ಹುಟ್ಟುವಳಿ
ಅರ್ಥಶಾಸ್ತ್ರದಲ್ಲಿ ಹುಟ್ಟುವಳಿ ಎಂದರೆ ಒಂದು ಸಂಸ್ಥೆ, ಉದ್ದಿಮೆ, ಅಥವಾ ದೇಶವು ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ ಉತ್ಪಾದಿಸಿದ ಸರಕುಗಳು ಅಥವಾ ಸೇವೆಗಳ ಪ್ರಮಾಣ.[೧] ಇದನ್ನು ವ್ಯಯಮಾಡಬಹುದು ಅಥವಾ ಮುಂದಿನ ಉತ್ಪಾದನೆಗಾಗಿ ಬಳಸಬಹುದು. ಬೃಹದರ್ಥಶಾಸ್ತ್ರದ ಕ್ಷೇತ್ರದಲ್ಲಿ ರಾಷ್ಟ್ರೀಯ ಹುಟ್ಟುವಳಿಯ ಪರಿಕಲ್ಪನೆಯು ಬಹಳ ಅತ್ಯಗತ್ಯವಾಗಿದೆ. ಒಂದು ದೇಶವನ್ನು ಶ್ರೀಮಂತವಾಗಿಸುವುದು ರಾಷ್ಟ್ರೀಯ ಹುಟ್ಟುವಳಿ ಹೊರತು ದೊಡ್ಡ ಪ್ರಮಾಣದ ಹಣವಲ್ಲ.
ಬೇರೆಡೆ ಮಾರಾಟಕ್ಕೆ ಅಥವಾ ಬಳಕೆಗೆ ಲಭ್ಯವಿರುವ ಉತ್ಪನ್ನ ಅಥವಾ ಸೇವೆಯನ್ನು ಉತ್ಪಾದಿಸಲು ಹೂಡುವಳಿಗಳನ್ನು ಬಳಸಿದ ಒಂದು ಆರ್ಥಿಕ ಪ್ರಕ್ರಿಯಯ ಪರಿಣಾಮವೇ ಹುಟ್ಟುವಳಿ. ಉತ್ಪಾದನೆಯ ವಿಷಯದಲ್ಲಿ, ನಿವ್ವಳ ಹುಟ್ಟುವಳಿ ಎಂದರೆ ಉತ್ಪಾದನಾ ಪ್ರಕ್ರಿಯೆಯಿಂದ ಹುಟ್ಟುವಳಿಯಾದರೆ ಸೊನ್ನೆಗಿಂತ ಹೆಚ್ಚಾದ ಪ್ರಮಾಣವಾಗಿರುತ್ತದೆ ಮತ್ತು ಉತ್ಪಾದನಾ ಪ್ರಕ್ರಿಯೆಗೆ ಹೂಡೂವಳಿಯಾದರೆ ಸೊನ್ನೆಗಿಂತ ಕಡಿಮೆ ಪ್ರಮಾಣವಾಗಿರುತ್ತದೆ. ಹುಟ್ಟುವಳಿಯನ್ನು ಅಳೆಯುವ ಹಲವಾರು ವಿಭಿನ್ನ ವಿಧಾನಗಳನ್ನು ಬಳಸಲಾಗುತ್ತದೆ.
