ರಾಜಯೋಗ
ರಾಜಯೋಗ -ಸಂಕ್ಷಿಪ್ತ ಪರಿಚಯ
[ಬದಲಾಯಿಸಿ]ರಾಜಯೋಗ .1 ಹಿಂದೂಧರ್ಮದಲ್ಲಿ ಪ್ರತಿಪಾದಿಸಲ್ಪಟ್ಟ ನಾಲ್ಕು ಯೋಗಗಳಲ್ಲಿ ಒಂದು.ಸರಳವಾಗಿ ಹೇಳುವುದಾದರೆ ಮನಸ್ಸಿನ ಏಕಾಗ್ರತೆಯ ಮೂಲಕ ಜೀವಾತ್ಮನನ್ನು ಪರಮಾತ್ಮನಲ್ಲಿ ಒಂದುಗೂಡಿಸುವ ಯೋಗವೇ ರಾಜಯೋಗ.ರಾಜಯೋಗಕ್ಕೆ ಮುಖ್ಯವಾದ ಆಧಾರ ಗ್ರಂಥವು ಪಾತಂಜಲ ಯೋಗ ಸೂತ್ರವಾಗಿದೆ. ಆದುದರಿಂದ ಇದಕ್ಕೆ ಪಾತಂಜಲಯೋಗ ಎಂದೂ ಹೆಸರಿದೆ.ಯೋಗ ಎಂದರೆ ಚಿತ್ತವೃತ್ತಿಗಳನ್ನು ದೂರ ಮಾಡುವುದು.ಮನಸ್ಸಿನ ಬಾಹ್ಯವಾದ ವಿವಿಧ ವೃತ್ತಿಗಳನ್ನು ನಿರೋಧಮಾಡಿದಾಗ ಮನಸ್ಸು ಅಂತರ್ಮುಖಿಯಾಗಿ ಶುದ್ಢವಾಗುತ್ತದೆ.ಶುದ್ಧ ಮನಸ್ಸಿನಲ್ಲಿ ಏಕಾಗ್ರತೆಯ ಶಕ್ತಿ ಪೂರ್ಣವಾಗಿದ್ದು,ಇದರಿಂದ ಆತ್ಮ ಸಾಕ್ಷಾತ್ಕಾರ ಸಾದ್ಯವಾಗುತ್ತದೆ ಎಂದು ರಾಜಯೋಗದ ನಿಲುವು.[೧]
ರಾಜಯೋಗದ ಸಾಧನಾ ಸೋಪಾನಗಳು
[ಬದಲಾಯಿಸಿ]ರಾಜಯೋಗದ ಸಾಧನೆಗೆ ಎಂಟು ವಿಧದ ಮೆಟ್ಟಿಲುಗಳನ್ನು ಹೇಳಿದ್ದಾರೆ.ಇದನ್ನು ಅಷ್ಟಾಂಗ ಸೋಪಾನಗಳು ಎಂದು ಹೇಳುತ್ತಾರೆ.೧) ಯಮ ೨) ನಿಯಮ ೩) ಆಸನ ೪) ಪ್ರಾಣಾಯಾಮ ೫) ಪ್ರತ್ಯಾಹಾರ ೬) ಧಾರಣಾ ೭) ಧ್ಯಾನ ೮) ಸಮಾಧಿ
ಯೋಗ ದರ್ಶನ - ರಾಜಯೋಗ
[ಬದಲಾಯಿಸಿ]- ಯೋಗ ದರ್ಶನ2 ಅಥವಾ ರಾಜಯೋಗ-ಯೋಗ- ಪಾತಂಜಲ ಯೋಗ (ಪತಂಜಲ ಮುನಿಯ ಯೋಗ ದರ್ಶನ )
ಯೋಗ ಮತ್ತು ಸೃಷ್ಟಿ
ಯೋಗ
[ಬದಲಾಯಿಸಿ]ಸಾಂಖ್ಯ ಮತ್ತು ಯೋಗ ದರ್ಶನಗಳಲ್ಲಿ ಸೃಷ್ಟಿ ಅನಾದಿ ಮತ್ತು ಅನಂತ; ಎಂದರೆ ಆದಿ ಇಲ್ಲದ್ದು, ಅಂತ್ಯವಿಲ್ಲದ್ದು; ಅಥವಾ ಆದಿ ಅಂತ್ಯಗಳು ಮಾನವ ಬುದ್ಧಿ ಶಕ್ತಿಗೆ ನಿಲುಕದ್ದು. ಆದ್ದರಿಂದ ಅದು ಸೃಷ್ಟಿ ಹೇಗೆ ಆಯಿತೆಂಬ ವಿಚಾರಕ್ಕಿಂತ ಸೃಷ್ಟಿಯ ರಚನಾ ಕ್ರಮಕ್ಕೆ ಪ್ರಾಧಾನ್ಯತೆ ಕೊಟ್ಟಿದೆ. ಇದು ರಾಜಯೋಗ ವೆಂದು ಕರೆಯಲ್ಪಟ್ಟು ನಂತರ ಅದರಲ್ಲಿ ಹಠಯೋಗದ ಅನೇಕ ವಿಷಯಗಳನ್ನು ಅಳವಡಿಸಿಕೊಂಡಿದೆ ಅಥವಾ ಅವು ಎರಡಕ್ಕೂ ಅವು ಅನ್ವಯಿಸುತ್ತವೆ. ಪ್ರಕೃತಿಯ ಕುಂಡಲಿ ಶಕ್ತಿ; ಅದರಲ್ಲಿರುವ ಇಡಾ, ಪಿಂಗಳಾ, ಸುಷುಮ್ನಾ ನಾಡಿಗಳು, ಮೂಲಾಧಾರದಿಂದ ಸಹಸ್ರಾರದ ವರೆಗಿನ ಏಳು ಚಕ್ರಗಳು. ಇವೆಲ್ಲವೂ ಬ್ರಹ್ಮಾಂಡಕ್ಕೂ (ಸಮಷ್ಠಿ) ಮತ್ತು ಪಿಂಡಾಂಡ (ಒಂದು ಜೀವ -ವ್ಯಷ್ಠಿ) ಕ್ಕೂ ಸಮಾನವಾಗಿ ಅನ್ವಯಿಸುತ್ತವೆ.
