ಅಮೆಷಾ ಸ್ಪೆಂಟಾ
ಅಮೆಷಾ ಸ್ಪೆಂಟಾ ಜರತುಷ್ಟ್ರನ ಮತಧರ್ಮದಲ್ಲಿನ ಆರುಮಂದಿ ಪ್ರಧಾನ ದೇವದೂತರಿಗೆ ಈ ಹೆಸರಿದೆ.
ಹೋಲಿಕೆ
[ಬದಲಾಯಿಸಿ]ಅಮೆಷಾ ಎಂದರೆ ನಿತ್ಯರು, ಅಮರರು ಎಂದೂ ಸ್ಪೆಂಟಾ ಎಂದರೆ ಉಪಕಾರ ಮನೋವೃತ್ತಿಯುಳ್ಳವರು, ಹಿತಕರರು ಎಂದೂ ಅರ್ಥ"[೧] ಯಹೂದ್ಯ, ಕ್ರೈಸ್ತ ಇತ್ಯಾದಿ ಮತಗಳಲ್ಲಿನ ದೇವದೂತರು, ಹಿಂದೂಧರ್ಮದಲ್ಲಿನ ಆದಿತ್ಯರು, ನಿತ್ಯಸೂರಿಗಳು ಇವರುಗಳಿಗೆ ಅಮೆಷಾ ಸ್ಪೆಂಟಾರನ್ನು ಹೋಲಿಸಬಹುದು.
ದೇವದೂತರ ವಿವರ
[ಬದಲಾಯಿಸಿ]ಇವರು ಸದಾ ಪರಬ್ರಹ್ಮಸ್ವರೂಪನಾದ ಅಹುರಮಸ್ದನ ಸೇವೆಯಲ್ಲಿ ನಿರತರು. ಇವರ ವಿವರ ಹೀಗಿದೆ : (1) ವೊಹುಮನೊ-ಸಮ್ಯಗ್ ಚಾರಿತ್ರ್ಯ ರೂಪ; (2) ಅಷೆಮ್ ವಹಿಷ್ಟೆಮ್-ಸತ್ಯಂ ಶಿವಂ ಶುಭಂಗಳ ಮೂರ್ತಸ್ವರೂಪ; (3) ಕ್ಷಹತ್ರೆಮ್ ವೈರೀಮ್-ದುಷ್ಟನಿಗ್ರಹ, ಶಿಷ್ಟಪರಿಪಾಲನಸ್ವರೂಪ; (4) ಸ್ಪೆಂಟಾ ಆರ್ಮೈತಿ-ಸ್ತ್ರೀದೇವತೆ, ಅಹುರಮಸ್ದನ ಪುತ್ರಿ, ಭುವಿಯ ಮೇಲೆ ನೆಲೆಸಿದ ದೈವೀಶಕ್ತಿಯ ಪ್ರತೀಕ ; (5) ಹೌರ್ವತಾತ್-ಪರಿಪೂರ್ಣತೆಯ ಸ್ವರೂಪ ; (6) ಅಮೆರೆತಾತ್-ಅಮೃತತ್ತ್ವ ಸ್ವರೂಪ. ಇವರೊಂದಿಗೆ ಸ್ರೌಷಾ ಎಂಬ ದೇವತೆಯೂ ಸೇರಿ ಅಹುರಮಸ್ದನ ಸಪ್ತಪರಿಚಾರಕಮಂಡಲಿಯಾಗುತ್ತದೆ.
ಕರ್ತವ್ಯಗಳು
[ಬದಲಾಯಿಸಿ]ಇವರ ಮುಖ್ಯ ಕರ್ತವ್ಯವೆಂದರೆ ಭಗವಂತನ ಸೃಷ್ಟಿಯ ಮೇಲ್ವಿಚಾರಣೆ ನೋಡಿಕೊಳ್ಳುವುದು, ಸಂರಕ್ಷಣೆ ಮಾಡುವುದು ಮತ್ತು ಭಕ್ತರಿಗೆ ಅಭಯಪ್ರದಾನ ಮಾಡುವುದು. ಇವರು ಸದಾಕಾಲದಲ್ಲೂ ಪಾಪದೇವತೆಯನ್ನು ಪ್ರತಿಭಟಿಸುತ್ತಿರುತ್ತಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ Boyce, Mary (1983), "Aməša Spənta", Encyclopaedia Iranica, vol. 1, New York: Routledge & Kegan Paul, pp. 933–936.