ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ
ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ(ಈಗಿನ ನಾಗಠಾಣ ವಿಧಾನಸಭಾ ಕ್ಷೇತ್ರ)ವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ನಾಗಠಾಣ ಮತಕ್ಷೇತ್ರ(2018)ದಲ್ಲಿ 1,07,407 ಪುರುಷರು, 99,773 ಮಹಿಳೆಯರು ಸೇರಿ ಒಟ್ಟು 2,07,180 ಮತದಾರರಿದ್ದಾರೆ.
ಕ್ಷೇತ್ರದ ಇತಿಹಾಸ
[ಬದಲಾಯಿಸಿ]ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿ ಗುರುತಿಸಿಕೊಂಡ ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರವು, ವಿಜಯಪುರ ಜಿಲ್ಲೆಯ ಒಂದು ಪ್ರಮುಖ ವಿಧಾನಸಭಾ ಕ್ಷೇತ್ರ. ವಿಜಯಪುರ-ಇಂಡಿ ರಸ್ತೆಯಲ್ಲಿ ಈ ಊರು ನೆಲೆಸಿದೆ. ಮಹಾರಾಷ್ಟ್ರ-ಕರ್ನಾಟಕ ಗಡಿಯಲ್ಲಿರುವುದರಿಂದ ಈ ಊರಿನ ಮೇಲೆ ಮರಾಠಿ ಪ್ರಭಾವ ಸಾಕಷ್ಟಿದೆ. ರಾಜ್ಯದಲ್ಲೇ ಹೆಚ್ಚು ವಿಸ್ತಾರವುಳ್ಳ ಎರಡನೇ ವಿಧಾನಸಭಾ ಕ್ಷೇತ್ರ ಎಂಬ ಹೆಗ್ಗಳಿಕೆ ಹೊಂದಿರುವ ನಾಗಠಾಣ ವಿಧಾನಸಭಾ ಕ್ಷೇತ್ರದ್ದು. ಮಾಜಿ ಶಾಸಕ ಆರ್.ಕೆ.ರಾಠೋಡ ಪಂಚಾಯಿತಿ ರಾಜಕಾರಣವನ್ನು ಮೆಟ್ಟಿಲಾಗಿಸಿಕೊಂಡು ವಿಧಾನಸಭೆಗೆ ಆಯ್ಕೆಯಾಗಿದ್ದರು. ಹೊರ್ತಿ ಜಿಪಂ ಕ್ಷೇತ್ರದ ಸದಸ್ಯರಾಗಿ ಆಯ್ಕೆಯಾಗಿದ್ದಲ್ಲದೆ ಅಧ್ಯಕ್ಷ ಸ್ಥಾನವನ್ನೂ ಅಲಂಕರಿಸಿದ್ದರು. 2004ರಲ್ಲಿ ಜನತಾದಳದಿಂದ ಬಳ್ಳೊಳ್ಳಿ ಮೀಸಲು ಕ್ಷೇತ್ರದ (ಈಗಿನ ನಾಗಠಾಣ) ಶಾಸಕರಾಗಿ ಆಯ್ಕೆಯಾಗಿದ್ದರು. 2004ರ ಮುಂಚೆ ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರವಾಗಿತ್ತು.1962ರಲ್ಲಿ ಬರಡೋಲ ವಿಧಾನಸಭಾ ಕ್ಷೇತ್ರವೆಂದು ನಾಮಕರಣಗೊಂಡಿತ್ತು. ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾದ ಈ ಕ್ಷೇತ್ರವನ್ನು 2013 ರಲ್ಲಿ ಕಾಂಗ್ರೆಸ್ ನ ಪ್ರೊ.ರಾಜು ಆಲಗೂರು ಪ್ರತಿನಿಧಿಸಿದ್ದರು.
ಕ್ಷೇತ್ರದ ವಿಶೇಷತೆ
[ಬದಲಾಯಿಸಿ]- ರಾಜ್ಯದಲ್ಲೇ ಹೆಚ್ಚು ವಿಸ್ತಾರವುಳ್ಳ ಎರಡನೇ ವಿಧಾನಸಭಾ ಕ್ಷೇತ್ರ ಎಂಬ ಹೆಗ್ಗಳಿಕೆ ಹೊಂದಿರುವ ನಾಗಠಾಣ ವಿಧಾನಸಭಾ ಕ್ಷೇತ್ರದ್ದು.