ಅಂಕಣದಲ್ಲಿ -ರಾಜಯೋಗ
[ಬದಲಾಯಿಸಿ]ವ್ಯಷ್ಟಿ | ೨. ಸಮಷ್ಟಿ | ಟಿಪ್ಪಣಿ |
---|---|---|
೧. ವ್ಯಷ್ಟಿಯಲ್ಲಿ ಪುರುಷ (ಜೀವ) ಅದರಿಂದ
|
೨. ಸಮಷ್ಟಿಯಲ್ಲಿ ಮೇಲಿನ (ಉನ್ನತ) ತತ್ವಗಳು ಪರಮೇಶ್ವರ ↓- | ೩ ಪರಮೇಶ್ವರನು ಅಥವಾ ಈಶ್ವರನು ಕ್ಲೇಶ, ಕರ್ಮ,
ಆದರೆ ಸಾಧಕನಿಗೆ ಗುರುವಾಗಿ ಮಾರ್ಗದರ್ಶನ ಮಾಡಬಲ್ಲ. |
:: ವ್ಯಷ್ಟಿಯಲ್ಲಿ -ಮನುಷ್ಯನ ಬುದ್ಧಿ | : ಮೂಲ ಪ್ರಕೃತಿ (ಬುದ್ಧಿ)-ಚಿತ್ತ ↓- | ಜಗತ್ತಿನ ಉತ್ಪತ್ತಿಗೆ ಬೀಜ. ಅದರ ಗುಣ
ಸತ್ವ-ರಜ-ತಮ ಗಳು |
ಮಹತ್ತು- . | ಮಹತ್ | : - |
ಅಹಂಕಾರದೊಡನೆ ಸೇರಿ ವ್ಯಷ್ಠಿ:ಮನುಷ್ಯನಲ್ಲಿ ನಾನು | :-ಅಹಂಕಾರ | |
ಪಂಚ ತನ್ಮಾತ್ರೆಗಳಾದ
|
ಅಹಂಕಾರ-
|
:ತನ್ಮಾತ್ರೆಗಳು,- ೫;
|
:ಆದಿಯಲ್ಲಿ ಪಂಚ ತನ್ಮಾತ್ರೆ ಗಳು ಮತ್ತು ಪಂಚ ಭೂತಗಳು ಒಟ್ಟಿಗೆ ಸೃಷ್ಟಿಯಾದವು (ಮಹಾಭಾರತ -ಶಾಂತಿಪರ್ವ) | - | :ಪಂಚ ತನ್ಮಾತ್ರೆ ಗಳು: ಶಬ್ದ - ಸ್ಪರ್ಶ- ರೂಪ- ರಸ- ಗಂಧ
ಕಿವಿ -ಚರ್ಮ-ಕಣ್ಣು -ನಾಲಗೆ -ಮೂಗು) |
೩.ಬಾಯಿ (ಮುಖ); ೪.ಜನನೇಂದ್ರಿಯ; ೫,ಕಾಲುಗಳು |
ಕರ್ಮೇಂದ್ರಿಯಗಳು ತತ್ವಗಳಲ್ಲಿ ಸೇರಿಲ್ಲ | :ಕ್ರಿಯೆಗಳು:- ೧.ಗ್ರಹಣ
೨.ವಿಸರ್ಜನ,೩.ಮಾತು
|
ಮನಸ್ಸು + ಬುದ್ಧಿ + ಅಹಂಕಾರ
+ಚಿತ್ತ- ೪ (ಅಂತಃಕರಣ ಚತುಷ್ಟಯ) |
ಒಟ್ಟು ಸೃಷ್ಟಿ : ೨೪ತತ್ವ | ೨೪ ತತ್ವ +ಪುರುಷ ೨೫ +ಈಶ್ವರ ೨೬ |
ಇತಿಹಾಸ ಮತ್ತು ಸ್ಥೂಲ ಪರಿಚಯ
[ಬದಲಾಯಿಸಿ]- ಮೇಲೆ ತಿಳಿಸಿದಂತೆ ಯೋಗವು ಅತ್ಯಂತ ಪ್ರಾಚೀನವಾದ ಸಾಧನಾ ಪದ್ಧತಿ. ಜೈನ,ಬೌದ್ಧ ಧರ್ಮಗಳಲ್ಲಿಯೂ, ಯೋಗ ಸಾಧನೆಗೆ ಮಹತ್ವ ನೀಡಿದೆ. ಪತಂಜಲಿಯನ್ನು ಯೋಗ ದರ್ಶನದ ಪ್ರವರ್ತಕನೆಂದು ಹೇಳುತ್ತಾರೆ. ಪತಂಜಲಿಯ ಕಾಲ ಸುಮಾರು ಕ್ರಿ.ಪೂ, ೨ ನೆಯ ಶತಮಾನ. ಅವನು ಅದನ್ನು ಹಿರಣ್ಯಗರ್ಭನಿಂದ ಪಡೆದನೆಂದು ಹೇಳುತ್ತಾರೆ. ಅವನು ಯೋಗಸೂತ್ರವೆಂಬ ಗ್ರಂಥವನ್ನು ರಚಿಸಿದನು. ಯೋಗದರ್ಶನವು ಇತರ ದರ್ಶನಗಳಂತೆ ಜಿಜ್ಞಾಸಾ ಶಾಸ್ತ್ರವಲ್ಲ. ಇಲ್ಲಿ ತರ್ಕಕ್ಕೆ ಪ್ರಾಶಸ್ತ್ಯವಿಲ್ಲ; ಸಾಧನೆಯೇ ಮಹತ್ವದ್ದು. ಅಥ ಯೋಗಾನುಶಾಸನಮ್ ಎಂದು ಪ್ರಾರಂಭವಾಗುತ್ತದೆ.
