ಪರಾಠಾ
ಪರಾಠಾ ಭಾರತೀಯ ಉಪಖಂಡದಲ್ಲಿ ಹುಟ್ಟಿಕೊಂಡ ಒಂದು ಚಪಾತಿಯಂಥ ಖಾದ್ಯ.[೧] ಇದು ಭಾರತ , ಶ್ರೀಲಂಕಾ , ಪಾಕಿಸ್ತಾನ , ನೇಪಾಳ ಮತ್ತು ಬಾಂಗ್ಲಾದೇಶದ ಪ್ರದೇಶಗಳಲ್ಲಿ ಪ್ರಚಲಿತವಾಗಿದೆ . ಪರಾಠಾ ಪದವು ಪರಟ್ ಮತ್ತು ಆಟಾ ಶಬ್ದಗಳ ಸಮ್ಮಿಲನವಾಗಿದೆ ಮತ್ತು ಅಕ್ಷರಶಃ ಇದರರ್ಥ ಬೇಯಿಸಿದ ಕಣಕದ ಪದರಗಳು.[೨]
ಇತಿಹಾಸ
[ಬದಲಾಯಿಸಿ]ಪರಾಠಾ ಎಂಬ ಹಿಂದೂಸ್ಥಾನಿ ಪದವು ಸಂಸ್ಕೃತದಿಂದ ಬಂದಿದೆ . ೧೩ ನೇ ಶತಮಾನದಲ್ಲಿ ಇಂದಿನ ಕರ್ನಾಟಕವನ್ನು ಆಳಿದ ಚಾಲುಕ್ಯ ರಾಜ ೩ನೇ ಸೋಮೇಶ್ವರನ ಕೃತಿಯಾದ ಮನಸೊಲ್ಲಾಸದಲ್ಲಿ ವಿವಿಧ ರೀತಿಯ ಗೋಧಿಯಿಂದ ತಯಾರಿಸಿದ ಖಾದ್ಯಗಳ ಬಗ್ಗೆ ಉಲ್ಲೇಖಿಸಲಾಗಿದೆ .[೩] ಬ್ಯಾನರ್ಜಿ ರವರ (೨೦೧೦) ಪ್ರಕಾರ , ಪರಾಠಾಗಳು ಪಂಜಾಬಿ ಮತ್ತು ಉತ್ತರ ಭಾರತದ ಅಡುಗೆಗೆ ಸಂಬಂಧಿಸಿವೆ. ಪರಾಠಾಗಳನ್ನು ವಿವಿಧ ರೀತಿಯ ಸ್ಟಫಿಂಗ್‌ಗಳೊಂದಿಗೆ ಪಂಜಾಬ್ ನಲ್ಲಿ ತಯಾರಿಸಲಾಗುತ್ತದೆ . ಬ್ಯಾನರ್ಜಿ ಹೇಳುವಂತೆ , ಮೊಘಲರು ಸಹ ಪರಾಠಾಗಳ ಬಗ್ಗೆ ಒಲವು ಹೊಂದಿದ್ದರು , ಇದು ಡಾಕೈ ಪರಾಠಾ (ಬಹುಪದರದ ಪರಾಠಾ)ವನ್ನು ತಯಾರಿಸಲು ಉತ್ತೇಜನ ನೀಡಿತು . ಡಾಕೈ ಪರಾಠಾ ಎಂಬ ಹೆಸರು ಬಾಂಗ್ಲಾದೇಶದ ಡಾಕಾದಿಂದ ಸಿಕ್ಕಿದೆ .
ಸರಳ ಮತ್ತು ಸ್ಟಫ್ಡ್ ಪ್ರಭೇದಗಳು
[ಬದಲಾಯಿಸಿ]ಭಾರತೀಯ ಉಪಖಂಡದ ಭಾಗದಲ್ಲಿ ಪರಾಠಾಗಳು ಅತ್ಯಂತ ಜನಪ್ರಿಯವಾದ ಫ್ಲಾಟ್ ಬ್ರೆಡ್‌ಗಳಲ್ಲಿ ಒಂದಾಗಿದೆ . ತವಾ ಮೇಲೆ ಸಂಪೂರ್ಣವಾಗಿ ಗೋಧಿ ಹಿಟ್ಟಿನಿಂದ ತಯಾರಿಸಿದ ಉಂಡೆಗಳನ್ನು ಲಟ್ಟಿಸಿ ಬೇಯಿಸುವ ಮೂಲಕ ತಯಾರಿಸಲಾಗುತ್ತದೆ . ಪರಾಠಾಗಳು ಚಪಾತಿ / ರೋಟಿಗಳಿಂತ ದಪ್ಪವಾಗಿರುತ್ತದೆ . ಇದಕಕೆ ಕಾರಣ ಪರಾಠಾ ವನ್ನು ತಯಾರಿಸುವಾಗ ಹೆಚ್ಚಿನ ಪ್ರಮಾಣದಲ್ಲಿ ತುಪ್ಪ ಮತ್ತು ಎಣ್ಣೆಯನ್ನು ಸವರುತ್ತಾರೆ .ಹಾಗೂ ಕೆಲವೊಮ್ಮೆ ಕ್ಯಾರೆಟ್ , ಬಟಾಟೆ ಯಂತಹ ತರಕಾರಿಗಳನ್ನು ಉಪಯೋಗಿಸಿ ಸ್ಟಫಿಂಗ್ ಮಾಡಲಾಗುತ್ತದೆ .
