ವಿಷಯಕ್ಕೆ ಹೋಗು

ವಿಷುವಲ್ ಬೇಸಿಕ್ ಫಾರ್ ಅಪ್ಲಿಕೇಷನ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರೋಗ್ರಾಮಿಂಗ್ ಮಾದರಿ (ಪ್ಯಾರಾಡಿಗಮ್)ಮೈಕ್ರೋಸಾಫ್ಟ್
ಬಿಡುಗಡೆ1993 (1993)
ಸಾಫ್ಟ್ವೇರ್ ರಿಲೀಸ್ ಲೈಫ್ ಸೈಕಲ್೭.೧ (ಆಫೀಸ್ ೨೦೨೧)
ಟೈಪಿಂಗ್ಸ್ಟಾಟಿಕ್/ಡೈನಾಮಿಕ್ ಹೈಬ್ರಿಡ್, ಸ್ಟ್ರಾಂಗ್/ವೀಕ್ ಹೈಬ್ರಿಡ್
ಪ್ರಭಾವಿತವಾಗಿದೆಕ್ವಿಕ್ ಬೇಸಿಕ್, ವಿಷುಯಲ್ ಬೇಸಿಕ್
ಓಎಸ್ಮೈಕ್ರೋಸಾಫ್ಟ್ ವಿಂಡೋಸ್, ಮ್ಯಾಕ್ ಒಸ್
ಪರವಾನಗಿವಾಣಿಜ್ಯ ಸ್ವಾಮ್ಯದ ಸಾಫ್ಟ್‌ವೇರ್

ವಿಷುವಲ್ ಬೇಸಿಕ್ ಫಾರ್ ಅಪ್ಲಿಕೇಷನ್ಸ್ (ವಿಬಿಎ) ಎನ್ನುವುದು ಮೈಕ್ರೋಸಾಫ್ಟ್ ಕಾರ್ಪೊರೇಷನ್ ಅಭಿವೃದ್ಧಿಪಡಿಸಿದ ಪ್ರೋಗ್ರಾಮಿಂಗ್ ಭಾಷೆಯಾಗಿದೆ. ವಿಷುವಲ್ ಬೇಸಿಕ್ ೬.೦ ಅನ್ನು ಡೆಸ್ಕ್‌ಟಾಪ್ ಮೈಕ್ರೋಸಾಫ್ಟ್ ಆಫೀಸ್ ಅಪ್ಲಿಕೇಶನ್‌ಗಳಲ್ಲಿ ನಿರ್ಮಿಸಲಾಗಿದೆ. ಬಳಕೆದಾರ ಫಾರ್ಮ್‌ಗಳು ಅಥವಾ ಡೈಲಾಗ್ ಬಾಕ್ಸ್‌ಗಳೊಂದಿಗೆ ಕೆಲಸ ಮಾಡುವುದು, ಹೋಸ್ಟ್ ಅಪ್ಲಿಕೇಶನ್‌ನ ಹಲವು ಅಂಶಗಳನ್ನು ನಿಯಂತ್ರಿಸಲು ವಿಷುಯಲ್ ಬೇಸಿಕ್ ಫಾರ್ ಅಪ್ಲಿಕೇಷನ್ಸ್ ಅನ್ನು ಬಳಸಬಹುದು.

ವಿಷುವಲ್ ಬೇಸಿಕ್ ರನ್‌ಟೈಮ್ ಲೈಬ್ರರಿಯನ್ನು ಬಳಸುತ್ತದೆ. ವಿಬಿಎ ಕೋಡ್ ಸಾಮಾನ್ಯವಾಗಿ ಹೋಸ್ಟ್ ಅಪ್ಲಿಕೇಶನ್‌ನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ.

ಮ್ಯಾಕ್ ಒಎಸ್ ಎಕ್ಸ್ (ಆವೃತ್ತಿ ೨೦೦೮ ಹೊರತುಪಡಿಸಿ) ಮತ್ತು ಮೈಕ್ರೋಸಾಫ್ಟ್ ಮ್ಯಾಪ್‌ಪಾಯಿಂಟ್ ಮತ್ತು ಮೈಕ್ರೋಸಾಫ್ಟ್ ವಿಸಿಯೋ ಸೇರಿದಂತೆ ಇತರ ಮೈಕ್ರೋಸಾಫ್ಟ್ ಅಪ್ಲಿಕೇಶನ್‌ಗಳನ್ನು ಒಳಗೊಂಡಂತೆ ಹೆಚ್ಚಿನ ಮೈಕ್ರೋಸಾಫ್ಟ್ ಆಫೀಸ್ ಅಪ್ಲಿಕೇಶನ್‌ಗಳಲ್ಲಿ ವಿಬಿಎ ಅನ್ನು ನಿರ್ಮಿಸಲಾಗಿದೆ.