- ಸಾಂಖ್ಯ ಮತ್ತು ಯೋಗಗಳದ್ದು ಒಂದು ಜೋಡಿ. ಸಾಂಖ್ಯದ ತತ್ವಗಳನ್ನು ಯೋಗ ಒಪ್ಪುತ್ತದೆ. ಸಾಂಖ್ಯರ ಪೃಕೃತಿ ಪುರುಷರ ವಿವೇಕ , ಜ್ಞಾನಕ್ಕೆ ದಾರಿದೀಪವೆಂಬ ಸಿದ್ಧಾಂತವನ್ನು ಯೋಗ ಒಪ್ಪುತ್ತದೆ.
- ಪ್ರತ್ಯಕ್ಷ, ಅನುಮಾನ, ಶಬ್ದ ವೆಂಬ ಪ್ರಮಾಣಗಳನ್ನೂ ಒಪ್ಪುತ್ತದೆ. ಇಪ್ಪತೈದು ತತ್ವಗಳನ್ನು ಸ್ವೀಕರಿಸಿ (ಚಿತ್ತವೂ ಸೇರಿ ) ಇಪ್ಪತ್ತಾರನೆಯ ತತ್ವವಾಗಿ ಈಶ್ವರನನ್ನು ಒಪ್ಪುತ್ತದೆ. ಆದ್ದರಿಂದ ಇದನ್ನು ಸೇಶ್ವರ ಸಾಂಖ್ಯವೆಂದೂ ಕರೆಯುತ್ತಾರೆ,
- ಯೋಗ ಸೂತ್ರದಲ್ಲಿ ನಾಲ್ಕು ಅಧ್ಯಾಯಗಳಿವೆ.
- ಮೊದಲನೆಯದು, ಸಮಾಧಿ ಪಾದ; -ಸಮಾಧಿಯ ರೂಪ, ಬೇಧಗಳು, ಚಿತ್ತದ ಚಿತ್ತವೃತ್ತಿಯ ವಿಚಾರ.
- ಎರಡನೆಯದು ಸಾಧನ ಪಾದ; - ಅಷ್ಟಾಂಗಯೋದ ವರ್ಣನೆ, ಈಶ್ವರ ಪ್ರಣಿಧಾನ, ಸ್ವಾಧ್ಯಾಯ ವಿಚಾರ.
- ಮೂರನೆಯ ಪಾದ ವಿಭೂತಿಪಾದ ; - ಯೋಗಾನಷ್ಠಾನದಿಂದ ದೊರೆಯುವ ಈಶ್ವರ್ಯ (ಫಲ)ದ ವಿಚಾರ.
- ನಾಲ್ಕನೆಯದು ಕೈವಲ್ಯಪಾದ; - ಕೈವಲ್ಯ ಪಾದದಲ್ಲಿ ಸಮಾಧಿ ಸಿದ್ಧಿ ಕೈವಲ್ಯಗಳ ವರ್ಣನೆ ಇದೆ.
- ಯೋಗ ಎಂಬ ಪದವು 'ಯುಜ್', ಎಂಬ ಧಾತು (ಕ್ರಿಯಾಪದದ ಮೂಲ ರೂಪ) ಅದಕ್ಕೆ , 'ಸೇರಿಸು', 'ಹೊಂದಿಸು', ಎಂಬ ಅರ್ಥ : ಆದರೆ ಇದರಲ್ಲಿ ಯೋಗವನ್ನು 'ಸಮಾಧಿ' ಎಂಬ ಅರ್ಥದಲ್ಲಿ ಬಳಸಿದೆ. (ಯೋಗಃ ಸಮಾಧಿಃ ) ಮನಸ್ಸನ್ನು ಏಕಾಗ್ರಗೊಳಿಸಿ ಸಿದ್ಧಿ ಸಮಾಧಿ ಪಡೆವ ಬಗೆ ಯೋಗದ ಗುರಿ.