ಪರಾಠಾಗಳಿಗೆ ಸಾಮಾನ್ಯವಾಗಿ ಹಿಸುಕಿದ , ಮಸಾಲೆಯುಕ್ತ ಆಲೂಗಡ್ಡೆ , ದಾಲ್ (ಮಸೂರ) , ಎಲೆ ತರಕಾರಿಗಳು, ಮೂಲಂಗಿಗಳು, ಹೂಕೋಸು ಅಥವಾ ಪನೀರ್ ಮುಂತಾದ ಅನೇಕ ಪರ್ಯಾಯಗಳನ್ನು ಸ್ಟಫಿಂಗ್ ಗಾಗಿ ಉಪಯೋಗಿಸಬಹುದು .[೪] ಪರಾಠಾಗಳನ್ನು ಉಪಾಹಾರ ಭಕ್ಷ್ಯವಾಗಿ ಅಥವಾ ಚಹಾ-ಸಮಯದಲ್ಲಿ ಲಘು ಆಹಾರವಾಗಿ ಸೇವಿಸಬಹುದು.
ಸೇವನೆ
[ಬದಲಾಯಿಸಿ]ಪರಾಠಾ ಭಾರತೀಯ ಉಪಖಂಡದ ಸಾಂಪ್ರದಾಯಿಕ ಉಪಹಾರದ ಪ್ರಮುಖ ಭಾಗವಾಗಿದೆ. ಸಾಂಪ್ರದಾಯಿಕವಾಗಿ , ಇದನ್ನು ತುಪ್ಪ ಬಳಸಿ ತಯಾರಿಸಲಾಗುತ್ತದೆ ಆದರೆ ಎಣ್ಣೆಯನ್ನು ಸಹ ಬಳಸಲಾಗುತ್ತದೆ. ಸಾಮಾನ್ಯವಾಗಿ ಪರಾಠಾವನ್ನು ಬೆಣ್ಣೆಯೊಂದಿಗೆ ತಿನ್ನುತ್ತಾರೆ. ಮೊಸರು, ಹುರಿದ ಮೊಟ್ಟೆ, ಆಮ್ಲೆಟ್, ಮಟನ್ ಖೀಮಾ ಮಟನ್, ನಿಹಾರಿ , ಜೀರಾ ಆಲೂ , ದಾಲ್ ಅಥವಾ ರೈತದ ಜೊತೆಗೆ ಬೆಳಗಿನ ಉಪಾಹಾರದ ಭಾಗವಾಗಿ ಸೇವಿಸುತ್ತಾರೆ .
ವಿಧಗಳು
[ಬದಲಾಯಿಸಿ]ಅಜ್ವೈನ್ ಪರಾಠಾ , ಆಲೂ ಪರಾಠಾ , ಆಲೂ ಚೀಸ್ ಪರಾಠಾ , ಅಂಡಾ ಪರಾಠಾ , ಬೂಂದಿ ಪರಾಠಾ , ಚನಾ ಪರಾಠಾ , ಚನಾ ದಾಲ್ ಪರಾಠಾ , ಚಿಕನ್ ಪರಾಠಾ,[೫] ದಾಲ್ ಪರಾಠಾ ,ಗೋಬಿ ಪರಾಠಾ , ಜೈಪುರಿ ಪರಾಠಾ , ಕೇರಳ ಪರಾಠಾ , ಲಚ್ಚಾ ಪರಾಠಾ ,ಗಾಜರ್ ಪರಾಠಾ , ಧನಿಯಾ ಪರಾಠಾ , ಡಾಕೈ ಪರಾಠಾ ,ಚಿಲ್ಲೀ ಪರಾಠಾ ,ಮಟರ್ ಪರಾಠಾ , ಮೀಠಾ ಪರಾಠಾ , ಮೇಥಿ ಪರಾಠಾ ,[೬] ಮಟನ್ ಪರಾಠಾ ,ಮಿಕ್ಸ್ ಪರಾಠಾ , ಪಾಲಕ್ ಪರಾಠಾ , ಪನೀರ್ ಪರಾಠಾ , ಪ್ಲೈನ್ ಪರಾಠಾ , ಪುದೀನಾ ಪರಾಠಾ ,ಪ್ಯಾಸ್ ಕಾ ಪರಾಠಾ ,ತಂದೂರಿ ಪರಾಠಾ , ಟೊಮೇಟೊ ಪರಾಠಾ ,[೭]ಖೀಮಾ ಪರಾಠಾ ,ಮಕ್ಕಾ ಪರಾಠಾ ,ಲೌಕಿ ಪರಾಠಾ .