ಜಿಡಿಪಿಯನ್ನು (ಒಟ್ಟು ದೇಶೀಯ ಉತ್ಪನ್ನ) ಗಣನೆ ಮಾಡುವುದು ರಾಷ್ಟ್ರೀಯ ಹುಟ್ಟುವಳಿಯ ಅತ್ಯಂತ ಜನಪ್ರಿಯ ಪರಿಮಾಣವಾಗಿದೆ. ಈ ವಿಧಾನವನ್ನು ಬಳಸುವಲ್ಲಿನ ಮುಖ್ಯ ಸವಾಲೆಂದರೆ ಅದೇ ಉತ್ಪನ್ನವನ್ನು ಒಂದಕ್ಕಿಂತ ಹೆಚ್ಚು ಸಲ ಎಣಿಸುವುದನ್ನು ಹೇಗೆ ತಪ್ಪಿಸುವುದು ಎಂದು. ತಾರ್ಕಿಕವಾಗಿ, ಒಟ್ಟು ಹುಟ್ಟುವಳಿಯು ದೇಶದಲ್ಲಿ ಉತ್ಪಾದಿಸಲಾದ ಎಲ್ಲ ಸರಕುಗಳು ಮತ್ತು ಸೇವೆಗಳ ಮೌಲ್ಯಕ್ಕೆ ಸಮವಾಗಿರಬೇಕು, ಆದರೆ ಪ್ರತಿಯೊಂದು ಸರಕು ಮತ್ತು ಸೇವೆಯನ್ನು ಎಣಿಸುವಲ್ಲಿ, ವಾಸ್ತವವಾಗಿ ಒಬ್ಬರು ಅಂತಿಮವಾಗಿ ಅದೇ ಹುಟ್ಟುವಳಿಯನ್ನು ಉತ್ಪಾದನೆಯ ಬಹು ಹಂತಗಳಲ್ಲಿ ಮತ್ತೆ ಮತ್ತೆ ಎಣಿಸುತ್ತಾರೆ. ಕೇವಲ ಮೌಲ್ಯ ಸಂವರ್ಧನೆಯನ್ನು ಪರಿಗಣಿಸುವುದು ಅತಿ ಎಣಿಕೆಯ ಸಮಸ್ಯೆಯನ್ನು ನಿಭಾಯಿಸುವ ಒಂದು ರೀತಿಯಾಗಿದೆ. ಮೌಲ್ಯ ಸಂವರ್ಧನೆ ಎಂದರೆ ಉತ್ಪಾದನೆಯ ಪ್ರತಿ ಹಂತದಲ್ಲಿ ಸೃಷ್ಟಿಯಾದ ಹೊಸ ಹೊಟ್ಟುವಳಿ.
ಇದರ ಉದಾಹರಣೆಯೆಂದರೆ, ಉಡುಪು ಸಾಮಗ್ರಿಯನ್ನು ೫೦೦ ರೂಪಾಯಿಗಳಿಗೆ ಖರೀದಿಸಿದ ಉಡುಪು ತಯಾರಕನನ್ನು ತೆಗೆದುಕೊಳ್ಳಬಹುದು. ನಂತರ ಇವನು ಅದನ್ನು ಹೊಲೆದು ಉಡುಪಿನ ಮೇಲೆ ಅಂತಿಮ ರೂಪಗಳನ್ನು ಕೊಟ್ಟನು. ನಂತರ ಅವನು ಆ ಉಡುಪನ್ನು ೮೦೦ ರೂಪಾಯಿಗಳಿಗೆ (ಉಡುಪನ್ನು ಸಿದ್ಧಗೊಳಿಸುವಲ್ಲಿ ಅವನ ವೆಚ್ಚ ೧೫೦ ರೂಪಾಯಿಗಳಾಯಿತು) ಮಾರಾಟ ಮಾಡಿದನು. ಆಗ ಅವನು ೮೦೦ ರೂಪಾಯಿ ಮೌಲ್ಯದ ಹುಟ್ಟುವಳಿಯನ್ನು ಉತ್ಪಾದಿಸಿದನು ಎನ್ನುವ ಬದಲು ಅವನು ಉಡುಪಿಗೆ ೧೫೦ ರೂಪಾಯಿ ಮೌಲ್ಯದ ಹುಟ್ಟುವಳಿಯನ್ನು ಸೇರಿಸಿದನು ಎಂದು ನಾವು ಹೇಳಬಹುದು. ಹಾಗಾಗಿ ಮೌಲ್ಯ ಸಂವರ್ಧನೆಯು ಒಂದು ಸರಕು ಅಥವಾ ಸೇವೆಯ ಮಾರಾಟ ಬೆಲೆಯಿಂದ ಅದನ್ನು ಉತ್ಪಾದಿಸಲು ಬಳಸಲಾದ ಎಲ್ಲ ಅಕಾರ್ಮಿಕ ವೆಚ್ಚಗಳನ್ನು ಕಳೆದಾಗ ಬರುವ ಬೆಲೆಗೆ ಸಮವಾಗಿರುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ Alan Deardorff. output, Deardorff asspoo's Glossary of International Economics.