ತಾತ್ವಿಕ ವಿಚಾರ ವಿವರಣೆ
[ಬದಲಾಯಿಸಿ]ಚಿತ್ತ
[ಬದಲಾಯಿಸಿ]- ಯೋಗಶ್ಚಿತ್ತವೃತ್ತಿ ನಿರೋಧಃ : ಯೋಗವೆಂದರೆ ಚಿತ್ತದ (ಮನಸ್ಸಿನ ಆಳವಾದ ಸ್ತರ) ವೃತ್ತಿಗಳನ್ನು -ಅಲೆಯುವ ಮನಸ್ಸನ್ನು , ನಿರೋಧ -ನಿಯಂತ್ರಿಸುವುದು. 'ಚಿತ್ತ',ವೆಂದರೆ -ಮನಸ್ಸು ,ಬುದ್ಧಿ, ಅಹಂಕಾರ ಇವುಗಳನ್ನು ಒಳಗೊಂಡಿದ್ದು. ಆದರೆ ಅವುಗಳ ಮೇಲಿನ ಸ್ತರ. ಇದು ಪ್ರಕೃತಿಯ ಪರಿಣಾಮ. ಸ್ವತಃ ಜಡ, ಸತ್ವಗುಣ ಪ್ರಧಾನ, ಅತ್ಯಂತ ಸೂಕ್ಷ್ಮವಾಗಿದ್ದು , ಅದರಲ್ಲಿ ಪುರುಷನ (ಜೀವದ) ಪ್ರತಿಬಿಂಬ ಮೂಡುತ್ತದೆ. ಅದರಿಂದ ಚಿತ್ತವು ಚೈತನ್ಯ ಶಾಲಿಯಾಗಿ (ಚೇತನ ರೂಪವಾಗಿ)) ತೋರುತ್ತದೆ . ವಸ್ತುವಿನ ಸಂಪರ್ಕ ಬಂದಾಗ, ಅದು (ಚಿತ್ತ) ವಸ್ತುವಿನ ಆಕಾರ ಪಡೆಯುತ್ತದೆ. ಇದಕ್ಕೆ ವೃತ್ತಿ ಎಂದು ಹೆಸರು. (ಮನಸ್ಸಿನಲ್ಲಿ ವಸ್ತುವಿನ ಆಕಾರ ಮೂಡುವುದು.) ಚೇತನ ಆ ಆಕಾರ ವನ್ನು ಬೆಳಗಿದಾಗ, ಅದು ಜ್ಞಾನ (ವಸ್ತುವಿನ ತಿಳುವಳಿಕೆ )ಎನಿಸುತ್ತದೆ. ಪುರುಷನು ನಿರ್ಲಿಪ್ತನಾದರೂ, ಚಿತ್ತದಲ್ಲಿ ಬೀಳುವ ಪ್ರತಿಬಿಂಬವೇ ತಾನೆಂದು ತಿಳಿಯುತ್ತಾನೆ. (ಚಿತ್ತವೇ ತಾನೆಂದು) (ಉದಾ: ಚಂದ್ರನು ನೀರಿನ ಅಲೆಗಳಲ್ಲಿ ಬಿಂಬಿಸಿದಾಗ ಅದು (ನೀರು) ಪ್ರಕಾಶಮಾನವಾಗಿ ಕಾಣುವಂತೆ.)ಪುರುಷನು ತಾನು ಬೇರೆಯೆಂದು ತಿಳಿದಾಗ , ಪ್ರಕೃತಿಯು ಅವನ ಮೇಲೆ ಯಾವ ಪರಿಣಾಮವನ್ನೂ , ಬೀರದು. ಅವನು ಮುಕ್ತನಾಗುತ್ತಾನೆ . ಈ ರೀತಿಯಾಗಿ ಚಿತ್ತದ ವೃತ್ತಿಗಳನ್ನು ನಿರೋಧಿಸುವುದೇ ಯೋಗ.
- ಚಿತ್ತದ ವೃತ್ತಿಗಳು : ಪ್ರಮಾಣ . ವಿಪರ್ಯಯ, ವಿಕಲ್ಪ, ನಿದ್ರಾ ಮತ್ತು ಸ್ಮೃತಿ. -ಇವು ಚಿತ್ತದ ವೃತ್ತಿಗಳು.
- ಪ್ರಮಾಣ: ಇದು ಜ್ಞಾನಕ್ಕೆ ಕಾರಣ. - ಪ್ರತ್ಯಕ್ಷ , ಅನುಮಾನ, ಶಬ್ದ, ಎಂದು ಮೂರು ಬಗೆ.
- ವಿಪರ್ಯಯ : ಮಿಥ್ಯಾ ಜ್ಞಾನ , : ಹಗ್ಗವನ್ನು ಹಾವೆಂದು ತಿಳಿಯುವುದು.
- ವಿಕಲ್ಪ : ಶಬ್ದವಿದೆ , ಆದರೆ ವಸ್ತುವಿಲ್ಲದ ಜ್ಞಾನ, -ಅಥವಾ ಅರ್ಥವಿಲ್ಲದ್ದು : ಮೊಲದ ಕೋಡು ; ಬಂಜೆಯ ಮಗ ಇತ್ಯಾದಿ.
- ನಿದ್ರೆ : ಅರಿವಿನ ಅಭಾವ.
- ಸ್ಮೃತಿ : ಅನುಭವಿಸಿದ ವಿಷಯವನ್ನು ಮರೆಯದೆ ಇರುವುದು.
- ಚಿತ್ತದ ಎಲ್ಲಾ ವ್ಯಾಪಾರಗಳೂ ಈ ಐದರಲ್ಲಿ ಅಂತರ್ಗತವಾಗಿದೆ.