ಪರಾಠಾಕ್ಕಿರುವ ಇತರ ಹೆಸರುಗಳು
[ಬದಲಾಯಿಸಿ]ಪಾರಂಥ , ಪರೌನ್ಥಾ, ಪ್ರೋನ್ಥಾ, ಪಾರೊಂಟೆ(ಪಂಜಾಬಿಯಲ್ಲಿ)[೮], ಪೊರೋಟಾ(ಬಂಗಾಳಿ ಮತ್ತು ಮಲೆಯಾಳಂ), ಪಲಾಟಾ (ಬರ್ಮಾದಲ್ಲಿ), ಪೊರೋಥಾ(ಅಸ್ಸಾಮಿಯಲ್ಲಿ)[೯], ಫೊರೋತಾ (ಸಿಲೇಟಿ ಭಾಷೆಯಲ್ಲಿ) ಮತ್ತು ಫರಾತಾ (ಮೌರಿಟಿಯಸ್ ನಲ್ಲಿ, ಶ್ರೀಲಂಕಾ ಮತ್ತು ಮಾಲ್ಡೀವ್ಸ್).[೧೦]
ರೆಡಿಮೇಡ್ ಪರಾಠಾಗಳು
[ಬದಲಾಯಿಸಿ]ಪರಾಠಾಗಳನ್ನು ತಯಾರಿಸುವುದು ಕಷ್ಟಕರವಾಗಿದ್ದರಿಂದ ಇದೀಗ ಮಾರುಕಟ್ಟೆಯಲ್ಲಿ ರೆಡಿಮೇಡ್ ಪರಾಠಾಗಳೂ ಲಭ್ಯವಿದೆ .[೧೧] [೧೨]
ಉಲ್ಲೇಖಗಳು
[ಬದಲಾಯಿಸಿ]- ↑ "parantha Photos | Images of parantha - Times of India". The Times of India. Retrieved 5 January 2020.
- ↑ "Paratha, Pāraṭhā, Parathā: 3 definitions". www.wisdomlib.org. 15 July 2018. Retrieved 5 January 2020.
- ↑ "Parathas of India: 5 Types Of Parathas From Across The Country You Must Try". NDTV Food. Retrieved 5 January 2020.
- ↑ "ಆರ್ಕೈವ್ ನಕಲು". Archived from the original on 2019-12-27. Retrieved 2020-01-05.
- ↑ "Chicken Paratha or Chicken Kheema Paratha". YourHungerStop. 1 April 2015. Archived from the original on 10 ಜುಲೈ 2018. Retrieved 5 January 2020.
- ↑ Amit, Dassana (20 January 2013). "Methi Paratha". Dassana Amit Recipes. Retrieved 5 January 2020.
- ↑ "Onion Tomato Parathas". The Steaming Pot. 16 July 2011. Retrieved 5 January 2020.
- ↑ "Punjabi aloo paratha recipe | stuffed aloo paratha | aloo ka paratha |". www.tarladalal.com. Retrieved 5 January 2020.
- ↑ "TBI Food Secrets: 18 Traditional Indian Breads That You Must Absolutely Try Out". The Better India. 26 October 2016. Retrieved 5 January 2020.
- ↑ "How to make Sri Lankan egg roti/paratha". Island smile. 12 August 2019. Retrieved 5 January 2020.
- ↑ "Readymade Lachha Paratha". indiamart.com (in ಇಂಗ್ಲಿಷ್). Retrieved 5 January 2020.
- ↑ "Ready-to-eat food: These food packs will be a great dinner option - Times of India". The Times of India. Retrieved 5 January 2020.