- ವಿಜಯಪುರ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿ ಗುರುತಿಸಿಕೊಂಡ ನಾಗಠಾಣ ವಿಧಾನಸಭಾ ಕ್ಷೇತ್ರ.
- ರಾಜು ಆಲಗೂರುರವರು ಕರ್ನಾಟಕ ಸಾಬೂನು ಮತ್ತು ಮಾರ್ಜಕ ಮಂಡಳಿ ಅಧ್ಯಕ್ಷ ಹಾಗೂ ಸಂಸದೀಯ ಕಾರ್ಯದರ್ಶಿಗಳಾಗಿರುವುದು ಈ ಕ್ಷೇತ್ರದ ವಿಶೇಷತೆಗಳಲ್ಲಿ ಒಂದು.
- ಜೆಟ್ಟೆಪ್ಪ ಕಬಾಡಿಯವರು ಇದೆ ಕ್ಷೇತ್ರದಿಂದ 4 ಬಾರಿ ಆಯ್ಕೆಯಾಗಿದ್ದಾರೆ.
- ರಾಜು ಆಲಗೂರು, ಸಿದ್ಧಾರ್ಥ ಅರಕೇರಿ 2 ಬಾರಿ ಹಾಗೂ ರಮೇಶ ಜಿಗಜಿಣಗಿ 3 ಬಾರಿ ಆಯ್ಕೆಯಾಗಿದ್ದಾರೆ.
- ರಮೇಶ ಜಿಗಜಿಣಗಿಯವರು 1983ರಲ್ಲಿ ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಗೃಹ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅದರಂತೆ 1984 -85ರಲ್ಲಿ ಅಬಕಾರಿ ಖಾತೆ ರಾಜ್ಯ ಸಚಿವರಾಗಿ , 1996-98ರಲ್ಲಿ ಜೆ.ಎಚ್.ಪಟೇಲ್ ಸಂಪುಟದಲ್ಲಿ ಸಮಾಜ ಕಲ್ಯಾಣ ಮತ್ತು ಕಂದಾಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.
- ದೇವಾನಂದ ಚವ್ಹಾಣ, ಆರ್.ಕೆ.ರಾಠೋಡ ಮತ್ತು ಮನೋಹರ ಐನಾಪುರರವರು ಲಂಬಾಣಿ ಸಮುದಾಯಕ್ಕೆ ಸೇರಿದ ನಾಯಕರಾಗಿದ್ದಾರೆ.
ಜನಪ್ರತಿನಿಧಿಗಳ ವಿವರ
[ಬದಲಾಯಿಸಿ]ವರ್ಷ | ವಿಧಾನ ಸಭಾ ಕ್ಷೆತ್ರ | ವಿಜೇತ | ಪಕ್ಷ | ಮತಗಳು | ಉಪಾಂತ ವಿಜೇತ | ಪಕ್ಷ | ಮತಗಳು |
ನಾಗಠಾಣ ವಿಧಾನಸಭಾ ಕ್ಷೇತ್ರ | ಕರ್ನಾಟಕ ರಾಜ್ಯ | ||||||
2018 | ನಾಗಠಾಣ ವಿಧಾನಸಭಾ ಕ್ಷೇತ್ರ | ದೇವಾನಂದ ಚವ್ಹಾಣ | ಜೆ.ಡಿ.ಎಸ್. | 59709 | ವಿಠ್ಠಲ ಕಟಕದೊಂಡ | ಕಾಂಗ್ರೇಸ್ | 54108 |
2013 | ನಾಗಠಾಣ ವಿಧಾನಸಭಾ ಕ್ಷೇತ್ರ | ರಾಜು ಆಲಗೂರ | ಕಾಂಗ್ರೇಸ್ | 45570 | ದೇವಾನಂದ ಚವ್ಹಾಣ | ಜೆ.ಡಿ.ಎಸ್. | 44903 |
2008 | ನಾಗಠಾಣ ವಿಧಾನಸಭಾ ಕ್ಷೇತ್ರ | ವಿಠ್ಠಲ ಕಟಕದೊಂಡ | ಬಿ.ಜೆ.ಪಿ. | 40225 | ರಾಜು ಆಲಗೂರ | ಕಾಂಗ್ರೇಸ್ | 36018 |
ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ | ಕರ್ನಾಟಕ ರಾಜ್ಯ | ||||||
2004 | ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ | ಆರ್.ಕೆ.ರಾಠೋಡ | ಜೆ.ಡಿ.ಎಸ್. | 39915 | ರಾಜು ಆಲಗೂರ | ಕಾಂಗ್ರೇಸ್ | 28873 |