- ಸಂಸ್ಕಾರ : ಚಿತ್ತದಲ್ಲಿ ಹುಟ್ಟಿದ ವಸ್ತುಗಳು ನಾಶವಾದರೂ, ಸೂಕ್ಷ್ಮ ರೂಪದಲ್ಲಿ ಉಳಿದಿರುತ್ತದೆ. ಅದಕ್ಕೆ ಸಂಸ್ಕಾರವೆಂದು ಹೆಸರು. ಅವು ಪುನಃ ವೃತ್ತಿಗಳಾಗಿ -ಸಂಸ್ಕಾರಗಳಾಗಿ, ಸುತ್ತುತ್ತಿರುತ್ತವೆ. ಆದ್ದರಿಂದ ಸಂಸ್ಕಾರ ನಾಶವೂ ಅಗತ್ಯ.
ಚಿತ್ತದ ಅವಸ್ಥೆಗಳು
[ಬದಲಾಯಿಸಿ]- ಚಿತ್ತದ ಅವಸ್ಥೆಗಳು :- ಐದು .
- ಕ್ಷಿಪ್ತ : ರಜೋಗುಣದಿಂದ ಚಂಚಲವಾಗುವುದು.
- ಮೂಢ : ತಮೋಗುಣದಿಂದ ವಿವೇಕ ಶೂನ್ಯವಾಗುವುದು . (ಕ್ರೋಧ)
- ವಿಕ್ಷಿಪ್ತ : ಸತ್ವಗುಣಾಧಿಕದಿಂದ, ಸುಖ ಶ್ರೇಯಸ್ಸಿಗೆ ಕಾರಣವಾಗುವುದು.
- ಏಕಾಗ್ರ : ಸತ್ವಗುಣವು ರಜೋಗುಣ ತಮೋಗುಣಗಳನ್ನು ಕೆಳಗೆ ತಳ್ಳಿ , ಏಕಾಗ್ರವಾಗುವುದು. ನಿರುದ್ಧ :
- ಸಮಸ್ತ ವೃತ್ತಿಗಳನ್ನೂತಡೆದು ನಿಲ್ಲಿಸಿದ ಅವಸ್ಥೆ. ಇಲ್ಲಿ ಸಂಸಾರವು ಮಾತ್ರ ಉಳಿದಿರುತ್ತೆ. ಸಮಾಧಿಗೆ ಕೊನೆಯ ಎರಡು ಅವಸ್ಥೆ ಉಪಯುಕ್ತ.
- ಕರ್ಮಗಳು : ಕರ್ಮಗಳು ನಾಲ್ಕು ಪ್ರಕಾರದವು , ಶುಕ್ಲ, ಕೃಷ್ಣ, ಶುಕ್ಲ ಕೃಷ್ಣ, ಅಶುಕ್ಲ-ಅಕೃಷ್ಣ,
- ಶುಕ್ಲ ಕರ್ಮ -ಪುಣ್ಯಕಾರ್ಯಗಳು .
- ಕೃಷ್ಣ ಕರ್ಮ- ಪಾಪ ಕಾರ್ಯಗಳು
- ಶುಕ್ಲಕೃಷ್ಣ -ಪಾಪ ಪುಣ್ಯ ಬೆರೆತಿರುವವು.
- ಅಶುಕ್ಲ ಅಕೃಷ್ಣ - ಸುಖವೂ ಇಲ್ಲ ದುಃಖವೂ ಇಲ್ಲದ ಕರ್ಮ. -ತತ್ವ ಚಿಂತನೆ ಧ್ಯಾನ ಇತ್ಯಾದಿ ಕರ್ಮಗಳು
- ಕ್ಲೇಶಗಳು : ಅಸ್ಮಿತಾ : (ಕ್ಲೇಶ -ದುಃಖ) ಆತ್ಮ ಅನಾತ್ಮ ಭೇಧ ತಿಳಿಯದೆ, ನಾನು- ನನ್ನದು ಎಂಬ ಭಾವ ತಳೆಯುವುದು. ಅದರಿಂದ ರಾಗ (ಆಶೆ), - ರಾಗದಿಂದ ,ದ್ವೇಷ -ದ್ವೇಷದಿಂದ ಅಭಿನಿವೇಶ (ಬಾಳಬೇಕೆಂಬ ಆಗ್ರಹ), ಜರಾ ವ್ಮರಣಗಳ ಭಯ ; ಈ ಐದೂ ಕ್ಲೇಷಗಳು ಜನ್ಮ ಜನ್ಮಾಂತರದಿಂದ ಹಿಂಬಾಲಿಸುತ್ತವೆ. ಇವು ಹುಟ್ಟದಂತೆ ತಡೆಯಲು , ಇದ್ದ ಕರ್ಮಗಳನ್ನು ನಾಶಮಾಡಲು. ಯೋಗ ಸಾಧನೆಯಿಂದ ಸಾಧ್ಯ.
ಅಷ್ಟಾಂಗ ಯೋಗ
[ಬದಲಾಯಿಸಿ]- ಯಮ , ನಿಯಮ , ಆಸನ , ಪ್ರಾಣಾಯಾಮ , ಪ್ರತ್ಯಾಹಾರ , ಧಾರಣಾ , ಧ್ಯಾನ , ಸಮಾಧಿ, ಇವು ಎಂಟು .