ವಿನ್ಯಾಸ

[ಬದಲಾಯಿಸಿ]

ವಿಬಿಎಯಲ್ಲಿ ಬರೆಯಲಾದ ಕೋಡ್ ಅನ್ನು ಮೈಕ್ರೋಸಾಫ್ಟ್ ಪಿ-ಕೋಡ್‌ಗೆ ಸಂಕಲಿಸಲಾಗುತ್ತದೆ.[] ಮೈಕ್ರೋಸಾಫ್ಟ್ ಪಿ-ಕೋಡ್ ಅನ್ನುವುದು ಮಧ್ಯಂತರ ಭಾಷೆಯಾಗಿದೆ. ಇದನ್ನು ಹೋಸ್ಟ್ ಅಪ್ಲಿಕೇಶನ್‌ಗಳು (ಆಕ್ಸೆಸ್, ಎಕ್ಸೆಲ್, ವರ್ಡ್, ಔಟ್‌ಲುಕ್ ಮತ್ತು ಪವರ್‌ಪಾಯಿಂಟ್) ಸಿಒಎಮ್‌ ರಚನಾತ್ಮಕ ಸಂಗ್ರಹಣೆಯಲ್ಲಿ ಪ್ರತ್ಯೇಕ ಸ್ಟ್ರೀಮ್‌ನಂತೆ ಸಂಗ್ರಹಿಸುತ್ತವೆ. ನಂತರ ಮಧ್ಯಂತರ ಕೋಡ್ ಅನ್ನು ವರ್ಚುವಲ್ ಯಂತ್ರದಿಂದ ಕಾರ್ಯಗತಗೊಳಿಸಲಾಗುತ್ತದೆ(ಹೋಸ್ಟ್ ಅಪ್ಲಿಕೇಶನ್‌ನಿಂದ ಹೋಸ್ಟ್ ಮಾಡಲಾಗುತ್ತದೆ). ವಿಬಿಎ ಮಾಡ್ಯೂಲ್‌ಗಳು ಮತ್ತು ಕ್ಲಾಸಸ್‌ಗಳ ಮೂಲ ಕೋಡ್ ಅನ್ನು ನೇರವಾಗಿ ಪಡೆಯಬಹುದು.

ಆಟೋಮೇಷನ್

[ಬದಲಾಯಿಸಿ]

ಹೋಸ್ಟ್ ಅಪ್ಲಿಕೇಶನ್‌ನೊಂದಿಗಿನ ಸಂವಹನಕ್ಕಾಗಿ ಒಎಲ್‌ಇ ಆಟೋಮೇಷನ್ ಅನ್ನು ಬಳಸುತ್ತದೆ. ಹೋಸ್ಟ್ ಅಪ್ಲಿಕೇಶನ್ ಒಂದು ರೀತಿಯ ಲೈಬ್ರರಿಯನ್ನು ಮತ್ತು ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ (ಎಪಿಐ) ದಾಖಲಾತಿಯನ್ನು ಒದಗಿಸುತ್ತದೆ. ಇದು ವಿಬಿಎ ಪ್ರೋಗ್ರಾಂಗಳು ಅಪ್ಲಿಕೇಶನ್‌ನೊಂದಿಗೆ ಹೇಗೆ ಸಂವಹನ ನಡೆಸಬಹುದು ಎಂಬುದನ್ನು ದಾಖಲಿಸುತ್ತದೆ.

