರ್ ಎನ್ನಲಾಗುತ್ತಿದೆ. ಗುರು ತೇಗ್ ಬಹದೂರ್ ಜೀ ಅವರ ಶಾಹಿದಿ ದಿವಸ್ ಭಾರೀ ಸಂಖ್ಯೆಯ ಪ್ರವಾಸಿಗರನ್ನು ಸೆಳೆಯುತ್ತದೆ.
ಹುಲಿ ಸಫಾರಿ
[ಬದಲಾಯಿಸಿ]ಮುಖ್ಯ ನಗರದಿಂದ ೬ ಕಿ.ಮೀ. ದೂರದಲ್ಲಿ ಜಿಟಿ ರಸ್ತೆ(ಲುಧಿಯಾನ-ಜಲಂಧರ್ ಹೈವೇ)ಯಲ್ಲಿದ್ದು, ಸುಮಾರು ೨೫ ಎಕ್ರೆಯಲ್ಲಿ ವ್ಯಾಪಿಸಿದೆ. ಪ್ರವಾಸಿಗಳು ಹುಲಿ ಬ್ಲ್ಯಾಕ್ ಬಕ್ಸ್, ಮೊಲಗಳು, ಜಿಂಕೆ ಮತ್ತು ನವಿಲುಗಳನ್ನು ಈ ಪ್ರದೇಶದಲ್ಲಿ ಕಾಣಬಹುದಾಗಿದೆ. ಮೃಗಾಲಯದಲ್ಲಿ ಹೋಗಿ ಹುಲಿಯನ್ನು ನೋಡುವುದಕ್ಕಿಂತಲೂ ಅದು ಮುಕ್ತ ವಾತಾವರಣದಲ್ಲಿ ತಿರುಗಾಡುವುದನ್ನು ನೋಡುವುದು ಒಳ್ಳೆಯ ಅನುಭವ. ನಗರದ ವನ್ಯಜೀವಿ ಇಲಾಖೆ ಸಫಾರಿ ನಡೆಸುವ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಗೆ ಒಪ್ಪಿಸಿದೆ. ಸೋಮವಾರ ನಿರ್ವಹಣೆಗೆ ರಜೆಯಿದೆ. ಈ ಸಫಾರಿ ವಾರದ ಉಳಿದೆಲ್ಲಾ ದಿನ ತೆರೆದಿರುತ್ತದೆ. ಪ್ರವಾಸಿಗಳು ಹುಲಿ ಸಫಾರಿ, ಹಾರ್ಡಿಸ್ ವರ್ಲ್ಡ್ ಮತ್ತು ಮಹಾರಾಜ ರಂಜಿತ್ ಸಿಂಗ್ ಯುದ್ಧ ಮ್ಯೂಸಿಯಂನ್ನು ಒಂದೇ ಭೇಟಿಯಲ್ಲಿ ನೋಡಬಹುದು. ತನ್ನ ಸಂಸ್ಕೃತಿ ಮತ್ತು ಪರಂಪರೆಗೆ ವ್ಯಾಪಕವಾಗಿ ಹೆಸರುವಾಸಿಯಾಗಿರುವ ಲುಧಿಯಾನದ ಪಂಜಾಬಿ ಭವನ, ಗುರುನಾನಕ್ ಭವನ ಮತ್ತು ನೆಹರೂ ಸಿದ್ಧಾಂತ ಕೇಂದ್ರ ಅಡಿಟೋರಿಯಂನಲ್ಲಿ ಆಯೋಜಿಸಲಾಗುವ ಧಾರ್ಮಿಕ ಉತ್ಸವಗಳನ್ನು ವೀಕ್ಷಿಸಲು ಪ್ರವಾಸಿಗಳು ಆಗಮಿಸುತ್ತಾರೆ. ಸಾಂಸ್ಕೃತಿಕ ಉತ್ಸವವನ್ನು ಹೊರತುಪಡಿಸಿ ಪ್ರವಾಸಿಗಳಿಗೆ ಜಾನಪದ ಸಂಗೀತ, ನೃತ್ಯ, ಆಟ, ರೋಪ್ ಡ್ಯಾನ್ಸ್ ಮತ್ತು ಇತರ ವೈವಿಧ್ಯಮಯ ಚಟುವಟಿಕೆಗಳನ್ನು ನೋಡಬಹುದು. ಪಂಜಾಬ್ ನಲ್ಲಿ ಅತ್ಯಂತ ಜನಪ್ರಿಯವಾಗಿರುವ ಲೊಹ್ರಿಯನ್ನು ಪೊಹ್ ನ ಕೊನೆಯ ದಿನದಂದು ಆಚರಿಸಲಾಗುತ್ತದೆ. ಇತರ ಹಬ್ಬಗಳಾದ ಬಸಂತ ಪಂಚಮಿ, ಹೋಳಿ, ಬೈಸಾಕಿ ಮತ್ತು ಗುರುಪುರಬ್ ಲುಧಿಯಾನ ಪ್ರವಾಸೋದ್ಯಮದಲ್ಲಿ ನಿಜವಾಗಿಯೂ ಆಸಕ್ತಿ ಮತ್ತು ಉತ್ಸಾಹವನ್ನು ಹೆಚ್ಚಿಸುತ್ತದೆ.
ಲುಧಿಯಾನ ತಲುಪುವುದು ಹೇಗೆ
[ಬದಲಾಯಿಸಿ]ಲುಧಿಯಾನ ದೆಹಲಿಯಿಂದ ಸುಮಾರು ೩೨೦ ಕಿ.ಮೀ. ದೂರದಲ್ಲಿದೆ. ರಸ್ತೆ ಮೂಲಕ ಪ್ರಯಾಣಿಸಿದರೆ ೫ ಗಂಟೆಯಲ್ಲಿ ತಲುಪಬಹುದು. ದೇಶದ ವಿವಿಧ ಭಾಗಗಳಿಂದ ಈ ನಗರಕ್ಕೆ ಹಲವಾರು ರೈಲುಗಳು ಸಂಪರ್ಕ ಕಲ್ಪಿಸುತ್ತದೆ. ರಿಕ್ಷಾ ಮತ್ತು ಬಸ್ ಮೂಲಕ ನಗರದಲ್ಲಿ ಪ್ರಯಾಣಿಸುವುದು ತುಂಬಾ ಅನುಕೂಲಕರ.
ಉಲ್ಲೇಖಗಳು
[ಬದಲಾಯಿಸಿ]- ↑ "India's Manchester". BBC. 28 February 2006.