- ಯಮ : ಇವು ಐದು ; ಯಮ ನಿಯಮಸ್ತುಮಾಲಾಃ- ಸೂತ್ರ. ಕೆಟ್ಟ ಪ್ರವೃತ್ತಿಗಳನ್ನುತಡೆಯುವುದು -ಯಮ ಇದು ಅಹಿಂಸೆ, ಸತ್ಯ, ಆಸ್ತೇಯ (ಕದಿಯದಿರುವುದು) , ಬ್ರಹ್ಮಚರ್ಯ, ಅಪರಿಗ್ರಹ (ಬೇರೆಯವರಿಂದ ಅನಾವಶ್ಯಕ ವಸ್ತುಗಳನ್ನು ಪಡೆಯದಿರುವುದು.
- ನಿಯಮ : ಆತ್ಮ ಶಿಕ್ಷಣ, ಶೌಚ (ಶುಚಿ), ಸಂತೋಷ , ತಪಸ್ಸು, ಸ್ವಾಧ್ಯಾಯ, ಈಶ್ವರ ಪ್ರಣಿದಾನ.
- ಶೌಚ - ಕಾಯಾ, ವಾಚಾ,ಮನಸಾ, ಶುದ್ಧತೆ ;
- ಸಂತೋಷ _ ಇರುವುದರಲ್ಲೇ ತೃಪ್ತಿ.
- ತಪಸ್ಸು - ಸುಖದುಃಖಗಳನ್ನು ಸಮನಾಗಿಸಹಿಸುವುದು.
- ಸ್ವಾಧ್ಯಾಯ - ಶಾಸ್ತ್ರದ ಅಧ್ಯಯನ ; ಈಶ್ವರ ಪ್ರಣಿದಾನ ಈಶ್ವರನಲ್ಲಿ ಸರ್ವಸಮರ್ಪಣೆ.
- ಆಸನ : ಸ್ಥಿರ ಸುಖಾಸನಮ್, ಸೂತ್ರ. ಸುಖಕರವಾದ ಆಸನದಲ್ಲಿ ಬಹಳಕಾಲ ಸ್ಥಿರವಾಗಿ ಇರುವುದು.
- ಪ್ರಾಣಾಯಾಮ : ಶ್ವಾಸ ಪ್ರಶ್ವಾಸ ಕ್ರಿಯೆಗಳನ್ನು ನಿಲ್ಲಿಸುವುದು. ಇದು ಏಕಾಗ್ರತೆಗೆ ಸಹಕಾರಿ.
- ಪ್ರತ್ಯಾಹಾರ : ಹೊರಮುಖವಾದ ಇಂದ್ರಿಯಗಳನ್ನು ತಡೆಯುವುದು-ಇಂದ್ರಿಯಗಳನ್ನು ಅಂತರ್ಮುಖಿಯಾಗಿಸುವುದು.
- ಧಾರಣಾ : ಅಂತರಂಗದ ಯಾವುದಾದರೂ ಒಂದುವಸ್ತುವಿನ ಮೇಲೆ ಚಿತ್ತವನ್ನು ಕೇಂದ್ರೀಕರಿಸುವುದು. (ನಾಭಿ , ಹೃದಯ-ಇತ್ಯಾದಿ)
- ಧ್ಯಾನ : ತತ್ರ ಪತ್ಯಯೈಕ ತಾನತಾ ಧ್ಯಾನಂ ಸೂತ್ರ. -ಧ್ಯಾನಿಸಬೇಕಾದ ವಸ್ತುವನ್ನು ಏಕಾಗ್ರ ಚಿತ್ತದಿಂದ ದ್ಯಾನಿಸುವುದು.
- ಸಮಾಧಿ : ಚಿತ್ತದ ಏಕಾಗ್ರತೆಯ ಕೊನೆಯ ಹಂತ . (ಚಿತ್ತ) ಮನಸ್ಸು ಧ್ಯಾನಿಸುವ ವಸ್ತುವಿನಲ್ಲಿ ಲೀನವಾಗಿಬಿಡುತ್ತದೆ. ಹೊರ ಜಗತ್ತಿನ ಅರಿವು ಮಾಯವಾಗುತ್ತದೆ.
- ಸಂಪ್ರಜ್ಞಾನ ಸಮಾಧಿ : ಧ್ಯಾನಿಸುವ ವಸ್ತುವಿನ (ಧ್ಯೇಯ) ಅವಲಂಬನೆ ಇರುತ್ತದೆ .
- ಅಸಂಪ್ರಜ್ಞಾನ ಸಮಾಧಿ : ಚಿತ್ತದ ಸಂಬಂಧವೂ ಕಡಿದು ಹೋಗುವುದು. - ನಿರ್ಬೀಜ , ನಿರಾಲಂಬ ಸಮಾಧಿ . ಏನೂ ಇರದ ಸ್ಥಿತಿ. (ಇದ್ದೇನೆ ಎನ್ನುವ ಭಾವ ಎಚ್ಚರಾದಾಗ ಮಾತ್ರ) ಅಣಿಮಾದಿ ಅಷ್ಟ ಸಿದ್ಧಿಗಳು ಬಂದರೂ ಉಪಯೋಗಿಸದೆ ಮುಂದುವರೆದರೆ - ಕೈವಲ್ಯ ಸಿದ್ಧಿ .