ವಿಬಿಎ ಕೋಡ್‌ನಲ್ಲಿ ಅಪ್ಲಿಕೇಶನ್ ಆಬ್ಜೆಕ್ಟ್‌‌ಗಳನ್ನು ರಚಿಸುವ ಮೂಲಕ ಒಂದು ಹೋಸ್ಟ್‌ನಿಂದ ಅನೇಕ ಅಪ್ಲಿಕೇಶನ್‌ಗಳನ್ನು ಸ್ವಯಂಚಾಲಿತಗೊಳಿಸಬಹುದು. ಅಪ್ಲಿಕೇಶನ್‌ನಲ್ಲಿ ಬಳಸಲು ಯಾವುದೇ ಮಾಡ್ಯೂಲ್‌ಗಳು, ಆಬ್ಜೆಕ್ಟ್‌‌ಗಳು ಇತ್ಯಾದಿಗಳು ಲಭ್ಯವಾಗುವ ಮೊದಲು ವಿವಿಧ ಲೈಬ್ರರಿಗಳ ಉಲ್ಲೇಖಗಳನ್ನು ವಿಬಿಎ ಕ್ಲೈಂಟ್‌ನಲ್ಲಿ ರಚಿಸಬೇಕು. ಈ ಅಪ್ಲಿಕೇಶನ್‌ ಆಬ್ಜೆಕ್ಟ್‌ಗಳು ಮೊದಲು ರಚಿನೆಯಾದಾಗ ಅಪ್ಲಿಕೇಶನ್‌ಗೆ ಒಎಲ್‌ಇ ಲಿಂಕ್ ಅನ್ನು ರಚಿಸುತ್ತವೆ.

ಮೈಕ್ರೋಸಾಫ್ಟ್ ಆಕ್ಸೆಸ್‌ನಲ್ಲಿ ಬರೆದ ವಿಬಿಎ ಕೋಡ್ ಅನ್ನು ಎಕ್ಸೆಲ್, ವರ್ಡ್ ಮತ್ತು ಔಟ್‌ಲುಕ್ ಲೈಬ್ರರಿಗಳಿಗೆ ಉಲ್ಲೇಖಗಳನ್ನು ಮಾಡಬಹುದು.

ಇಂಟರ್-ಪ್ರೊಸೆಸ್ ಕಮ್ಯುನಿಕೇಶನ್ ಆಟೋಮೇಷನ್ ಡೈನಾಮಿಕ್ ಡೇಟಾ ಎಕ್ಸ್‌ಚೇಂಜ್ (ಡಿಡಿ‌ಇ) ಮತ್ತು ರಿಯಲ್‌ಟೈಮ್‌ಡೇಟಾ (ಆರ್‌ಟಿಡಿ) ಅನ್ನು ಒಳಗೊಂಡಿದೆ.[]

ಬಳಕೆದಾರರು ವಿಬಿಎ ಹೋಸ್ಟ್ ಅಪ್ಲಿಕೇಶನ್ ಆಯ್ಕೆಗಳನ್ನು ಪಡೆಯಬಹುದಾಗಿದೆ.

ಆವೃತ್ತಿಯ ಇತಿಹಾಸ

[ಬದಲಾಯಿಸಿ]
  • ೧೯೯೩ ರಲ್ಲಿ ವಿಬಿಎ ಅನ್ನು ಮೊದಲು ಎಮ್‌ಎಕ್ಸ್ ಎಕ್ಸೆಲ್ ೫.೦ ನೊಂದಿಗೆ ಪ್ರಾರಂಭಿಸಲಾಯಿತು.
  • ೧೯೯೬ ರಲ್ಲಿ ವಿಬಿಎ ೪.೦ ಸಂಪೂರ್ಣವಾಗಿ ನವೀಕರಿಸಿದ ಆವೃತ್ತಿಯೊಂದಿಗೆ ಬಿಡುಗಡೆಯಾಯಿತು. ಇದನ್ನು ಸಿ++(C++) ನಲ್ಲಿ ಬರೆಯಲಾಗಿದೆ. ಇದು ಆಬ್ಜೆಕ್ಟ್‌‌ ಒರಿಯೆನ್‌ಟೆಡ್ ಭಾಷೆಯಾಗಿದೆ.
  • ೧೯೯೭ ರಲ್ಲಿ ವಿಬಿಎ ೫.೦ ಅನ್ನು ಎಮ್‌ಎಸ್ ಆಫೀಸ್ ೯೭ ಉತ್ಪನ್ನಗಳೊಂದಿಗೆ ಪ್ರಾರಂಭಿಸಲಾಯಿತು.
  • ೧೯೯೯ ರಲ್ಲಿ ವಿಬಿಎ ೬.೦ ಮತ್ತು ವಿಬಿಎ ೬.೧ ಅನ್ನು ಪ್ರಾರಂಭಿಸಲಾಯಿತು.
  • ಆಫೀಸ್ ಎಕ್ಸ್‌ಪಿ ನಂತರ ವಿಬಿಎ ೬.೩ ಬಿಡುಗಡೆಯಾಯಿತು. ವಿಬಿಎ ೬.೪ ನಂತರ ಆಫೀಸ್ ೨೦೦೩‍ ಬಿಡುಗಡೆಯಾಯಿತು. ವಿಬಿಎ ೬.೫ ಅನ್ನು ಆಫೀಸ್ ೨೦೦೭ ನೊಂದಿಗೆ ಬಿಡುಗಡೆ ಮಾಡಲಾಯಿತು.
  • ಆಫೀಸ್ ೨೦೦೩‍ ವಿಬಿಎ ೭.೦ ಅನ್ನು ಒಳಗೊಂಡಿದೆ. ೬೪-ಬಿಟ್ ಬೆಂಬಲವನ್ನು ಹೊರತುಪಡಿಸಿ ವಿಬಿಎ ೬.೫ ಗೆ ಹೋಲಿಸಿದರೆ ವಿಬಿಎ ೭.೦ ನಲ್ಲಿ ಯಾವುದೇ ಹೊಸ ವೈಶಿಷ್ಟ್ಯಗಳಿಲ್ಲ.
  • ಆಫೀಸ್ ೨೦೧೩, ಆಫೀಸ್ ೨೦೧೬, ಆಫೀಸ್ ೨೦೧೯ ಮತ್ತು ಆಫೀಸ್ ೨೦೨೧ ವಿಬಿಎ ೭.೧ ಅನ್ನು ಒಳಗೊಂಡಿದೆ.

