ವಿಷಯಕ್ಕೆ ಹೋಗು

ಸಗಟು ವ್ಯಾಪಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಗಟು ವ್ಯಾಪಾರ ಎಂದರೆ ಸರಕುಗಳು ಅಥವಾ ಮಾಲುಗಳನ್ನು ಚಿಲ್ಲರೆ ವ್ಯಾಪಾರಿಗಳಿಗೆ; ಕೈಗಾರಿಕಾ, ವಾಣಿಜ್ಯ, ಸಾಂಸ್ಥಿಕ, ಅಥವಾ ಇತರ ವೃತ್ತಿಪರ ವ್ಯವಹಾರದ ಬಳಕೆದಾರರಿಗೆ; ಅಥವಾ ಇತರ ಸಗಟು ವ್ಯಾಪಾರಿಗಳಿಗೆ ಮತ್ತು ಸಂಬಂಧಿತ ಅಧೀನ ಸೇವೆಗಳಿಗೆ ಮಾರಾಟ ಮಾಡುವುದು.[] ಸಾಮಾನ್ಯವಾಗಿ ಹೇಳುವುದಾದರೆ, ಇದು ಸಾಮಾನ್ಯ ಗ್ರಾಹಕನನ್ನು ಹೊರತುಪಡಿಸಿ ಇತರ ಯಾರಿಗಾದರೂ ಸರಕುಗಳನ್ನು ಮಾರಾಟ ಮಾಡುವುದು.

ಸಂಯುಕ್ತ ರಾಷ್ಟ್ರ ಅಂಕಿಅಂಶ ವಿಭಾಗದ ಪ್ರಕಾರ, ಸಗಟು ವ್ಯಾಪಾರವೆಂದರೆ ಹೊಸ ಹಾಗೂ ಬಳಸಿದ ಸರಕುಗಳನ್ನು ಚಿಲ್ಲರೆ ವ್ಯಾಪಾರಿಗಳು, ಕೈಗಾರಿಕಾ, ವಾಣಿಜ್ಯ, ಸಾಂಸ್ಥಿಕ ಅಥವಾ ವೃತ್ತಿಪರ ಬಳಕೆದಾರರಿಗೆ, ಅಥವಾ ಇತರ ಸಗಟು ವ್ಯಾಪಾರಗಳಿಗೆ ಮರುಮಾರಾಟ (ರೂಪಾಂತರವಿಲ್ಲದೇ ಮಾರಾಟ) ಮಾಡುವುದು, ಅಥವಾ ಅಂತಹ ವ್ಯಕ್ತಿಗಳು ಅಥವಾ ಕಂಪನಿಗಳಿಗೆ ಮಾಲುಗಳನ್ನು ಖರೀದಿಸುವಲ್ಲಿ, ಅಥವಾ ಮಾಲುಗಳನ್ನು ಮಾರುವುದರಲ್ಲಿ ಮಧ್ಯವರ್ತಿ ಅಥವಾ ದಳ್ಳಾಳಿಯಾಗಿ ಕಾರ್ಯನಿರ್ವಹಿಸುವುದನ್ನು ಒಳಗೊಳ್ಳುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. "WTO – accession : Protocols of accession for new members since 1995, including commitments in goods and services". www.wto.org. Archived from the original on 4 March 2018. Retrieved 8 May 2018.