ಈಶ್ವರ
[ಬದಲಾಯಿಸಿ]- ಯೋಗ ದರ್ಶನವು ಈಶ್ವರನನ್ನು ಒಪ್ಪುತ್ತದೆ. -
- ಕಾರಣಗಳು :-
- ವೇದಗಳು ಈಶ್ವರನ ಅಸ್ತಿತ್ವವನ್ನು ಒಪ್ಪುತ್ತವೆ. ಶಬ್ದ ಪ್ರಮಾಣವಿದೆ (ಆಪ್ತವಾಕ್ಯ) ;ಆದ್ದರಿಂದ ಸೃಷ್ಟಿ ಕರ್ತನಾದ ಈಶ್ವರನನ್ನು ಒಪ್ಪಬೇಕು.
- :ಅನುಮಾನ ಪ್ರಮಾಣದಿಂದಲೂ ಈಶ್ವರನನ್ನು ಒಪ್ಪಬೇಕು. ನ್ಯೂನ ಹಾಗೂ ಅಧಿಕವಾದ ವಸ್ತುಗಳಿಗೆ ಪ್ರತಿಯಾಗಿ ಉಚ್ಛತಮ ಗುಂಪೊಂದಿದೆ ; ಮೂಲವನ್ನು ಹುಡುಕುತ್ತಾ ಹೋದರೆ -ಈಶ್ವರನೇ ಎಲ್ಲಾ ಜ್ಞಾನಗಳ ಮೂಲ ಎಂಬುದನ್ನು ತಲುಪಬಹುದು.
- :ಪ್ರಕೃತಿ-ಪುರುಷರ ಸಂಯೋಗ ವಿಯೋಗಗಳಿಗೆ ಕಾರಣ(ಒ)ವೊಂದು ಬೇಕು ; ಆಕಾರಣವೇ ಈಶ್ವರ.
ಪತಂಜಲಿ-ಈಶ್ವರ
[ಬದಲಾಯಿಸಿ]- ಈಶ್ವರನು ಕ್ಲೇಶ, ಕರ್ಮ, ವಿಪಾಕ (ಕರ್ಮಫಲ), ಆಶಯ (ಸಂಸ್ಕಾರ) ಗಳಿಲ್ಲದವನು. ಮುಕ್ತರಿಗಿಂತ ಬೇರೆ. ದೇಶಕಾಲಗಳನ್ನು ಮೀರಿದವನು. ಸರ್ವಜ್ಞ , ಸರ್ವಶಕ್ತ , ಸರ್ವವ್ಯಾಪಿ, ಪರಿಪೂರ್ಣ, ಜ್ಞಾನ ಸ್ವರೂಪಿ, ಗುರು, ವೇದಗಳನ್ನು ಉಪದೇಶಿಸಿದವನು. ಓಂ- ಅವನ ಸಂಕೇತ. ಈಶ್ವರ ನು ಪ್ರಪಂಚದ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣನಲ್ಲ ; ವಿಶೇಷ ಪುರುಷ ; ಆತ್ಮಗಳನ್ನು ಶಿಕ್ಷಿಸುವುದಿಲ್ಲ ; ಮುಕ್ತಿಯನ್ನೂ ಅವನು ಕೊಡಲಾರ ; ಕಷ್ಟನಿವಾರಣೆ ಮಾಡುವ ಗುರುವಾಗಿ ಮಾರ್ಗದರ್ಶನ ಮಾಡಬಲ್ಲ. ಪುರುಷನು ಸ್ವಪ್ರಯತ್ನದಿಂದ ಸಾಧಿಸಬೇಕಾದುದು -ಮೋಕ್ಷ. ಅವನು ಸಹಕರಿಸುತ್ತಾನೆ ಅಷ್ಟೆ.
ಉಪಸಂಹಾರ-ಸಮೀಕ್ಷೆ
[ಬದಲಾಯಿಸಿ]- ಇದು ದರ್ಶನವಲ್ಲ ; ಅಣಿಮಾದಿ ಅಷ್ಟ ಸಿದ್ಧಿಗಳು ವ್ಶೆಜ್ಞಾನಿಕವಲ್ಲ-ಇದು ಮಾಟ -ಮಾಯಾಜಾಲಗಳ ಪ್ರಾಚೀನವಾದ ಪದ್ಧತಿಯ ಅವಶೇಷವೆಂದು ಆಧುನಿಕ ವಿಚಾರವಾದಿಗಳು ಆಕ್ಷೇಪ ಮಾಡುತ್ತಾರೆ.
- ಆದರೆ ಮನಸ್ಸಿನ (ಚಿತ್ತದ) ಆಳವನ್ನು ಅಭ್ಯಸಿಸಿ, ಅದರ ನಿಗೂಢ ರಹಸ್ಯವನ್ನು ತಿಳಿಸುವ ಪ್ರಯತ್ನ ವ್ಶೆಜ್ಞಾನಿಕವಾಗಿದ್ದು , ಪ್ರಜ್ಞೆಯ ಆಳದಲ್ಲಿರುವ ಅಪಾರ ಶಕ್ತಿ ಸಾವ್ಮರ್ಥ್ಯಗಳನ್ನು ರಾಜಯೋಗವು ತೋರಿಸಿದೆ. ಆತ್ಮ ಶೋಧನೆ, - ಮುಕ್ತಿಗೆ ಸರಳ ಸಾಧನಗಳನ್ನು ಮನೋವೈಜ್ಞಾನಿಕ ರೀತಿಯಲ್ಲಿ ನಿರೂಪಿಸಿದೆ. ಇದನ್ನು ಅನುಸರಿಸಿ ಯಶಸ್ಸು ಗಳಿಸಿದವರು ಇದರ ಸತ್ಯತೆಗೆ ಸಾಕ್ಷಿಯಾಗಿದ್ದಾರೆ.