ಅಭಿವೃದ್ಧಿ

[ಬದಲಾಯಿಸಿ]
ಮೈಕ್ರೋಸಾಫ್ಟ್ ಎಕ್ಸೆಲ್ ನಲ್ಲಿ ವಿಬಿಎ

ಜುಲೈ ೧, ೨೦೦೭ ರ ಪ್ರಕಾರ ಮೈಕ್ರೋಸಾಫ್ಟ್ ಇನ್ನು ಮುಂದೆ ಹೊಸ ಗ್ರಾಹಕರಿಗೆ ವಿಬಿಎ ವಿತರಣಾ ಪರವಾನಗಿಗಳನ್ನು ನೀಡುವುದಿಲ್ಲ. .ನೆಟ್ ಫ್ರೇಮ್‌ವರ್ಕ್ ಬಿಡುಗಡೆಯಾದಾಗಿನಿಂದ ಮೈಕ್ರೋಸಾಫ್ಟ್ .ನೆಟ್-ಆಧಾರಿತ ಭಾಷೆಗಳನ್ನು ವಿಬಿಎಯ ಪ್ರಸ್ತುತ ಆವೃತ್ತಿಗೆ ಸೇರಿಸಲು ಉದ್ದೇಶಿಸಿದೆ.[] ಅದರಲ್ಲಿ ೧.೦ ಮತ್ತು ೧.೧ ಆವೃತ್ತಿಗಳು .ನೆಟ್ ಫ್ರೇಮ್‌ವರ್ಕ್‌ಗಾಗಿ ಸ್ಕ್ರಿಪ್ಟ್ ಹೆಸರಿನ ಸ್ಕ್ರಿಪ್ಟಿಂಗ್ ರನ್‌ಟೈಮ್ ತಂತ್ರಜ್ಞಾನವನ್ನು ಒಳಗೊಂಡಿದೆ.[] ವಿಷುವಲ್ ಸ್ಟುಡಿಯೋ .ನೆಟ್ ೨೦೦೨ ಮತ್ತು ೨೦೦೩ ಎಸ್‌ಡಿಕೆಗಳು ವಿಬಿ.ನೆಟ್ ಅನ್ನು ಬೆಂಬಲಿಸುವ ವಿಷುವಲ್ ಸ್ಟುಡಿಯೋ ಫಾರ್ ಅಪ್ಲಿಕೇಷನ್ಸ್ (ವಿಎಸ್‌ಎ) ಎಂಬ ಪ್ರತ್ಯೇಕ ಸ್ಕ್ರಿಪ್ಟಿಂಗ್ ಐಡಿ‌ಇ ಅನ್ನು ಒಳಗೊಂಡಿತ್ತು.[][][]

ಆಫೀಸ್ ೨೦೧೦ ನೊಂದಿಗೆ, ಮೈಕ್ರೋಸಾಫ್ಟ್ ವಿಬಿಎ ೭ ಅನ್ನು ಪರಿಚಯಿಸಿತು. ಇದು ನಿಜವಾದ LongPtr ಎಂಬ ಪಾಯಿಂಟರ್ ಡೇಟಾ ಪ್ರಕಾರವನ್ನು ಒಳಗೊಂಡಿದೆ.