1999 | ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ | ರಾಜು ಆಲಗೂರ | ಕಾಂಗ್ರೇಸ್ | 27194 | ಆರ್.ಕೆ.ರಾಠೋಡ | ಜೆ.ಡಿ.ಎಸ್. | 24667 |
1994 | ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ | ರಮೇಶ್ ಜಿಗಜಿಣಗಿ | ಜೆ.ಡಿ | 29018 | ಫೂಲಸಿಂಗ್ ಚವ್ಹಾಣ | ಕಾಂಗ್ರೇಸ್ | 17591 |
1989 | ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ | ಮನೋಹರ ಐನಾಪುರ | ಕಾಂಗ್ರೇಸ್ | 27782 | ರಮೇಶ್ ಜಿಗಜಿಣಗಿ | ಜೆ.ಡಿ | 23357 |
1985 | ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ | ರಮೇಶ್ ಜಿಗಜಿಣಗಿ | ಜೆ.ಎನ್.ಪಿ | 32360 | ದಯಾನಂದ ಕೊಂಡಗೂಳಿ | ಕಾಂಗ್ರೇಸ್ | 21311 |
1983 | ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ | ರಮೇಶ್ ಜಿಗಜಿಣಗಿ | ಜೆ.ಎನ್.ಪಿ | 24603 | ಸಿದ್ಧಾರ್ಥ ಅರಕೇರಿ | ಕಾಂಗ್ರೇಸ್ | 11876 |
1978 | ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ | ಸಿದ್ಧಾರ್ಥ ಅರಕೇರಿ | ಜೆ.ಎನ್.ಪಿ | 23023 | ಚಂದ್ರಶೇಖರ ಹೊಸಮನಿ | ಕಾಂಗ್ರೇಸ್ | 14204 |
ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ | ಮೈಸೂರು ರಾಜ್ಯ | ||||||
1972 | ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ | ಜೆಟ್ಟೆಪ್ಪ ಕಬಾಡಿ | ಎನ್.ಸಿ.ಓ | 15537 | ಬಾಬುರಾವ್ ಹುಜರೆ | ಕಾಂಗ್ರೇಸ್ | 11204 |
1967 | ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ | ಸಿದ್ಧಾರ್ಥ ಅರಕೇರಿ | ಆರ್.ಪಿ.ಐ | 14653 | ಜೆಟ್ಟೆಪ್ಪ ಕಬಾಡಿ | ಕಾಂಗ್ರೇಸ್ | 10738 |
1962 | ಬರಡೋಲ ವಿಧಾನಸಭಾ ಕ್ಷೇತ್ರ | ಜೆಟ್ಟೆಪ್ಪ ಕಬಾಡಿ | ಕಾಂಗ್ರೇಸ್ | 9792 | ಶಿವಪ್ಪ ಕಾಂಬ್ಳೆ | ಆರ್.ಈ.ಪಿ | 2623 |
1957 | ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ | ಜೆಟ್ಟೆಪ್ಪ ಕಬಾಡಿ | ಕಾಂಗ್ರೇಸ್ | 17402 | ಲಚ್ಚಪ್ಪ ಸಂಧಿಮನಿ | ಸ್ವತಂತ್ರ | 16390 |
ಇಂಡಿ ವಿಧಾನಸಭಾ ಕ್ಷೇತ್ರ-೧ | ಬಾಂಬೆ ರಾಜ್ಯ | ||||||
1951 | ಇಂಡಿ-ಸಿಂದಗಿ ವಿಧಾನಸಭಾ ಕ್ಷೇತ್ರ | ಜೆಟ್ಟೆಪ್ಪ ಕಬಾಡಿ | ಕಾಂಗ್ರೇಸ್ | 30322 | ಬಾಬುರಾವ್ ಹುಜರೆ | ಎಸ್.ಎಫ.ಸಿ | 5457 |