- ಅಷ್ಟಾಂಗಯೋಗವು ಮಹತ್ವ ಪಡೆದಿದ್ದು, ಇಂದಿಗೂ ಅನೇಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಯಶಸ್ವಿಯಾಗಿದೆ. ಜೈನ ಬೌದ್ಧ ಧರ್ಮಗಳಾದಿಯಾಗಿ , ಎಲ್ಲಾ ದರ್ಶನಗಳೂ ಇದರ ಉಪಯೋಗ ಪಡೆದುಕೊಂಡಿದ್ದರಿಂದ ಇದು ರಾಜಯೋಗ -ಎಂಬ ಹೆಸರು ಪಡೆದಿದೆ. ಆರೋಗ್ಯ ಕ್ಷೇತ್ರದಲ್ಲಿಯೂ ಇದರ ಪ್ರಯೋಗಗಳು ಈಗಲೂ ಜಗತ್ತಿನಾದ್ಯಂತ ನಡೆಯುತ್ತಿದೆ.
- ಓಂ ತತ್ಸತ್
ನೋಡಿ
[ಬದಲಾಯಿಸಿ]ಚಾರ್ವಾಕ ದರ್ಶನ ;ಜೈನ ಧರ್ಮ- ಜೈನ ದರ್ಶನ ;ಬೌದ್ಧ ಧರ್ಮ ;ಸಾಂಖ್ಯ-ಸಾಂಖ್ಯ ದರ್ಶನ ;(ಯೋಗ)->ರಾಜಯೋಗ ;ನ್ಯಾಯ ದರ್ಶನ ;ವೈಶೇಷಿಕ ದರ್ಶನ;;ಮೀಮಾಂಸ ದರ್ಶನ - ;ವೇದಾಂತ ದರ್ಶನ / ಉತ್ತರ ಮೀಮಾಂಸಾ ;ಅದ್ವೈತ ;ಆದಿ ಶಂಕರರು ಮತ್ತು ಅದ್ವೈತ ;ವಿಶಿಷ್ಟಾದ್ವೈತ ದರ್ಶನ ;ದ್ವೈತ ದರ್ಶನ - ಮಾಧ್ವ ಸಿದ್ಧಾಂತ ;ಪಂಚ ಕೋಶ--ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ;ವೀರಶೈವ;ಬಸವಣ್ಣ;ಭಾರತೀಯ ತತ್ವಶಾಸ್ತ್ರ ಸಮೀಕ್ಷೆ;ಭಗವದ್ಗೀತಾ ತಾತ್ಪರ್ಯ ;ಕರ್ಮ ಸಿದ್ಧಾಂತ ;ಗೀತೆ;.ಭಾರತೀಯ ತತ್ವಶಾಸ್ತ್ರ ಸಮೀಕ್ಷೆವೇದಗಳು--ಕರ್ಮ ಸಿದ್ಧಾಂತ--ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರುಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು-ಅಸ್ತಿತ್ವ-ಸತ್ಯವೇ-ಮಿಥ್ಯವೇ -ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ-ಮೋಕ್ಷ-ಭಾರತೀಯ ತತ್ತ್ವಶಾಸ್ತ್ರದಲ್ಲಿ ಮೋಕ್ಷ
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- http://www.dlshq.org/download/hinduismbk.htm#_VPID_68
- 13 ವರ್ಷಗಳಿಂದ ಆಹಾರ, ನೀರು ಸೇವಿಸದೆ ಗಾಳಿ ಮಾತ್ರ ಸೇವಿಸಿ ಬದುಕುತ್ತಿರುವ ರಷ್ಯಾದ ಯೋಗಿ ವಿಕ್ಟರ್ ಟ್ರುವಿಯಾನೋ- ದಾವಣಗೆರೆಯಲ್ಲಿ ಕೇಂದ್ರಬಿಂದು (ಆದರೆ ಇದು ಯೋಗವಲ್ಲ ಪ್ರಕೃತಿಯ ವಿಚಿತ್ರ))
- VICTOR TRUVIANO-Talks on Breatharianism and the BabaJi State;by Victor Truviano July, 2015
ಉಲ್ಲೇಖಗಳು
[ಬದಲಾಯಿಸಿ]1. ಹಿಂದೂಧರ್ಮದ ಪರಿಚಯ: ಏದುರ್ಕಳ ಶಂಕರನಾರಾಯಣ ಭಟ್
2. ಭಾರತೀಯ ತತ್ವ ಶಾಸ್ತ್ರ ಪರಿಚಯ :- ಎಂ. ಪ್ರಭಾಕರ ಜೋಷಿ & ಪ್ರೊ.ಎಂ.ಎ.ಹೆಗಡೆ ಎಚ್.ಒ.ಡಿ ಸಂಸ್ಕೃತ -ಎಂ.ಜಿ.ಸಿ. ಕಾಲೇಜು ಸಿದ್ದಾಪುರ ಕಾರವಾರ ಜಿಲ್ಲೆ. (ಕಾಪಿ ರೈಟಿನಿಂದ ಮುಕ್ತವಾಗಿದೆ)ಪ್ರಕಾಶಕರು :ದಿಗಂತ ಸಾಹಿತ್ಯ ಯೆಯ್ಯಾಡಿ ಮಂಗಳೂರು