ಆಫೀಸ್ ೨೦೧೦ ರ ೬೪-ಬಿಟ್ ಸ್ಥಾಪನೆಯು ಎಂಎಸ್‌ಸಿಒಎಂಸಿಟಿ ೧ (ಟ್ಯಾಬ್‌ಸ್ಟ್ರಿಪ್, ಟೂಲ್‌ಬಾರ್, ಸ್ಟೇಟಸ್‌ಬಾರ್, ಪ್ರೋಗ್ರೆಸ್‌ಬಾರ್, ಟ್ರೀವ್ಯೂ, ಲಿಸ್ಟ್‌ವ್ಯೂಸ್, ಇಮೇಜ್‌ಲಿಸ್ಟ್, ಸ್ಲೈಡರ್, ಇಮೇಜ್‌ಕಾಂಬೋಬಾಕ್ಸ್) ಅಥವಾ ಎಂಎಸ್‌ಸಿಒಎಂಸಿಟಿ ೨ (ಅನಿಮೇಷನ್, ಅಪ್‌ಡೌನ್, ಮಂಥ್‌ಟಿವಿಐಎಲ್‌ಸಿ ಎಫ್‌ಐಎಲ್‌ಸಿ) ಸಾಮಾನ್ಯ ನಿಯಂತ್ರಣಗಳನ್ನು ಬೆಂಬಲಿಸುವುದಿಲ್ಲ. ಈ ಸಾಮಾನ್ಯ ನಿಯಂತ್ರಣಗಳನ್ನು ಅವಲಂಬಿಸಿರುವ ೬೪-ಬಿಟ್ ವಿಬಿಎ ಕೋಡ್‌ಗೆ ಪೋರ್ಟ್ ಮಾಡಲಾದ ೩೨-ಬಿಟ್ ಕೋಡ್ ಕಾರ್ಯನಿರ್ವಹಿಸುವುದಿಲ್ಲ. ಇದು ೩೨-ಬಿಟ್ ಆವೃತ್ತಿ ಆಫೀಸ್ ೨೦೧೦ ರ ಮೇಲೆ ಪರಿಣಾಮ ಬೀರುವುದಿಲ್ಲ.[] ಮೈಕ್ರೋಸಾಫ್ಟ್ ಎಂಎಸ್‌ಸಿಒಎಂಸಿಟಿ ನ ೬೪-ಬಿಟ್ ಆವೃತ್ತಿಯನ್ನು ಜುಲೈ ೨೭, ೨೦೧೭ ರಂದು ಆಫೀಸ್ ೨೦೧೬ ಗೆ ಅಪ್‌ಡೇಟ್ ಮಾಡುವುದರೊಂದಿಗೆ ಬಿಡುಗಡೆ ಮಾಡಿತು.[]

ಸಹ ನೋಡಿ

[ಬದಲಾಯಿಸಿ]

ಮೈಕ್ರೋಸಾಫ್ಟ್ ವಿಷುಯಲ್ ಸ್ಟುಡಿಯೋ

ಉಲ್ಲೇಖಗಳು

[ಬದಲಾಯಿಸಿ]
  1. "ACC: Visual/Access Basic Is Both a Compiler and an Interpreter". Microsoft. 2012. Archived from the original on 2012-10-21.
  2. "How to set up and use the RTD function in Excel". msdn.microsoft.com.
  3. "Visual Studio for Applications". Archived from the original on 2007-12-17.
  4. "Introducing Visual Studio for Applications". msdn.microsoft.com.
  5. "Script Happens .NET". msdn.microsoft.com.
  6. "Microsoft Takes Wraps Off VSA Development Technology". Archived from the original on 2007-12-17.
  7. "VSA scripting in .NET". Archived from the original on 2007-02-11.
  8. "Compatibility Between the 32-bit and 64-bit Versions of Office 2010". msdn.microsoft.com.
  9. "Release notes for Monthly Channel releases in 2017". learn.microsoft.com. Retrieved 2022-11-13.